IPL

  • associate partner
HOME » NEWS » Ipl » IPL 2020 MI VS CSK LIVE SCORE UPDATE RAYUDU SLAMS QUICKFIRE 50 VB

IPL 2020 Live Score, MI vs CSK: ಚೆನ್ನೈ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ

Dream11 IPL 2020 Live Update: ಕೋಟ್ಯಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ 13ನೇ ಆವೃತ್ತಿಯ ಐಪಿಎಲ್ ಇಂದಿನಿಂದ ಶುರುವಾಗಿದೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸುತ್ತಿದೆ.

news18-kannada
Updated:September 19, 2020, 11:06 PM IST
IPL 2020 Live Score, MI vs CSK: ಚೆನ್ನೈ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ
ಅಂಬಾಟಿ ರಾಯುಡು
  • Share this:
ಅಬು ಧಾಬಿ (ಸೆ. 19): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ ಸವಾಲಿನ ಟಾರ್ಗೆಟ್ ನೀಡಿದೆ. ಕ್ವಿಂಟನ್ ಡಿಕಾಕ್ ಹಾಗೂ ಸೌರಭ್ ತಿವಾರಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿದೆ. ಈ ಮೂಲಕ ಧೋನಿ ಪಡೆಗೆ ಗೆಲ್ಲಲು 163 ರನ್​ಗಳ ಟಾರ್ಗೆಟ್ ನೀಡಿದೆ.

ಸದ್ಯ ಈ ಗುರಿ ಬೆನ್ನಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಲುಕಿದೆ. ಮೊದಲ ಎರಡು ಓವರ್​ ಒಳಗೆ 2 ವಿಕೆಟ್ ಕಳೆದುಕೊಂಡಿದೆ. ಪ್ಯಾಟಿನ್​ಸನ್ ಮೊದಲ ಓವರ್​ನಲ್ಲಿ ಶೇನ್ ವಾಟ್ಸನ್(4) ಔಟ್ ಆದರೆ, ಎರಡನೇ ಓವರ್​​ನ ಟ್ರೆಂಟ್ ಬೌಲ್ಟ್​ ಬೌಲಿಂಗ್​ನಲ್ಲಿ ಮುರಳಿ ವಿಜಯ್(1) ನಿರ್ಗಮಿಸಿದರು.

ಈ ಸಂದರ್ಭ ಒಂದಾದ ಫಾಫ್ ಡುಪ್ಲೆಸಿಸ್ ಹಾಗೂ ಅಂಬಟಿ ರಾಯುಡು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಅದರಲ್ಲೂ ಬಿರುಸಿನ ಬ್ಯಾಟಿಂಗ್ ನಡೆಸುತ್ತಿರುವ ರಾಯುಡು ಅರ್ಧಶತಕ ಸಿಡಿಸಿ ಆರ್ಭಟಿಸುತ್ತಿದ್ದಾರೆ. ಶತಕದ ಜೊತೆಯಾಟವೂ ಆಡಿದ್ದಾರೆ.

ಟಾಸ್ ಸೋತು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ ರೋಹಿತ್ ಶರ್ಮಾಹಾಗೂ ಕ್ವಿಂಟನ್ ಡಿಕಾಕ್ ಬಿರುಸಿನ ಆರಂಭ ಒದಗಿಸಿದರು. ರೋಹಿತ್ ಅಂತೂ ಮೊದಲ ಓವರ್​ನ ಮೊದಲ ಎಸೆತದಲ್ಲೇ ತಮ್ಮ ಶೈಲಿಯಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು. ಡಿಕಾಕ್ ಕೂಡ ಆಕ್ರಮಣ ಆಟ ಪ್ರದರ್ಶಿಸಿದರು. 4 ಓವರ್​ನಲ್ಲೇ ತಂಡದ ಮೊತ್ತ 40ರ ಗಡಿ ದಾಟಿತು.

ಆದರೆ, ಈ ಸಂದರ್ಭ 5ನೇ ಓವರ್ ಬೌಲಿಂಗ್ ಮಾಡಲು ಬಂದ ಪಿಯೂಷ್ ಚಾವ್ಲಾ ತನ್ನ 4ನೇ ಎಸೆತದಲ್ಲಿ ರೋಹಿತ್ ಶರ್ಮಾ(12) ಅವರನ್ನು ಔಟ್ ಮಾಡಿದರು. ಇದರ ಮುಂದಿನ ಓವರ್​ನಲ್ಲೇ 20 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಡಿಕಾಕ್ ಕೂಡ ಔಟ್ ಆದರು.

ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಸೌರಭ್ ತಿವಾರಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಈ ಜೋಡಿ 44 ರನ್​ಗಳ ಜೊತೆಯಾಟ ಆಡಿದರು. ಆದರೆ, ಸೂರ್ಯಕುಮಾರ್ ಯಾದವ್ 17 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ತಿವಾರಿ ಕೂಡ (31 ಎಸೆತ 42 ರನ್) ಕೂಡ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಬಂದ ಬೆನ್ನಲ್ಲೇ ಎರಡು ಸಿಕ್ಸರ್ ಸಿಡಿಸಿ ಔಟ್ ಆಗಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು.

ಕೃನಾಲ್ ಪಾಂಡ್ಯ ಆಟ ಕೇವಲ 3 ರನ್​ಗೆ ಅಂತ್ಯವಾಯಿತು. ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊತ್ತ ಕೀರೊನ್ ಪೊಲಾರ್ಡ್​ ಕೂಡ 18 ರನ್​ಗೆ ನಿರ್ಗಮಿಸಿ ಶಾಕ್ ನೀಡಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಅಷ್ಟೊಂದು ಪರಾಕ್ರಮ ಮೆರೆಯಲಿಲ್ಲ.ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಚೆನ್ನೈ ಪರ ಲುಂಗಿ ಎನ್​ಗಿಡಿ 3 ವಿಕೆಟ್ ಕಿತ್ತರೆ ರವೀಂದ್ರ ಜಡೇಜಾ ಹಾಗೂ ದೀಪಕ್ ಚಹಾರ್ ತಲಾ 2 ವಿಕೆಟ್ ಪಡೆದರು.

ಚೆನ್ನೈ ಸೂಪರ್ಕಿಂಗ್ಸ್: ಶೇನ್ವ್ಯಾಟ್ಸನ್‌, ಮುರಳಿ ವಿಜಯ್‌, ಫಾಪ್ ಡುಪ್ಲೆಸಿಸ್, ಅಂಬಾಟಿ ರಾಯುಡು, ಕೇದಾರ್ಜಾಧವ್‌, ಎಂಎಸ್ಧೋನಿ (ನಾಯಕ, ವಿಕೆಟ್ಕೀಪರ್‌), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ಚಹರ್‌, ಪಿಯೂಷ್ ಚಾವ್ಲಾ, ಲುಂಗಿ ಎನ್​ಗಿಡಿ.

ಮುಂಬೈ ಇಂಡಿಯನ್ಸ್‌: ರೋಹಿತ್ಶರ್ಮಾ(ನಾಯಕ), ಕ್ವಿಂಟನ್ಡಿ ಕಾಕ್‌(ವಿ.ಕೀ), ಸೂರ್ಯಕುಮಾರ್ಯಾದವ್‌, ಸೌರಭ್ ತಿವಾರಿ, ಕೀರನ್ಪೊಲಾರ್ಡ್‌, ಹಾರ್ದಿಕ್ಪಾಂಡ್ಯ, ಕೃನಾಲ್ಪಾಂಡ್ಯ, ಜೇಮ್ಸ್ ಪ್ಯಾಟಿನ್​ಸನ್, ರಾಹುಲ್ಚಹರ್, ಜಸ್ಪ್ರಿತ್ಬುಮ್ರಾ, ಟ್ರೆಂಟ್ಬೌಲ್ಟ್‌.ಇನ್ನೂ ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 28 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 17 ಬಾರಿ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ.
Published by: Vinay Bhat
First published: September 19, 2020, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories