IPL

  • associate partner

MI vs RCB: ಮೈದಾನದಲ್ಲೇ ಆರ್​ಸಿಬಿ ಬೌಲರ್-ಹಾರ್ದಿಕ್ ನಡುವೆ ಜಗಳ: ಬೆರಳು ತೋರಿಸಿ ಪಾಂಡ್ಯ ವಾರ್ನಿಂಗ್

ಹಾರ್ದಿಕ್ ಪಾಂಡ್ಯ ಹಾಗೂ ಕ್ರಿಸ್ ಮೊರೀಸ್ ನಡುವೆ ಮಾತಿನ ಚಕಮಕಿ ನಡೆಯಿತು. ಹಾರ್ದಿಕ್ ಅವರು ಮೊರೀಸ್​ನ 4ನೇ ಎಸೆತದಲ್ಲಿ ಸಿಕ್ಸ್ ಬಾರಿಸಿದಾಗಲೇ ಇವರಿಬ್ಬರ ನಡುವೆ ಕಿಡಿ ಹತ್ತಿಕೊಂಡಿತ್ತು.

news18-kannada
Updated:October 29, 2020, 3:04 PM IST
MI vs RCB: ಮೈದಾನದಲ್ಲೇ ಆರ್​ಸಿಬಿ ಬೌಲರ್-ಹಾರ್ದಿಕ್ ನಡುವೆ ಜಗಳ: ಬೆರಳು ತೋರಿಸಿ ಪಾಂಡ್ಯ ವಾರ್ನಿಂಗ್
ಹಾರ್ದಿಕ್ ಪಾಂಡ್ಯ - ಕ್ರಿಸ್ ಮೊರೀಸ್.
  • Share this:
ಬುಧವಾರ ರಾತ್ರಿ ಅಬುಧಾಬಿಯಲ್ಲಿ ನಡೆದ ಐಪಿಎಲ್​ನ 48ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್​ನತ್ತ ದಾಪುಗಾಲಿಟ್ಟಿತು. ಜಸ್​ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ವೈಭವಕ್ಕೆ ತಲೆಬಾಗಿದ ವಿರಾಟ್ ಕೊಹ್ಲಿ ಪಡೆ ಹೀನಾಯ ಸೋಲುಕಂಡಿತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯವು ಎರಡೆರಡು ಜಗಳಗಳಿಗೂ ಸಾಕ್ಷಿಯಾಯಿತು.

ಆರ್​ಸಿಬಿ ನೀಡಿದ್ದ 165 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇನ್ನೇನು ಗೆಲುವು ಸಾಧಿಸುತ್ತೆ ಎಂಬೊತ್ತಿಗೆ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡಿತು. 19ನೇ ಓವರ್​ನ ಕ್ರಿಸ್ ಮೊರೀಸ್ 4ನೇ ಎಸೆತದಲ್ಲಿ ಪಾಂಡ್ಯ ಸ್ಫೋಟಕ ಸಿಕ್ಸ್​ ಸಿಡಿಸಿದರೆ, 5ನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್​ಗೆ ಕ್ಯಾಚಿತ್ತು ಔಟ್ ಆದರು.

Suryakumar Yadav: ವಿರಾಟ್​ ಕೊಹ್ಲಿಯಿಂದ ಸೂರ್ಯಕುಮಾರ್​ ಯಾದವ್ ನಿಂದನೆ ?; ಫೀಲ್ಡ್​ನಲ್ಲೇ ಉತ್ತರ ಕೊಟ್ಟ ಯುವ ಆಟಗಾರ

ಈ ಸಂದರ್ಭ ಪಾಂಡ್ಯ ಹಾಗೂ ಮೊರೀಸ್ ನಡುವೆ ಮಾತಿನ ಚಕಮಕಿ ನಡೆಯಿತು. ಹಾರ್ದಿಕ್ ಅವರು ಮೊರೀಸ್​ನ 4ನೇ ಎಸೆತದಲ್ಲಿ ಸಿಕ್ಸ್ ಬಾರಿಸಿದಾಗಲೇ ಇವರಿಬ್ಬರ ನಡುವೆ ಕಿಡಿ ಹತ್ತಿಕೊಂಡಿತ್ತು. ನಂತರದ ಎಸೆತದಲ್ಲಿ ಔಟ್ ಆದ ಕೂಡಲೆ ಮಾತಿನ ಚಕಮಕಿ ಇನ್ನಷ್ಟು ತಾರಕ್ಕಕ್ಕೇರಿತು. ಮೊದಲೇ ಔಟ್‌ ಆಗಿದ್ದಕ್ಕೆ ಬೇಸರವಾಗಿದ್ದ ಪಾಂಡ್ಯ, ಕ್ರಿಸ್‌ ಮಾರೀಸ್‌ ಕಡೆ ಬೆರಳು ತೋರಿಸಿ ವಾರ್ನಿಂಗ್ ನೀಡಿದರು.




ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಆಟಗಾರರು ತಮ್ಮ ವಿರುದ್ಧದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಕ್ರಿಸ್ ಮೊರೀಸ್ ಲೆವೆಲ್ 1 ಅಪರಾಧ ಐಪಿಎಲ್ ನೀತಿ ಸಂಹಿತೆಯ 2.5 ಹಾಗೂ ಹಾರ್ದಿಕ್ ಪಾಂಡ್ಯ ಲೆವೆಲ್ 1ರ ಅಪರಾಧ ನೀತಿ ಸಂಹಿತೆಯ 2.20 ನಿಯಮವನ್ನು ಉಲ್ಲಂಘಿಸಿದಂತಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ, ದೇವದತ್ ಪಡಿಕ್ಕಲ್ ಅವರ 74 ರನ್ ಹಾಗೂ ಜೋಷ್ ಫಿಲಿಪ್ ಅವರ 33 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ (ಅಜೇಯ 79) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.1 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 166 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು.

Virat Kohli: ಅನುಷ್ಕಾಗೆ ಊಟ ಮಾಡಿದೆಯಾ ಎಂದು ಮೈದಾನದಿಂದಲೇ ಕೇಳಿದ ಕೊಹ್ಲಿ; ವಿಡಿಯೋ ವೈರಲ್

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ 16 ಅಂಕಗಳನ್ನು ಪಡೆದು ಅಗ್ರಸ್ಥಾನ ಉಳಿಸಿಕೊಂಡಿದೆ. ಅಲ್ಲದೆ ಬಹುತೇಕ ಪ್ಲೇ ಆಫ್​ನತ್ತ ದಾಪುಗಾಲಿಟ್ಟಂತಾಗಿದೆ. ಆರ್​ಸಿಬಿಗೆ ಎರಡು ಪಂದ್ಯಗಳು ಉಳಿದಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
Published by: Vinay Bhat
First published: October 29, 2020, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading