ಅಬುಧಾಬಿ (ಅ. 28): ಇಲ್ಲಿನ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಧಾರಣ ಮೊತ್ತ ಕಲೆಹಾಕಿದೆಯಷ್ಟೆ. ದೇವದತ್ ಪಡಿಕ್ಕಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕೊಹ್ಲಿ ಪಡೆ 20 ಓವರ್ಗಳಲ್ಲಿ 164 ರನ್ ಗಳಿಸಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಜೋಷ್ ಫಿಲಿಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 71 ರನ್ಗಳ ಕಾಣಿಕೆ ನೀಡಿತು.
ಚೆನ್ನಾಗಿಯೆ ಆಡುತ್ತಿದ್ದ ಫಿಲಿಪ್ ಅನಗತ್ಯವಾಗಿ ಸ್ಟಂಪ್ಔಟ್ಗೆ ಬಲಿಯಾದರು. 24 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ(9) ಈ ಬಾರಿ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಈ ನಡುವೆ ಪಡಿಕ್ಕಲ್ ಐಪಿಎಲ್ನಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 3ನೇ ವಿಕೆಟ್ಗೆ ಎಬಿ ಡಿವಿಲಿಯರ್ಸ್ ಜೊತೆಯಾದ ಪಡಿಕ್ಕಲ್ ಒಂದಿಷ್ಟು ರನ್ ಕಲೆಹಾಕಿದರು. ಆದರೆ ಎಬಿಡಿ(15) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.
ಶಿವಂ ದುಬೆ ಆಟ 2 ರನ್ಗೆ ಅಂತ್ಯವಾಯಿತು. ಫಿನಿಶ್ ಮಾಡುವಲ್ಲಿ ಎಡವಿದ ಪಡಿಕ್ಕಲ್ 45 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಿಡಿಸಿ 74 ರನ್ಗೆ ಔಟ್ ಆದರು. ಕ್ರಿಸ್ ಮೊರೀಸ್ ಬಂದ ಬೆನ್ನಲ್ಲೆ ಒಂದು ಬೌಂಡರಿ ಬಾರಿಸಿ ನಿರ್ಗಮಿಸಿದರು.
131 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ 138 ರನ್ ಆಗುವ ಹೊತ್ತಿಗೆ 6 ವಿಕೆಟ್ ಪತನಗೊಂಡಿತು.
ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರೆ, ರಾಹುಲ್ ಚಹಾರ್, ಕೀರೊನ್ ಪೊಲಾರ್ಡ್ ಹಾಗೂ ಟ್ರೆಂಟ್ ಬೌಲ್ಟ್ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್(ವಿ.ಕೀ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್ (ನಾಯಕ), ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೇಮ್ಸ್ ಪಾಟಿನ್ಸನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಷ್ ಫಿಲಿಪ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಗುರುಕೀರತ್ ಮನ್ ಸಿಂಗ್, ಶಿವಂ ದುಬೆ, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಡೇಲ್ ಸ್ಟೈನ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.