IPL 2020 MI vs CSK: ಮಿರ ಮಿರ ಮಿಂಚುತ್ತಲೇ ಮಾಹಿ ಕಂಬ್ಯಾಕ್: ಧೋನಿ ಹೊಸ ಲುಕ್ ಭರ್ಜರಿ ವೈರಲ್

ಮೀಸೆ ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗಿಸಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್ ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿಭಿನ್ನ ಶೈಲಿಯಲ್ಲಿ ಮಿಂಚಿದರು.

ಎಂ ಎಸ್ ಧೋನಿ.

ಎಂ ಎಸ್ ಧೋನಿ.

 • Share this:
  ಅಬು ಧಾಬಿ (ಸೆ. 19): ಐಪಿಎಲ್ 13ನೇ ಆವೃತ್ತಿಗೆ ಚಾಲನೆ ದೊರಕಿದೆ. ಇಲ್ಲಿನ ಅಲ್ ಶೇಖ್​​ ​ಝಯೀದ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು ರೋಹಿತ್ ಪಡೆ ಧೋನಿ ತಂಡಕ್ಕೆ ಗೆಲ್ಲಲು 163 ರನ್​ಗಳ ಸವಾಲಿನ ಟಾರ್ಗೆಟ್ ನೀಡಿದೆ. ಕ್ವಿಂಟನ್ ಡಿಕಾಕ್ ಹಾಗೂ ಸೌರಭ್ ತಿವಾರಿ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿತು.

  ಇದಕ್ಕೂ ಮೊದಲು ನಡೆದ ಟಾಸ್ ಪ್ರಕ್ರಿಯೆಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಮೂಲಕ ಸುಮಾರು ಒಂದು ವರ್ಷದ ಬಳಿಕ ಕೂಲ್ ಕ್ಯಾಪ್ಟನ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದಾರೆ. ಜೊತೆಗೆ ಉದ್ಘಾಟನಾ ಪಂದ್ಯದಲ್ಲಿ ಎಂಎಸ್​ಡಿ ಟಾಸ್ ಪ್ರಕ್ರಿಯೆ ವೇಳೆ ಹೊಸ ಲುಕ್​ನಲ್ಲಿ ಕಾಣಿಸಿಕೊಂಡರು.

  IPL 2020 Live Score, MI vs CSK

  ಮೀಸೆ ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗಿಸಿರುವ ಧೋನಿ ಅಂಗಳದಲ್ಲಿ ವಿಭಿನ್ನ ಶೈಲಿಯಲ್ಲಿ ಮಿಂಚಿದರು. ಸದ್ಯ ಧೋನಿ ಅವರ ಈ ಹೊಸ ಲುಕ್​ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಒಂದು ವರ್ಷದ ಬಳಿಕ ಮೈದಾನದಲ್ಲಿ ಧೋನಿಯನ್ನು ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

  ಧೋನಿಯನ್ನು ಐಪಿಎಲ್​ನಲ್ಲಿ ನೋಡಲು ಅಭಿಮಾನಿಗಳು ಕಾದುಕುಳಿತಿದ್ದರು. ಅಲ್ಲದೆ ವೆಲ್‌ಕಂ ಬ್ಯಾಕ್ ಧೋನಿ ಹ್ಯಾಷ್‌ಟ್ಯಾಗ್ ಟ್ವಿಟ್ಟರ್​​ನಲ್ಲಿ ಭರ್ಜರಿ ಟ್ರೆಂಡಿಂಗ್ ಸೃಷ್ಟಿಸಿತ್ತು. ಕಳೆದ ಆಗಸ್ಟ್ 15ರಂದು ಧೋನಿ ಸಂಜೆ 7.29ರ (19.29) ನಂತರ ನನ್ನನ್ನು ನಿವೃತ್ತ ಎಂದು ಪರಿಗಣಿಸಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಅದೇ ಧೋನಿ ಈಗ ಸಂಜೆ 7 ಗಂಟೆಗೆ (19.00) ಐಪಿಎಲ್ ಉದ್ಘಾಟನಾ ಪಂದ್ಯದ ಟಾಸ್ ಮೂಲಕ ಮತ್ತೆ ಮೈದಾನಕ್ಕಿಳಿದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಕಾತರವನ್ನು ಹೆಚ್ಚಿಸಿದೆ.

  IPL 2020 MI vs CSK: ಖಾಲಿ ಸ್ಟೇಡಿಯಂ, ನೋ ಚೀಯರ್​ ಗರ್ಲ್ಸ್​​, ಉದ್ಘಾಟನಾ ಸಮಾರಂಭವಿಲ್ಲದ ಐಪಿಎಲ್ 2020

  ಟಾಸ್ ಪ್ರಕ್ರಿಯೆ ವೇಳೆ ಮಾತನಾಡಿದ ಧೋನಿ, ಮೊದಲ ಆರು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇದ್ದದ್ದು ತುಂಬಾ ಕಠಿಣವಾಗಿತ್ತು. ಆದರೆ, ಇಲ್ಲಿನ ಸೌಲಭ್ಯಗಳು ಉತ್ತಮವಾಗಿವೆ ಎಂದು ದೋನಿ ಹೇಳಿದ್ದಾರೆ.

  2019ರ ಜುಲೈ 10ರಂದು ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ 39 ವರ್ಷದ ಧೋನಿ, ಬಳಿಕ ಈ ವರ್ಷದ ಟಿ-20 ವಿಶ್ವಕಪ್‌ನಲ್ಲಿ ಮರಳುವ ನಿರೀಕ್ಷೆ ಇತ್ತು. ಆದರೆ ವಿಶ್ವಕಪ್ ಮುಂದೂಡಿಕೆಯ ಬೆನ್ನಲ್ಲೇ ಕಳೆದ ಆಗಸ್ಟ್‌ನಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು.
  Published by:Vinay Bhat
  First published: