IPL

  • associate partner
HOME » NEWS » Ipl » IPL 2020 MI VS KKR LIVE SCORE MUMBAI INDIANS VS KOLKATA KNIGHT RIDERS KKR 148 5 VB

IPL 2020, MI vs KKR: ನೈಟ್​ ರೈಡರ್ಸ್​ಗೆ ಬೆಳಕಾದ ಕಮಿನ್ಸ್-ಮಾರ್ಗನ್: ಮುಂಬೈಗೆ 149 ರನ್ಸ್ ಟಾರ್ಗೆಟ್

IPL 2020, Mumbai Indians vs Kolkata Knight Riders: ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಈವರೆಗೆ ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ಇಂಡಿಯನ್ಸ್​ ತಂಡ 20ರಲ್ಲಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​​ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

news18-kannada
Updated:October 16, 2020, 9:17 PM IST
IPL 2020, MI vs KKR: ನೈಟ್​ ರೈಡರ್ಸ್​ಗೆ ಬೆಳಕಾದ ಕಮಿನ್ಸ್-ಮಾರ್ಗನ್: ಮುಂಬೈಗೆ 149 ರನ್ಸ್ ಟಾರ್ಗೆಟ್
ಇಯಾನ್ ಮಾರ್ಗನ್- ಪ್ಯಾಟ್ ಕಮಿನ್ಸ್
  • Share this:
ಅಬುಧಾಬಿ (ಅ. 16): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 32ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಕಳಪೆ ಬ್ಯಾಟಿಂಗ್ ನಡೆಸಿ ಸಾಧಾರಣ ಮೊತ್ತ ಕಲೆಹಾಕಿದೆ. ನಾಯಕ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್​ ಜೊತೆಯಾಟದ ನೆರವಿನಿಂದ ಕೆಕೆಆರ್ 20 ಓವರ್​ನಲ್ಲಿ 148 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ದೊಡ್ಡ ವಿಕೆಟ್ ಕಳೆದುಕೊಂಡು ಸಾಗಿತು. ಟ್ರೆಂಟ್ ಬೌಲ್ಟ್​ ಬೌಲಿಂಗ್​ನಲ್ಲಿ ರಾಹುಲ್ ತ್ರಿಪಾಠಿ ಕೇವಲ 7 ರನ್​ಗೆ ಔಟ್ ಆದರು. ನಿತೀಶ್ ರಾಣ(5) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.


ಶುಭ್ಮನ್ ಗಿಲ್ 23 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರೆ, ದಿನೇಶ್ ಕಾರ್ತಿಕ್ 4 ರನ್​ಗೆ ರಾಹುಲ್ ಚಹಾಲ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಹೀಗೆ 50 ರನ್​ಗೂ ಮುನ್ನವೇ 4 ವಿಕೆಟ್ ಕಳೆದುಕೊಂಡಿತು. ಆ್ಯಂಡ್ರೋ ರಸೆಲ್(12) ಆಟ ಇಂದುಕೂಡ ನಡೆಯಲಿಲ್ಲ.

ಬಳಿಕ 6ನೇ ವಿಕೆಟ್​ಗೆ ಇಯಾನ್ ಮಾರ್ಗನ್ ಜೊತೆಯಾದ ಪ್ಯಾಟ್ ಕಮಿನ್ಸ್​ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಕಮಿನ್ಸ್​ ಬಿರುಸಿನ ಆಟದ ಮೊರೆಹೋದರೆ ಮಾರ್ಗನ್ ಇವರಿಗೆ ಉತ್ತಮ ಸಾತ್ ನೀಡಿದರು. ಈ ಜೋಡಿ 87 ರನ್​ಗಳ ಉಪಯುಕ್ತ ಕಾಣಿಕೆ ನೀಡಿತು.

ಕಮಿನ್ಸ್​ 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 53 ರನ್ ಸಿಡಿಸಿದರೆ, ಮಾರ್ಗನ್ 29 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 39 ರನ್ ಗಳಿಸಿದರು.

ಇವರಿಬ್ಬರ ಆಟದ ನೆರವಿನಿಂದ ಅಂತಿಮವಾಗಿ ಕೋಲ್ಕತ್ತಾ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಮುಂಬೈ ಪರ ರಾಹುಲ್ ಚಹಾರ್ 2 ವಿಕೆಟ್ ಕಿತ್ತರೆ, ಟ್ರೆಂಟ್ ಬೌಲ್ಟ್​, ಜಸ್​ಪ್ರೀತ್ ಬುಮ್ರಾ, ನಥನ್ ಕಲ್ಟನ್ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ ತಂಡ: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಸೂರ್ಯಕುಮಾರ್‌ ಯಾದವ್‌, ಇಶಾನ್ ಕಿಶನ್, ಕೀರನ್‌ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ರಾಹುಲ್‌ ಚಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್‌ ಬೌಲ್ಟ್‌, ನಥನ್ ಕಲ್ಟರ್ ನೈಲ್.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ಕ್ರಿಸ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ.
Published by: Vinay Bhat
First published: October 16, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories