IPL

  • associate partner
HOME » NEWS » Ipl » IPL 2020 MI VS KKR LIVE CRICKET SCORE MUMBAI INDIANS VS KOLKATA KNIGHT RIDERS ROHIT DE KOCK 94 RUNS PARTNERSHIP VB 2

MI vs KKR, IPL 2020 Live Score: ರೋಹಿತ್-ಡಿಕಾಕ್ 94 ರನ್​ಗಳ ಜೊತೆಯಾಟ: ಗೆಲುವಿನತ್ತ ಮುಂಬೈ

IPL 2020, Mumbai Indians vs Kolkata Knight Riders Live Score: ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಈವರೆಗೆ ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ಇಂಡಿಯನ್ಸ್​ ತಂಡ 20ರಲ್ಲಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​​ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

news18-kannada
Updated:October 16, 2020, 10:34 PM IST
MI vs KKR, IPL 2020 Live Score: ರೋಹಿತ್-ಡಿಕಾಕ್ 94 ರನ್​ಗಳ ಜೊತೆಯಾಟ: ಗೆಲುವಿನತ್ತ ಮುಂಬೈ
MI vs KKR Live Score Updates
  • Share this:
ಅಬುಧಾಬಿ (ಅ. 16): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 32ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಕಳಪೆ ಬ್ಯಾಟಿಂಗ್ ನಡೆಸಿ ಸಾಧಾರಣ ಮೊತ್ತ ಕಲೆಹಾಕಿದೆ. ನಾಯಕ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್​ ಜೊತೆಯಾಟದ ನೆರವಿನಿಂದ ಕೆಕೆಆರ್ 20 ಓವರ್​ನಲ್ಲಿ 148 ರನ್ ಗಳಿಸಿದೆ.

ಟಾರ್ಗೆಟ್ ಬೆನ್ನಟ್ಟಿರುವ ಮುಂಬೈ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಅಮೋಘ ಜೊತೆಯಾಟ ತಂಡಕ್ಕೆ ನೆರವಾಗಿದೆ. ಕೆಕೆಆರ್ ಬೌಲರ್​​ಗಳ ಬೆವರಿಳಿಸಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಡಿಕಾಕ್ ಆರ್ಭಟಿಸಿದರೆ, ರೋಹಿತ್ ಇವರಿಗೆ ಉತ್ತಮ ಸಾತ್ ನೀಡಿದರು.

ಈ ಜೋಡಿ 10 ಓವರ್ ಆಗುವ ಹೊತ್ತಿಗೆ 94 ರನ್ ಬಾರಿಸಿತು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಬಾರಿಸಿ 35 ರನ್ ಗಳಿಸಿ ಔಟ್ ಆದರು. ಸೂರ್ಯಕುಮಾರ್ ಯಾದವ್(10) ಬೇಗನೆ ನಿರ್ಗಮಿಸಿದರು. ಸದ್ಯ ಡಿಕಾಕ್ ಹಾಗೂ ಹಾರ್ದಿಕ್ ಪಾಂಡ್ಯ  ಕ್ರೀಸ್​ನಲ್ಲಿದ್ದಾರೆ. ಮುಂಬೈ ಗೆಲುವಿನತ್ತ ದಾಪುಗಾಲಿಡುತ್ತಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ದೊಡ್ಡ ವಿಕೆಟ್ ಕಳೆದುಕೊಂಡು ಸಾಗಿತು. ಟ್ರೆಂಟ್ ಬೌಲ್ಟ್​ ಬೌಲಿಂಗ್​ನಲ್ಲಿ ರಾಹುಲ್ ತ್ರಿಪಾಠಿ ಕೇವಲ 7 ರನ್​ಗೆ ಔಟ್ ಆದರು. ನಿತೀಶ್ ರಾಣ(5) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.





ಶುಭ್ಮನ್ ಗಿಲ್ 23 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರೆ, ದಿನೇಶ್ ಕಾರ್ತಿಕ್ 4 ರನ್​ಗೆ ರಾಹುಲ್ ಚಹಾಲ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಹೀಗೆ 50 ರನ್​ಗೂ ಮುನ್ನವೇ 4 ವಿಕೆಟ್ ಕಳೆದುಕೊಂಡಿತು. ಆ್ಯಂಡ್ರೋ ರಸೆಲ್(12) ಆಟ ಇಂದುಕೂಡ ನಡೆಯಲಿಲ್ಲ.

ಬಳಿಕ 6ನೇ ವಿಕೆಟ್​ಗೆ ಇಯಾನ್ ಮಾರ್ಗನ್ ಜೊತೆಯಾದ ಪ್ಯಾಟ್ ಕಮಿನ್ಸ್​ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಕಮಿನ್ಸ್​ ಬಿರುಸಿನ ಆಟದ ಮೊರೆಹೋದರೆ ಮಾರ್ಗನ್ ಇವರಿಗೆ ಉತ್ತಮ ಸಾತ್ ನೀಡಿದರು. ಈ ಜೋಡಿ 87 ರನ್​ಗಳ ಉಪಯುಕ್ತ ಕಾಣಿಕೆ ನೀಡಿತು.

ಕಮಿನ್ಸ್​ 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 53 ರನ್ ಸಿಡಿಸಿದರೆ, ಮಾರ್ಗನ್ 29 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 39 ರನ್ ಗಳಿಸಿದರು.

ಇವರಿಬ್ಬರ ಆಟದ ನೆರವಿನಿಂದ ಅಂತಿಮವಾಗಿ ಕೋಲ್ಕತ್ತಾ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಮುಂಬೈ ಪರ ರಾಹುಲ್ ಚಹಾರ್ 2 ವಿಕೆಟ್ ಕಿತ್ತರೆ, ಟ್ರೆಂಟ್ ಬೌಲ್ಟ್​, ಜಸ್​ಪ್ರೀತ್ ಬುಮ್ರಾ, ನಥನ್ ಕಲ್ಟನ್ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ ತಂಡ: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಸೂರ್ಯಕುಮಾರ್‌ ಯಾದವ್‌, ಇಶಾನ್ ಕಿಶನ್, ಕೀರನ್‌ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ರಾಹುಲ್‌ ಚಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್‌ ಬೌಲ್ಟ್‌, ನಥನ್ ಕಲ್ಟರ್ ನೈಲ್.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ಕ್ರಿಸ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ.





ಈ ಬಾರಿಯ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈ ತಂಡ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಕೋಲ್ಕತ್ತಾ ಆಡಿರುವ 7 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿ 3ರಲ್ಲಿ ಸೋಲು ಕಂಡಿದೆ. ಹೀಗಾಗಿ ಪ್ಲೇ ಆಫ್ ಹಾದಿಯನ್ನು ಭದ್ರ ಪಡಿಸಿಕೊಳ್ಳಲು ಉಭಯ ತಂಡಗಳಿಗೆ ಗೆಲುವಿನ ಅಗತ್ಯವಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಎಲ್ಲ ಆಟಗಾರರು ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಜವಾಬ್ದಾರಿಗೂ ಮೀರಿ ಪ್ರದರ್ಶನ ನೀಡುತ್ತಿದ್ದಾರೆ.

ಇತ್ತ ಕಳೆದ 3 ಪಂದ್ಯಗಳ ಪೈಕಿ 2ರಲ್ಲಿ ಅಂತಿಮ ಹಂತದಲ್ಲಿ ಜಯ ದಾಖಲಿಸಿದ ಕೆಕೆಆರ್, ಆರ್‌ಸಿಬಿ ಎದುರು ಹೀನಾಯವಾಗಿ ಸೋಲು ಕಂಡಿತು. ಇದಕ್ಕೂ ಮೊದಲು ಸಿಎಸ್‌ಕೆ ಹಾಗೂ ಕಿಂಗ್ಸ್ ಇಲೆವೆನ್ ಎದುರು ರೋಚಕ ಜಯ ದಾಖಲಿಸಿತ್ತು. ತಂಡದಲ್ಲಿ ನಿಂತು ಆಡುವ ಆಟಗಾರರು ಯಾರೂ ಇಲ್ಲ.

ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ಇಂಡಿಯನ್ಸ್​ ತಂಡ 20ರಲ್ಲಿ ಗೆಲುವು ದಾಖಲಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್​​ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.
Published by: Vinay Bhat
First published: October 16, 2020, 9:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories