IPL 2020, MI vs KXIP: ಪಂಜಾಬ್ ಪಡೆಯಲ್ಲಿ 1 ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

ಇಂದಿನ ಪಂದ್ಯದಲ್ಲಿ ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್ ಹಾಗೂ ಮೊಹಮ್ಮದ್ ಶಮಿಯನ್ನು ಒಳಗೊಂಡಿರುವ ಕಿಂಗ್ಸ್ ಬೌಲಿಂಗ್ ವಿಭಾಗವು ಮತ್ತಷ್ಟು ಕರಾರುವಾಕ್ ದಾಳಿ ನಡೆಸಬೇಕಿದೆ. ಇಲ್ಲದಿದ್ರೆ ಮುಂಬೈ ಬ್ಯಾಟ್ಸ್​ಮನ್​ಗಳು ಅಬ್ಬರಿಸುವುದರಲ್ಲಿ ಯಾವುದೇ ಡೌಟ್ ಇಲ್ಲ.

KXIP vs MI

KXIP vs MI

 • Share this:
  ದುಬೈ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆಯಲಿರುವ ಐಪಿಎಲ್ 36ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಜಯ ದಾಖಲಿಸಿರುವ ಕೆಎಲ್ ರಾಹುಲ್ ಪಡೆ ಇಂದಿನ ಪಂದ್ಯದ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಿರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಶೇಖ್ ಝಾಯೆದ್ ಮೈದಾನದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನು 48 ರನ್​ಗಳಿಂದ ಸೋಲಿಸಿರುವ ಮುಂಬೈ ಇಂಡಿಯನ್ ಇಂದಿನ ಪಂದ್ಯದಲ್ಲೂ ಅಂತಹದ್ದೇ ಭರ್ಜರಿ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.

  ಇನ್ನು ಬಲಾಬಲದ ಲೆಕ್ಕಾಚಾರದಲ್ಲಿ ಎರಡೂ ಸಮಬಲ ಹೊಂದಿದ್ದು, ಅನುಭವಿ ಆಟಗಾರರನ್ನು ಗಣನೆಗೆ ತೆಗೆದುಕೊಂಡರೆ ಮುಂಬೈ ಫೇವರೆಟ್ ಎನಿಸಿದೆ. ಏಕೆಂದರೆ ಮುಂಬೈ ಪಾಳಯದಲ್ಲಿ ರೋಹಿತ್ ಶರ್ಮಾ, ಡಿಕಾಕ್, ಪೊಲಾರ್ಡ್, ಪಾಂಡ್ಯರಂತಹ ಅಂತರಾಷ್ಟ್ರೀಯ ಬ್ಯಾಟ್ಸ್​ಮನ್​ಗಳಿದ್ದಾರೆ. ಹಾಗೆಯೇ ವಿಶ್ವದ ಅಗ್ರ ಬೌಲರುಗಳಾದ ಟ್ರೆಂಟ್ ಬೌಲ್ಟ್ ಹಾಗೂ ಜಸ್​​ಪ್ರೀತ್ ಬುಮ್ರಾ ಮುಂಬೈ ತಂಡದ ವೇಗದ ಅಸ್ತ್ರಗಳು. ಇದರೊಂದಿಗೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸಂಚಲನ ಸೃಷ್ಟಿಸಿದ ಇಶಾನ್ ಕಿಶನ್ ಹಾಗೂ ಸ್ಪಿನ್ನರ್ ರಾಹುಲ್ ಚಹರ್ ರೋಹಿತ್ ಶರ್ಮಾ ಅವರ ಶಕ್ತಿಯಾಗಿ ಮಾರ್ಪಟಿದ್ದಾರೆ.

  ಇತ್ತ ಪಂಜಾಬ್ ಆರಂಭಿಕ ಆರ್ಭಟ ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ಹೇಳಿಕೊಳ್ಳುವಂತಹ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿಲ್ಲ ಎಂದೇ ಹೇಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲೂ ರಾಹುಲ್, ಮಯಾಂಕ್ ಹಾಗೂ ಪೂರನ್ ತಂಡದ ಟ್ರಂಪ್​ ಕಾರ್ಡ್​ಗಳಾಗಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಕ್ರಿಸ್ ಗೇಲ್ ಇಂದು ಕೂಡ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ. ಹಾಗೆಯೇ ಸತತ ವೈಫಲ್ಯ ಹೊಂದಿರುವ ಗ್ಲೆನ್ ಮ್ಯಾಕ್ಸ್​ವೆಲ್ ಬದಲಿಗೆ ಇಂದು ಜೇಮ್ಸ್ ನೀಶಮ್ ಸ್ಥಾನ ಪಡೆಯುವ ಸಾಧ್ಯತೆಯಿದೆ.

  ಇದರ ಹೊರತಾಗಿ ಪಂಜಾಬ್ ಪಡೆಗೆ ಬೌಲಿಂಗ್​ನದ್ದೇ ಚಿಂತೆ. ಏಕೆಂದರೆ 223 ರನ್​ಗಳನ್ನು ಬಾರಿಸಿ ಸೋತಿರುವ ಇತಿಹಾಸ ಕಿಂಗ್ಸ್ ಪರವಿದೆ. ರಾಜಸ್ಥಾನ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕಾಟ್ರೆಲ್ ಕೈಚೆಲ್ಲಿದ್ದರು. ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಡೆತ್ ಓವರ್​ನಲ್ಲಿ ಪಂಜಾಬ್ ಎಡವಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್ ಹಾಗೂ ಮೊಹಮ್ಮದ್ ಶಮಿಯನ್ನು ಒಳಗೊಂಡಿರುವ ಕಿಂಗ್ಸ್ ಬೌಲಿಂಗ್ ವಿಭಾಗವು ಮತ್ತಷ್ಟು ಕರಾರುವಾಕ್ ದಾಳಿ ನಡೆಸಬೇಕಿದೆ. ಇಲ್ಲದಿದ್ರೆ ಮುಂಬೈ ಬ್ಯಾಟ್ಸ್​ಮನ್​ಗಳು ಅಬ್ಬರಿಸುವುದರಲ್ಲಿ ಯಾವುದೇ ಡೌಟ್ ಇಲ್ಲ.

  ಇನ್ನು ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡದೊಂದಿಗೆ ಇಂದು ಕೂಡ ಮುಂಬೈ ಇಂಡಿಯನ್ಸ್ ಮೈದಾನಕ್ಕಿಳಿಯುವ ಸಾಧ್ಯತೆಯಿದ್ದು, ಪಂಜಾಬ್ ತಂಡದಲ್ಲಿ ಮಾತ್ರ ಬದಲಾವಣೆ ಕಂಡು ಬರಬಹುದು. ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ.

  KXIP: ಕೆಎಲ್ ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್, ಗ್ಲೆನ್ ಮ್ಯಾಕ್ಸ್​​ವೆಲ್/ ಜೇಮ್ಸ್ ನೀಶಮ್, ದೀಪಕ್ ಹೂಡಾ, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್ , ಮಂದೀಪ್ ಸಿಂಗ್/ ಕೃಷ್ಣಪ್ಪ ಗೌತಮ್

  MI: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ , ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
  Published by:zahir
  First published: