news18-kannada Updated:October 11, 2020, 9:22 PM IST
ಮುಂಬೈ ಇಂಡಿಯನ್ಸ್
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 27ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ (4) ಅವರನ್ನು ಮೊದಲ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಪೆವಲಿಯನ್ಗೆ ಕಳುಹಿಸಿ, ಮುಂಬೈ ಇಂಡಿಯನ್ಸ್ಗೆ ಮೊದಲ ಯಶಸ್ಸು ತಂದುಕೊಟ್ಟರು. ಒನ್ಡೌನ್ ಬಳಿಕ ಕಣಕ್ಕಿಳಿದ ಅಜಿಂಕ್ಯ ರಹಾನೆ 3 ಆಕರ್ಷಕ ಬೌಂಡರಿಗಳೊಂದಿಗೆ ಗಮನ ಸೆಳೆದರೂ, ದೊಡ್ಡ ಇನಿಂಗ್ಸ್ ಆಡುವಲ್ಲಿ ಎಡವಿದರು. 5ನೇ ಓವರ್ನಲ್ಲಿ ಕೃನಾಲ್ ಪಾಂಡ್ಯ ಎಸೆದಲ್ಲಿ ಎಲ್ಬಿಡಬ್ಲ್ಯೂ ಆಗುವ ಮೂಲಕ ರಹಾನೆ (15) ಹೊರ ನಡೆದರು.
ಇನ್ನು ಪವರ್ ಪ್ಲೇನಲ್ಲಿ ಮುಂಬೈ ಬೌಲರುಗಳು ಮೇಲುಗೈ ಸಾಧಿಸಿದರೂ, ಈ ಹಂತದಲ್ಲಿ ಜೊತೆಗೂಡಿದ್ದ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಮೊದಲ 6 ಓವರ್ಗಳಲ್ಲಿ 46 ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ಅಲ್ಲದೆ 33 ಎಸೆತಗಳಲ್ಲಿ 50 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅದರೊಂದಿಗೆ ಮೊದಲ ಹತ್ತು ಓವರ್ಗಳಲ್ಲಿ ತಂಡದ ಮೊತ್ತವನ್ನು 80 ರನ್ಗೆ ತಂದು ನಿಲ್ಲಿಸಿದರು.
ಕೃನಾಲ್ ಪಾಂಡ್ಯ ಎಸೆದ 15ನೇ ಓವರ್ನಲ್ಲಿ ಬಿಗ್ ಹಿಟ್ಗೆ ಮುಂದಾದ ಶ್ರೇಯಸ್ ಅಯ್ಯರ್(42) ಟ್ರೆಂಟ್ ಬೌಲ್ಟ್ಗೆ ಕ್ಯಾಚ್ ನೀಡಿ ಹೊರ ನಡೆದರು. ಈ ಹಂತದಲ್ಲಿ ತಂಡದ ಮೊತ್ತ 109 ಕ್ಕೆ ತಲುಪಿತ್ತು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ ಶಿಖರ್ ಧವನ್ ತಮ್ಮ ಅರ್ಧಶತಕ ಪೂರೈಸಿದರು. ಇನ್ನು ಕ್ರೀಸ್ಗಿಳಿದ ಬೆನ್ನಲ್ಲೇ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಸ್ಟೋಯಿನಿಸ್ (13) ಹೊಂದಾಣಿಕೆಯ ಓಟದ ಕೊರತೆಯಿಂದ ರನೌಟ್ ಆಗಿ ಹೊರ ನಡೆದರು.
ಕೊನೆಯ ಮೂರು ಓವರ್ಗಳಲ್ಲಿ ಮಾರಕ ದಾಳಿ ಸಂಘಟಿಸಿದ ಮುಂಬೈ ಇಂಡಿಯನ್ಸ್ ಬೌಲರುಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ಗಳನ್ನು ರನ್ ಕದಿಯಲು ಪರದಾಡುವಂತೆ ಮಾಡಿದರು. ಪರಿಣಾಮ ಡೆಲ್ಲಿ ಮೊತ್ತ ನಿಗದಿತ 20 ಓವರ್ಗಳಲ್ಲಿ 162 ಕ್ಕೆ ಬಂದು ನಿಂತಿತು. ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ 52 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿ ಗಮನ ಸೆಳೆದರು. ಮುಂಬೈ ಪರ ಕೃನಾಲ್ ಪಾಂಡ್ಯ 4 ಓವರ್ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು.
10 ಪಾಯಿಂಟ್ಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿದ್ದು, 6 ರಲ್ಲಿ 4 ಪಂದ್ಯಗಳನ್ನು ಜಯಿಸಿರುವ ಮುಂಬೈ ಇಂಡಿಯನ್ಸ್ 8 ಪಾಯಿಂಟ್ಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅತ್ತ ಆರು ಪಂದ್ಯಗಳಲ್ಲಿ 5 ರಲ್ಲಿ ಭರ್ಜರಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವ ತವಕದಲ್ಲಿದ್ದು, ಹೀಗಾಗಿ ಇಂದು ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು.
ಉಭಯ ತಂಡಗಳು ಐಪಿಎಲ್ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ತಲಾ 12 ರಲ್ಲಿ ಗೆಲುವು ದಾಖಲಿಸುವ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದೆ. ಇನ್ನು ಕೊನೆಯ ಐದು ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ ಸಾಧಿಸಿದ್ದು, ಮುಂಬೈ ವಿರುದ್ದ 3 ರಲ್ಲಿ ಜಯಗಳಿಸಿದೆ. ಹಾಗೆಯೇ ಕೊನೆಯ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 40 ರನ್ಗಳ ಭರ್ಜರಿ ಜಯ ಸಾಧಿಸಿತ್ತು.
ಇದೇ ಆತ್ಮ ವಿಶ್ವಾದಲ್ಲಿ ಇಂದು ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದ್ದು, ಇತ್ತ ಐಪಿಎಲ್ 2020 ಯಲ್ಲಿ ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ವಿಶ್ವಾಸದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಮೈದಾನಕ್ಕಿಳಿಯಲಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್ನ ಹೀರೋಗಳು..!
Published by:
zahir
First published:
October 11, 2020, 6:30 PM IST