IPL

  • associate partner
HOME » NEWS » Ipl » IPL 2020 MI VS DC QUALIFIER 1 MUMBAI INDIANS VS DELHI CAPITALS MI 200 5 VB

MI vs DC Qualifier 1, IPL 2020: ಹಾರ್ದಿಕ್ 14 ಬಾಲ್ 37, ಕಿಶನ್-ಯಾದವ್ ಅರ್ಧಶತಕ: ಡೆಲ್ಲಿಗೆ 201 ಟಾರ್ಗೆಟ್

IPL 2020 Playoffs, Mumbai Indians vs Delhi Capitals Qualifier 1: ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿದ ಡಿಕಾಕ್ ಹಾಗೂ ಸೂರ್ಯಕುಮಾರ್ 7 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿತು.

news18-kannada
Updated:November 5, 2020, 9:12 PM IST
MI vs DC Qualifier 1, IPL 2020: ಹಾರ್ದಿಕ್ 14 ಬಾಲ್ 37, ಕಿಶನ್-ಯಾದವ್ ಅರ್ಧಶತಕ: ಡೆಲ್ಲಿಗೆ 201 ಟಾರ್ಗೆಟ್
MI vs DC
  • Share this:
ದುಬೈ (ನ. 05): 13ನೇ ಆವೃತ್ತಿಯ ಐಪಿಎಲ್​ನಲ್ಲಿಂದು ಮಹತ್ವದ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ದೊಡ್ಡ ಮೊತ್ತ ಕಲೆಹಾಕಿದೆ. ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕದ ಜೊತೆ ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್ ನೆವಿನಿಂದ ಮುಂಬೈ 20 ಓವರ್​ಗಳಲ್ಲಿ 200 ರನ್ ಬಾರಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಆರಂಭದಲ್ಲೇ ನಾಯಕನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ತಾನೆದುರಿಸಿದ ಮೊದಲ ಎಸೆತದಲ್ಲೇ ಅಶ್ವಿನ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು.

ಈ ಸಂದರ್ಭ ಒಂದಾದ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿದ ಈ ಜೋಡಿ 7 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿತು. ಆದರೆ, 8ನೇ ಓವರ್​ನಲ್ಲಿ ಡಿಕಾಕ್ 25 ಎಸೆತಗಳಲ್ಲಿ 40 ರನ್ ಸಿಡಿಸಿ ಔಟ್ ಆದರು.




ಬಳಿಕ ಇಶಾನ್ ಕಿಶನ್ ಹಾಗೂ ಯಾದವ್ ಇದೇ ರನ್ ಗತಿಯಲ್ಲಿ ಬ್ಯಾಟ್ ಬೀಸಿ 12 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 100ಕ್ಕೆ ತಂದಿಟ್ಟರು. ಸೂರ್ಯಕುಮಾರ್ 36 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ, 50 ಬಾರಿಸಿದ ಬೆನ್ನಲ್ಲೆ ಯಾದವ್ ಔಟ್ ಆದರು. ಕೀರೊನ್ ಪೊಲಾರ್ಡ್​ ಬಂದ ಬೆನ್ನಲ್ಲೆ ಶೂನ್ಯಕ್ಕೆ ನಿರ್ಗಮಿಸಿದರು. ಕ್ರುನಾಲ್ ಪಾಂಡ್ಯ ಕೂಡ(13) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಕೊನೆ ಹಂತದಲ್ಲಿ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಿ ತಂಡಕ್ಕೆ ಆಸರೆಯಾದರು. ಕಿಶನ್ 30 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 55 ರನ್ ಹಾಗೂ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಅಜೇಯ 37 ರನ್ ಚಚ್ಚಿದರು.

ಅಂತಿಮವಾಗಿ ಮುಂಬೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಡೆಲ್ಲಿ ಪರ ಆರ್. ಅಶ್ವಿನ್ 3 ವಿಕೆಟ್ ಕಿತ್ತು ಮಿಂಚಿದರೆ, ಮಾರ್ಕಸ್ ಸ್ಟಾಯಿನಿಸ್ ಹಾಗೂ ಆನ್ರಿಚ್ ನಾರ್ಟ್ಜೆ 1 ವಿಕೆಟ್ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಡೆನಿಯಲ್ ಸ್ಯಾಮ್ಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.

ಮುಂಬೈ ಇಂಡಿಯನ್ಸ್‌: ಕ್ವಿಂಟನ್‌ ಡಿ ಕಾಕ್ ‌(ವಿ.ಕೀ), ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್‌ ಯಾದವ್‌, ಕೀರನ್‌ ಪೊಲಾರ್ಡ್‌, ಕ್ರುನಾಲ್‌ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರಾಹುಲ್‌ ಚಹರ್, ನಥನ್ ಕಲ್ಟರ್ ನೈಲ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
Published by: Vinay Bhat
First published: November 5, 2020, 9:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories