ಅಬುಧಾಬಿ (ಅ. 28): ಐಪಿಎಲ್ನಲ್ಲಿ ಇಂದು ನಡೆಯಲಿರುವ 48ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗುತ್ತಿವೆ. ಪ್ಲೇ ಆಫ್ ಸಮೀಪದಲ್ಲಿರುವ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಗೆಲುವು ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ. ಇಲ್ಲಿನ ಶೇಕ್ ಝಯೇದ್ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಉಭಯ ತಂಡಗಳು ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿವೆ. ಅಂಕಪಟ್ಟಿಯಲ್ಲಿ ಕ್ರಮವಾಗಿ ಮುಂಬೈ ಟಾಪ್ 1 ಹಾಗೂ ಆರ್ಸಿಬಿ ಟಾಪ್ 2 ಸ್ಥಾನದಲ್ಲಿವೆ. ಪ್ಲೇ-ಆಫ್ ಖಾತ್ರಿ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಮ್ಯಾಚ್ ಮಹತ್ವದ್ದಾಗಿದೆ.
ಕನ್ನಡಿಗರಿಂದಲೇ ಕೂಡಿರುವ KXIP ಲೋಗೋದಲ್ಲಿದೆ ಯಾರಿಗೂ ತಿಳಿದಿರದ ರಹಸ್ಯ: ಕೇಳಿದ್ರೆ ಶಾಕ್ ಆಗ್ತೀರಾ!
ಅಂತಿಮ ಹಂತದಲ್ಲಿ ಸೋಲು- ಗೆಲುವಿನ ಮೇಲೆ ಕಾಲಿಡುತ್ತಾ ಸಾಗುತ್ತಿರುವ ಆರ್ಸಿಬಿಗೆ ಇದು ಪ್ರಮುಖ ಪಂದ್ಯ. ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಹ್ಲಿ ಹುಡುಗರ ಪ್ರದರ್ಶನ ತೀರ ಕಳಪೆಯಿಂದ ಕೂಡಿತ್ತು. ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಮತ್ತೆ ಎಡವುತ್ತಿದೆ. ಆ್ಯರೋನ್ ಫಿಂಚ್ ಬ್ಯಾಟ್ ಸಿಡಿಯುತ್ತಿಲ್ಲ. ಎಬಿ ಡಿವಿಲಿಯರ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಕೊಹ್ಲಿ, ಎಬಿಡಿ ನಿರ್ಗಮನದ ಬಳಿಕ ಪಂದ್ಯವನ್ನು ಫಿನಿಶ್ ಮಾಡುವ ಹೊಣೆಯನ್ನು ಯಾರೂ ಹೊರುತ್ತಿಲ್ಲ. ಮೊಯೀನ್ ಅಲಿ ಕೂಡ ವೈಫಲ್ಯ ಅನುಭವಿಸುತ್ತಿದ್ದಾರೆ.
ಬೌಲಿಂಗ್ ವಿಭಾಗವೂ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ. ನವ್ದೀಪ್ ಸೈನಿ ಇಂಜುರಿಗೆ ತುತ್ತಾಗಿದ್ದು ಇಂದಿನ ಪಂದ್ಯಕ್ಕೆ ಲಭ್ಯರಿದ್ದಾರೆಯೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬರಬರುತ್ತಾ ಬೌಲರ್ಗಳು ಕೂಡ ದುಬಾರಿ ಆಗುತ್ತಿದ್ದಾರೆ. ಕ್ರಿಸ್ ಮೊರೀಸ್ ಕೂಡ ರನ್ ಹರಿಯ ಬಿಡುತ್ತಿದ್ದಾರೆ. ಆರ್ಸಿಬಿ ಸ್ಪಿನ್ನಿಂಗ್ ವಿಭಾಗ ಮಾತ್ರ ಚೆನ್ನಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಬದಲಾವಣೆ ನಿರೀಕ್ಷೆಯಿದೆ.
IPL 2020: ಈ ಬಾರಿಯ ಐಪಿಎಲ್ನಲ್ಲಿ ನಡೆದಿದೆ ಯಾರೂ ಊಹಿಸಲಾಗದ ಘಟನೆ: ಏನದು ಗೊತ್ತೇ?
ಇತ್ತ ಅಗ್ರಸ್ಥಾನದಲ್ಲಿರುವ ಮುಂಬೈ ಭರ್ಜರಿ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಉತ್ತಮ ರನ್ ಕಲೆಹಾಕಿದ್ದರೂ ಆರ್ಆರ್ ವಿರುದ್ಧ ಸೋಲುಂಡಿತ್ತು. ಬೌಲರ್ಗಳು ಎದುರಾಳಿಗರನ್ನು ಕಟ್ಟಿಹಾಕುವಲ್ಲಿ ಎಡವಿದ್ದರು. ಆದರೆ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ ರಂತಹ ವಿಶ್ವ ಶ್ರೇಷ್ಠ ಬೌಲರ್ಗಳಿರುವ ಕಾರಣ ಕಡೆಗಣಿಸುವಂತಿಲ್ಲ.
ಬ್ಯಾಟಿಂಗ್ ವಿಭಾಗದಲ್ಲಿ ಮುಂಬೈ ತಂಡವನ್ನು ಮೀರಿಸುವುದು ಕಷ್ಟ. ರೋಹಿತ್ ಶರ್ಮಾ ಇಂಜುರಿಯಿಂದ ಬಳಲುತ್ತಿದ್ದು, ಗುಣಮುಖರಾದಲ್ಲಿ ಇಂದು ಕಣಕ್ಕಿಳಿಯುವ ಅಂದಾಜಿದೆ. ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದರು. ಡಿಕಾಕ್, ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 18 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ