IPL

  • associate partner
HOME » NEWS » Ipl » IPL 2020 MI VS DC LIVE SCORE MUMBAI INDIANS VS DELHI CAPITALS UPDATE ZP

MI vs DC: ಶಿಖರ್ ಧವನ್ ಅರ್ಧಶತಕ: ಮುಂಬೈಗೆ ಸ್ಪರ್ಧಾತ್ಮಕ ಸವಾಲು ನೀಡಿದ ಡೆಲ್ಲಿ

IPL 2020: ಉಭಯ ತಂಡಗಳು ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ತಲಾ 12 ರಲ್ಲಿ ಗೆಲುವು ದಾಖಲಿಸುವ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದೆ.

news18-kannada
Updated:October 11, 2020, 9:15 PM IST
MI vs DC: ಶಿಖರ್ ಧವನ್ ಅರ್ಧಶತಕ: ಮುಂಬೈಗೆ ಸ್ಪರ್ಧಾತ್ಮಕ ಸವಾಲು ನೀಡಿದ ಡೆಲ್ಲಿ
ಶಿಖರ್ ಧವನ್
  • Share this:
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್​ಗೆ ಗೆಲ್ಲಲು 163 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಡೆಲ್ಲಿ ಕ್ಯಾಪಿಟಲ್ಸ್​​ಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಓಪನರ್ ಪೃಥ್ವಿ ಶಾ (4) ಅವರನ್ನು ಮೊದಲ ಓವರ್​ನಲ್ಲೇ ಜಸ್​ಪ್ರೀತ್ ಬುಮ್ರಾ ಪೆವಲಿಯನ್​ಗೆ ಕಳುಹಿಸಿ, ಮುಂಬೈ ಇಂಡಿಯನ್ಸ್​ಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

ಒನ್​ಡೌನ್ ಬಳಿಕ ಕಣಕ್ಕಿಳಿದ ಅಜಿಂಕ್ಯ ರಹಾನೆ 3 ಆಕರ್ಷಕ ಬೌಂಡರಿಗಳೊಂದಿಗೆ ಗಮನ ಸೆಳೆದರೂ, ದೊಡ್ಡ ಇನಿಂಗ್ಸ್ ಆಡುವಲ್ಲಿ ಎಡವಿದರು. 5ನೇ ಓವರ್​ನಲ್ಲಿ ಕೃನಾಲ್ ಪಾಂಡ್ಯ ಎಸೆದಲ್ಲಿ ಎಲ್​ಬಿಡಬ್ಲ್ಯೂ ಆಗುವ ಮೂಲಕ ರಹಾನೆ (15) ಸಹ ಹೊರ ನಡೆದರು.

ಇನ್ನು ಪವರ್ ಪ್ಲೇನಲ್ಲಿ ಮುಂಬೈ ಬೌಲರುಗಳು ಮೇಲುಗೈ ಸಾಧಿಸಿದರೂ, ಈ ಹಂತದಲ್ಲಿ ಜೊತೆಗೂಡಿದ್ದ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಮೊದಲ 6 ಓವರ್​ಗಳಲ್ಲಿ 46 ರನ್ ಕಲೆಹಾಕುವಲ್ಲಿ  ಯಶಸ್ವಿಯಾದರು. ಅಲ್ಲದೆ 33 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅದರೊಂದಿಗೆ ಮೊದಲ ಹತ್ತು ಓವರ್​ಗಳಲ್ಲಿ ತಂಡದ ಮೊತ್ತವನ್ನು 80 ರನ್​ಗೆ ತಂದು ನಿಲ್ಲಿಸಿದರು.

ಕೃನಾಲ್ ಪಾಂಡ್ಯ ಎಸೆದ 15ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಮುಂದಾದ ಶ್ರೇಯಸ್ ಅಯ್ಯರ್(42) ಟ್ರೆಂಟ್ ಬೌಲ್ಟ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಈ ಹಂತದಲ್ಲಿ ತಂಡದ ಮೊತ್ತ 109 ಕ್ಕೆ ತಲುಪಿತ್ತು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ ಶಿಖರ್ ಧವನ್ ತಮ್ಮ ಅರ್ಧಶತಕ ಪೂರೈಸಿದರು. ಇನ್ನು ಕ್ರೀಸ್​ಗಿಳಿದ ಬೆನ್ನಲ್ಲೇ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಸ್ಟೋಯಿನಿಸ್ (13) ಹೊಂದಾಣಿಕೆಯ ಓಟದ ಕೊರತೆಯಿಂದ ರನೌಟ್ ಆಗಿ ಹೊರ ನಡೆದರು.

ಕೊನೆಯ ಮೂರು ಓವರ್​ಗಳಲ್ಲಿ ಮಾರಕ ದಾಳಿ ಸಂಘಟಿಸಿದ ಮುಂಬೈ ಇಂಡಿಯನ್ಸ್ ಬೌಲರುಗಳಾದ ಜಸ್​ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳನ್ನು ರನ್ ಕದಿಯಲು ಪರದಾಡುವಂತೆ ಮಾಡಿದರು. ಪರಿಣಾಮ ಡೆಲ್ಲಿ ಮೊತ್ತ ನಿಗದಿತ 20 ಓವರ್​ಗಳಲ್ಲಿ 162 ಕ್ಕೆ ಬಂದು ನಿಂತಿತು. ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ 52 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿ ಗಮನ ಸೆಳೆದರು. ಮುಂಬೈ ಪರ ಕೃನಾಲ್ ಪಾಂಡ್ಯ 4 ಓವರ್​ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು.



POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!
Published by: zahir
First published: October 11, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories