ಅಬುಧಾಬಿ (ಅ. 28): ಇಲ್ಲಿನ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 48ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗುತ್ತಿವೆ. ಪ್ಲೇ ಆಫ್ ಸಮೀಪದಲ್ಲಿರುವ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ.
ಸದ್ಯ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಜೋಷ್ ಫಿಲಿಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 71 ರನ್ಗಳ ಕಾಣಿಕೆ ನೀಡಿತು.
ಚೆನ್ನಾಗಿಯೆ ಆಡುತ್ತಿದ್ದ ಫಿಲಿಪ್ ಅನಗತ್ಯವಾಗಿ ಸ್ಟಂಪ್ಔಟ್ಗೆ ಬಲಿಯಾದರು. 24 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ(9) ಈ ಬಾರಿ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಈ ನಡುವೆ ಪಡಿಕ್ಕಲ್ ಐಪಿಎಲ್ನಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 3ನೇ ವಿಕೆಟ್ಗೆ ಎಬಿ ಡಿವಿಲಿಯರ್ಸ್ ಜೊತೆಯಾದ ಪಡಿಕ್ಕಲ್ ಒಂದಿಷ್ಟು ರನ್ ಕಲೆಹಾಕಿದರು. ಆದರೆ ಎಬಿಡಿ(15) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.
ಇಂದಿನ ಪಂದ್ಯಕ್ಕೆ ಮುಂಬೈ ಖಾಯಂ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಗುಣಮುಖರಾಗಾದ ಕಾರಣ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುತ್ತಿಲ್ಲ. ಕೀರೊನ್ ಪೊಲಾರ್ಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಮುಂಬೈ ಇಂಡಿಯನ್ಸ್: ಕ್ವಿಂಟನ್
ಡಿ ಕಾಕ್(
ವಿ.
ಕೀ),
ಇಶಾನ್ ಕಿಶನ್, ಸೂರ್ಯಕುಮಾರ್
ಯಾದವ್
, ಸೌರಭ್ ತಿವಾರಿ, ಕೀರನ್
ಪೊಲಾರ್ಡ್ (
ನಾಯಕ),
ಹಾರ್ದಿಕ್
ಪಾಂಡ್ಯ,
ಕ್ರುನಾಲ್
ಪಾಂಡ್ಯ,
ರಾಹುಲ್
ಚಹರ್,
ಜಸ್ಪ್ರೀತ್ ಬುಮ್ರಾ,
ಟ್ರೆಂಟ್
ಬೌಲ್ಟ್,
ಜೇಮ್ಸ್ ಪಾಟಿನ್ಸನ್.
ಇತ್ತ ಆರ್ಸಿಬಿ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು ಗಾಯಗೊಂಡಿರುವ ನವ್ದೀಪ್ ಸೈನಿ ಬದಲು ಶಿವಂ ದುಬೆ, ಮೊಯೀನ್ ಅಲಿ ಬದಲು ಡೇಲ್ ಸ್ಟೈನ್ ಮತ್ತು ಆ್ಯರೋನ್ ಫಿಂಚ್ ಬದಲು ಜೋಷ್ ಫಿಲಿಪ್ ಕಣಕ್ಕಿಳಿಯುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಷ್ ಫಿಲಿಪ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಗುರುಕೀರತ್ ಮನ್ ಸಿಂಗ್, ಶಿವಂ ದುಬೆ, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಡೇಲ್ ಸ್ಟೈನ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.
ಉಭಯ ತಂಡಗಳು ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿವೆ. ಅಂಕಪಟ್ಟಿಯಲ್ಲಿ ಕ್ರಮವಾಗಿ ಮುಂಬೈ ಟಾಪ್ 1 ಹಾಗೂ ಆರ್ಸಿಬಿ ಟಾಪ್ 2 ಸ್ಥಾನದಲ್ಲಿವೆ. ಪ್ಲೇ-ಆಫ್ ಖಾತ್ರಿ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಮ್ಯಾಚ್ ಮಹತ್ವದ್ದಾಗಿದೆ.
ಅಂತಿಮ ಹಂತದಲ್ಲಿ ಸೋಲು- ಗೆಲುವಿನ ಮೇಲೆ ಕಾಲಿಡುತ್ತಾ ಸಾಗುತ್ತಿರುವ ಆರ್ಸಿಬಿಗೆ ಇದು ಪ್ರಮುಖ ಪಂದ್ಯ. ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಹ್ಲಿ ಹುಡುಗರ ಪ್ರದರ್ಶನ ತೀರ ಕಳಪೆಯಿಂದ ಕೂಡಿತ್ತು. ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಮತ್ತೆ ಎಡವುತ್ತಿದೆ. ಆ್ಯರೋನ್ ಫಿಂಚ್ ಬ್ಯಾಟ್ ಸಿಡಿಯುತ್ತಿಲ್ಲ. ಎಬಿ ಡಿವಿಲಿಯರ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ.
ಇತ್ತ ಅಗ್ರಸ್ಥಾನದಲ್ಲಿರುವ ಮುಂಬೈ ಭರ್ಜರಿ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಉತ್ತಮ ರನ್ ಕಲೆಹಾಕಿದ್ದರೂ ಆರ್ಆರ್ ವಿರುದ್ಧ ಸೋಲುಂಡಿತ್ತು. ಬೌಲರ್ಗಳು ಎದುರಾಳಿಗರನ್ನು ಕಟ್ಟಿಹಾಕುವಲ್ಲಿ ಎಡವಿದ್ದರು. ಆದರೆ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ ರಂತಹ ವಿಶ್ವ ಶ್ರೇಷ್ಠ ಬೌಲರ್ಗಳಿರುವ ಕಾರಣ ಕಡೆಗಣಿಸುವಂತಿಲ್ಲ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 16 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.