IPL

  • associate partner
HOME » NEWS » Ipl » IPL 2020 MI VS DC HEAD TO HEAD RECORD ZP

MI vs DC: ಡೆಲ್ಲಿ vs ಮುಂಬೈ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಫುಲ್ ಡಿಟೇಲ್ಸ್

MI vs DC Head-to-head record: ಉಭಯ ತಂಡಗಳು ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ತಲಾ 12 ರಲ್ಲಿ ಗೆಲುವು ದಾಖಲಿಸುವ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದೆ. ಇನ್ನು ಕೊನೆಯ ಐದು ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ ಸಾಧಿಸಿದ್ದು, ಮುಂಬೈ ವಿರುದ್ದ 3 ರಲ್ಲಿ ಜಯಗಳಿಸಿದೆ.


Updated:October 11, 2020, 5:16 PM IST
MI vs DC: ಡೆಲ್ಲಿ vs ಮುಂಬೈ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಫುಲ್ ಡಿಟೇಲ್ಸ್
MI vs DC
  • Share this:
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಸೆಣಸಲಿದೆ. ಭರ್ಜರಿ ಪ್ರದರ್ಶನದೊಂದಿಗೆ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದು, ಇಂದಿನ ಪಂದ್ಯದ ಮೂಲಕ ರೋಹಿತ್ ಪಡೆ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.

10 ಪಾಯಿಂಟ್​ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್, ಆರಂಭದಿಂದಲೂ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿರುವ ಡೆಲ್ಲಿ, ಅಮೋಘ ಪ್ರದರ್ಶನ ನೀಡುತ್ತಿದ್ದು, ಈ ಬಾರಿಯ ಐಪಿಎಲ್​ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

ಇನ್ನು 6 ರಲ್ಲಿ 4 ಗೆಲುವು ದಾಖಲಿಸಿರುವ ರೋಹಿತ್ ಶರ್ಮಾ ಸಾರಥ್ಯ ಮುಂಬೈ ಇಂಡಿಯನ್ಸ್ 8 ಪಾಯಿಂಟ್​ಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯವು ಅಗ್ರಸ್ಥಾನಕ್ಕಾಗಿ ಹೋರಾಟ ಎಂಬಂತೆ ಬಿಂಬಿತವಾಗಿದೆ.

ಉಭಯ ತಂಡಗಳು ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ತಲಾ 12 ರಲ್ಲಿ ಗೆಲುವು ದಾಖಲಿಸುವ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದೆ. ಇನ್ನು ಕೊನೆಯ ಐದು ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ ಸಾಧಿಸಿದ್ದು, ಮುಂಬೈ ವಿರುದ್ದ 3 ರಲ್ಲಿ ಜಯಗಳಿಸಿದೆ. ಹಾಗೆಯೇ ಕೊನೆಯ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 40 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

2014 ರ ಯುಎಇ ಐಪಿಎಲ್​ನಲ್ಲಿ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಸೆಣಸಿದ್ದು, ಮುಂಬೈ ಇಂಡಿಯನ್ಸ್ ನೀಡಿದ 125 ರನ್​ಗಳ ಟಾರ್ಗೆಟ್​ನ್ನು ಡೆಲ್ಲಿ ಕ್ಯಾಪಿಟಲ್ಸ್ 18.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಹಿತ್ ಶರ್ಮಾ ಉತ್ತಮ ಫಾರ್ಮ್ ಪ್ರದರ್ಶಿಸಿದ್ದು, ಇದುವರೆಗೆ 560 ರನ್ ಕಲೆಹಾಕಿದ್ದಾರೆ. ಹಾಗೆಯೇ ಮುಂಬೈ ವಿರುದ್ಧ ಡೆಲ್ಲಿ ಪರ ಮಿಂಚಿದ್ದು ವೀರೇಂದ್ರ ಸೆಹ್ವಾಗ್ (375). ಈಗ ಸೆಹ್ವಾಗ್ ತಂಡದಲ್ಲಿ ಇರದಿರುವುದರಿಂದ ಇದು ಗಣನೆಗೆ ಬರುವುದಿಲ್ಲ.
ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್:ಬೌಲಿಂಗ್​ನಲ್ಲಿ ಡೆಲ್ಲಿ ವಿರುದ್ಧ ಮಿಂಚಿದ ಲಸಿತ್ ಮಾಲಿಂಗ (22 ವಿಕೆಟ್), ಹಾಗೂ ಮುಂಬೈ ಪಾಲಿಗೆ ಕಂಟಕವಾಗಿದ್ದ ಅಮಿತ್ ಮಿಶ್ರಾ (15 ವಿಕೆಟ್) ಇಬ್ಬರೂ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ ಇವರಿಬ್ಬರ ಪ್ರದರ್ಶನ ಇಂದಿನ ಪಂದ್ಯದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

ಇನ್ನು ಒಟ್ಟಾರೆ ನೋಡುವುದಾದರೆ ಉಭಯ ತಂಡಗಳು ಸಮಬಲದಿಂದ ಕೂಡಿದ್ದು, ಪ್ರಸ್ತುತ ಟೂರ್ನಿಯಲ್ಲೂ ಎರಡೂ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿದೆ. ಇದಾಗ್ಯೂ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಪಡೆ ಮುಂಬೈಗೆ ಕಠಿಣ ಸವಾಲಾಗುವ ಎಲ್ಲಾ ಸಾಧ್ಯತೆಯಿದೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!
Published by: zahir
First published: October 11, 2020, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories