IPL

  • associate partner
HOME » NEWS » Ipl » IPL 2020 MI VS DC LIVE SCORE MUMBAI INDIANS VS DELHI CAPITALS MI WON BY 5 WICKETS ZP

MI vs DC: ಮುಂಬೈ ಇಂಡಿಯನ್ಸ್​ ಮುಂದೆ ಮಂಡಿಯೂರಿದ ಡೆಲ್ಲಿ ಕ್ಯಾಪಿಟಲ್ಸ್

IPL 2020, Mumbai Indians vs Delhi Capitals: ಉಭಯ ತಂಡಗಳು ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ತಲಾ 12 ರಲ್ಲಿ ಗೆಲುವು ದಾಖಲಿಸುವ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದೆ.

news18-kannada
Updated:October 11, 2020, 11:09 PM IST
MI vs DC: ಮುಂಬೈ ಇಂಡಿಯನ್ಸ್​ ಮುಂದೆ ಮಂಡಿಯೂರಿದ ಡೆಲ್ಲಿ ಕ್ಯಾಪಿಟಲ್ಸ್
ಸೂರ್ಯಕುಮಾರ್ ಯಾದವ್
  • Share this:
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್​ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈಗೆ 163 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭ ಉತ್ತಮವಾಗಿರಲಿಲ್ಲ. ಅಕ್ಷರ್ ಪಟೇಲ್ ಎಸೆದ 5ನೇ ಓವರ್​ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ರೋಹಿತ್ ಶರ್ಮಾ (5) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರನಡೆದರು.

ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡಿಕಾಕ್ ಪವರ್ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 44 ರನ್​ಗೆ ತಂದು ನಿಲ್ಲಿಸಿದರು. ಅಲ್ಲದೆ 33 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಈ ವೇಳೆ ಡಿ ಕಾಕ್ ಬ್ಯಾಟ್​ನಿಂದ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್​ಗಳು ಮೂಡಿಬಂದಿದ್ದವು. ಇದರ ಬೆನ್ನಲ್ಲೇ ಅಶ್ವಿನ್ ಎಸೆತದಲ್ಲಿ ಕ್ಯಾಚ್ ನೀಡುವುದರೊಂದಿಗೆ ಕ್ವಿಂಟನ್ ಡಿಕಾಕ್ (53) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

ಆರಂಭಿಕನ ನಿರ್ಗಮನದ ಬೆನ್ನಲ್ಲೇ ಅತ್ತ ಸೂರ್ಯಕುಮಾರ್ ಯಾದವ್ ಆರ್ಭಟಿಸಲು ಆರಂಭಿಸಿದ್ದರು. 30 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. 53 ರನ್ ಬಾರಿಸಿದ್ದ ವೇಳೆ ಮತ್ತೊಂದು ಬಿಗ್ ಹೊಡೆತಕ್ಕೆ ಮುಂದಾಗಿ ರಬಾಡಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕ್ರೀಸ್​ಗಿಳಿದ ಬರ್ತ್​ಡೇ ಬಾಯ್ ಹಾರ್ದಿಕ್ ಪಾಂಡ್ಯ ಬಂದ ವೇಗದಲ್ಲೇ ಶೂನ್ಯದೊಂದಿಗೆ ಪೆವಿಲಿಯನ್ ಕಡೆ ಮುಖ ಮಾಡಿ ನಿರಾಸೆ ಮೂಡಿಸಿದರು. ಇನ್ನು 15 ಎಸೆತಗಳಲ್ಲಿ 28 ಬಾರಿಸಿದ ಇಶಾನ್ ಕಿಶನ್ ಕೊನೆಯ ಹಂತದಲ್ಲಿ ವಿಕೆಟ್ ನೀಡಿದರು. ಆದರೆ ಅದಾಗಲೇ ಗೆಲುವಿನ ಸಮೀಪದಲ್ಲಿದ್ದ ಮುಂಬೈ ಇಂಡಿಯನ್ಸ್​ ಮೇಲೆ ಇದು ಪರಿಣಾಮ ಬೀರಲಿಲ್ಲ.

ಕೊನೆಯ ಎರಡು ಓವರ್​ಗಳಲ್ಲಿ ಮುಂಬೈಗೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ಆದರೆ ಈ ಹಂತದಲ್ಲಿ ಮಾರಕ ಬೌಲಿಂಗ್ ಮಾಡಿದ ಅನ್ರಿಚ್ ಕೇವಲ 3 ರನ್ ಬಿಟ್ಟು ಕೊಟ್ಟರು. ಅದರಂತೆ ಅಂತಿಮ ಓವರ್​ನಲ್ಲಿ 7 ರನ್​ಗಳು ಬೇಕಿತ್ತು. ಈ ಹಂತದಲ್ಲಿ 2 ಬೌಂಡರಿ ಬಾರಿಸುವ ಮೂಲಕ ಕೃನಾಲ್ ಪಾಂಡ್ಯ ಮುಂಬೈ ಗೆಲುವನ್ನು ಖಚಿತಪಡಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಡೆಲ್ಲಿ ಕ್ಯಾಪಿಟಲ್ಸ್​​ಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಓಪನರ್ ಪೃಥ್ವಿ ಶಾ (4) ಅವರನ್ನು ಮೊದಲ ಓವರ್​ನಲ್ಲೇ ಜಸ್​ಪ್ರೀತ್ ಬುಮ್ರಾ ಪೆವಲಿಯನ್​ಗೆ ಕಳುಹಿಸಿ, ಮುಂಬೈ ಇಂಡಿಯನ್ಸ್​ಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

ಒನ್​ಡೌನ್ ಬಳಿಕ ಕಣಕ್ಕಿಳಿದ ಅಜಿಂಕ್ಯ ರಹಾನೆ 3 ಆಕರ್ಷಕ ಬೌಂಡರಿಗಳೊಂದಿಗೆ ಗಮನ ಸೆಳೆದರೂ, ದೊಡ್ಡ ಇನಿಂಗ್ಸ್ ಆಡುವಲ್ಲಿ ಎಡವಿದರು. 5ನೇ ಓವರ್​ನಲ್ಲಿ ಕೃನಾಲ್ ಪಾಂಡ್ಯ ಎಸೆದಲ್ಲಿ ಎಲ್​ಬಿಡಬ್ಲ್ಯೂ ಆಗುವ ಮೂಲಕ ರಹಾನೆ (15) ಸಹ ಹೊರ ನಡೆದರು.

ಇನ್ನು ಪವರ್ ಪ್ಲೇನಲ್ಲಿ ಮುಂಬೈ ಬೌಲರುಗಳು ಮೇಲುಗೈ ಸಾಧಿಸಿದರೂ, ಈ ಹಂತದಲ್ಲಿ ಜೊತೆಗೂಡಿದ್ದ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಮೊದಲ 6 ಓವರ್​ಗಳಲ್ಲಿ 46 ರನ್ ಕಲೆಹಾಕುವಲ್ಲಿ  ಯಶಸ್ವಿಯಾದರು. ಅಲ್ಲದೆ 33 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅದರೊಂದಿಗೆ ಮೊದಲ ಹತ್ತು ಓವರ್​ಗಳಲ್ಲಿ ತಂಡದ ಮೊತ್ತವನ್ನು 80 ರನ್​ಗೆ ತಂದು ನಿಲ್ಲಿಸಿದರು.ಕೃನಾಲ್ ಪಾಂಡ್ಯ ಎಸೆದ 15ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಮುಂದಾದ ಶ್ರೇಯಸ್ ಅಯ್ಯರ್(42) ಟ್ರೆಂಟ್ ಬೌಲ್ಟ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಈ ಹಂತದಲ್ಲಿ ತಂಡದ ಮೊತ್ತ 109 ಕ್ಕೆ ತಲುಪಿತ್ತು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ ಶಿಖರ್ ಧವನ್ ತಮ್ಮ ಅರ್ಧಶತಕ ಪೂರೈಸಿದರು. ಇನ್ನು ಕ್ರೀಸ್​ಗಿಳಿದ ಬೆನ್ನಲ್ಲೇ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಸ್ಟೋಯಿನಿಸ್ (13) ಹೊಂದಾಣಿಕೆಯ ಓಟದ ಕೊರತೆಯಿಂದ ರನೌಟ್ ಆಗಿ ಹೊರ ನಡೆದರು.

ಕೊನೆಯ ಮೂರು ಓವರ್​ಗಳಲ್ಲಿ ಮಾರಕ ದಾಳಿ ಸಂಘಟಿಸಿದ ಮುಂಬೈ ಇಂಡಿಯನ್ಸ್ ಬೌಲರುಗಳಾದ ಜಸ್​ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳನ್ನು ರನ್ ಕದಿಯಲು ಪರದಾಡುವಂತೆ ಮಾಡಿದರು. ಪರಿಣಾಮ ಡೆಲ್ಲಿ ಮೊತ್ತ ನಿಗದಿತ 20 ಓವರ್​ಗಳಲ್ಲಿ 162 ಕ್ಕೆ ಬಂದು ನಿಂತಿತು. ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ 52 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿ ಗಮನ ಸೆಳೆದರು. ಮುಂಬೈ ಪರ ಕೃನಾಲ್ ಪಾಂಡ್ಯ 4 ಓವರ್​ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು.



POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!
Published by: zahir
First published: October 11, 2020, 9:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories