news18-kannada Updated:September 19, 2020, 4:01 PM IST
ಅಲ್ ಶೇಖ್ ಝಹೇದ್ ಕ್ರೀಡಾಂಗಣ
ಹತ್ತಾರು ಅಡಚಣೆ, ಕೊರೊನಾ ಸಂಕಷ್ಟ ನಡುವೆ ಹಲವು ಏಳುಬೀಳುಗನ್ನು ಕಂಡು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಿಂದ ಯುಎಇಗೆ ಶಿಫ್ಟ್ ಆಗಿದ್ದು, ಇಂದಿನಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸಲಿದೆ. ಅಲ್ ಶೇಖ್ ಝಹೇದ್ ಕ್ರೀಡಾಂಗಣದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದು, ಈ ಮೂಲಕ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ ಸಿಗಲಿದೆ. ಜೊತೆಗೆ ಮುಂದಿನ 53 ದಿನಗಳ ಕಾಲ ಹೊಡಿಬಡಿ ಆಟ ನಡೆಯಲಿದೆ.
ಆದರೆ, ಕಳೆದ ಬಾರಿಯಂತೆ ಸ್ಟೇಡಿಯಂನಲ್ಲಿ ಈ ಬಾರಿ ಕಿಕ್ಕಿರದ ಅಭಿಮಾನಿಗಳು, ಹರ್ಷೋದ್ಘಾರ ಇರಲ್ಲ. ಭರ್ಜರಿಯಾಗಿ ಉದ್ಘಾಟನೆಯಾಗುತ್ತಿದ್ದ ಶ್ರೀಮಂತ ಕ್ರಿಕೆಟ್ ಲೀಗ್ ಈ ಬಾರಿ ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಾವುದೇ ರೀತಿಯ ಉದ್ಘಾಟನಾ ಸಮಾರಂಭ ಇರುವುದಿಲ್ಲ. ಮತ್ತು ಪಂದ್ಯದ ನಡುವೆ ಬೌಂಡರಿ- ಸಿಕ್ಸರ್ ಹಾಗೂ ವಿಕೆಟ್ ಬಿದ್ದಾಗ ನೃತ್ಯ ಮಾಡುತ್ತಿದ್ದ ಚಿಯರ್ ಲೀಡರ್ಗಳೂ ಇರುವುದಿಲ್ಲ.
IPL 2020 MI vs CSK: ಮೊದಲ ಸೆಣೆಸಾಟಕ್ಕೆ ಮುಂಬೈ-ಚೆನ್ನೈ ರೆಡಿ: ಕಣಕ್ಕಿಳಿಯುವ ಸಂಭಾವ್ಯ ಇಲೆವೆನ್ ಇಲ್ಲಿದೆ
ಆದರೆ, ಯುಎಇ ಸರ್ಕಾರದ ಅನುಮತಿ ಪಡೆದು ಟೂರ್ನಿಯ ಮಧ್ಯಂತರದಲ್ಲಿ ಶೇ. 50 ರಷ್ಟು ಅಭಿಮಾನಿಗಳಿಗೆ ಮೈದಾನಕ್ಕೆ ಬಂದು ಪಂದ್ಯ ನೋಡುವ ಅವಕಾಶ ನೀಡಬಹುದು ಎನ್ನಲಾಗಿದೆ. ಇದರ ಬಗ್ಗೆ ಖಚಿತ ಮಾಹಿತಿಯಿಲ್ಲ.
ಇನ್ನೂ ಕೋವಿಡ್ 19 ಭೀತಿಯಿಂದಾಗಿ ಚೆಂಡಿನ ಹೊಳಪನ್ನು ಕಾಯ್ದುಕೊಳ್ಳಲು ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ. ಎಂಜಲಿನ ಬದಲು ಚೆಂಡಿಗೆ ಬೆವರು ಹಚ್ಚಬಹುದಾಗಿದೆ. ಅಷ್ಟೇ ಅಲ್ಲದೆ ಪಂದ್ಯ ಆರಂಭಕ್ಕೆ ಮುನ್ನ ಅಥವಾ ಪಂದ್ಯ ಮುಗಿದ ಬಳಿಕ ಪತ್ರಕರ್ತರೊಂದಿಗೆ ತಂಡದ ನಾಯಕ ಅಥವಾ ಕೋಚ್ ಸುದ್ದಿಗೋಷ್ಠಿ ನಡೆಸುವುದು ವಾಡಿಕೆ. ಆದರೆ, ಈ ಬಾರಿ ಈರೀತಿಯ ಚಟುವಟಿಕೆ ಇರುವುದಿಲ್ಲ.
ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ ಎಂಟು ತಂಡಗಳು ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ಗಳ ಪಟ್ಟಿ ನೀಡಿದೆ. ಈ ಪ್ರೋಟೋಕಾಲ್ಗಳು ಯುಎಇಗೆ ಚಾರ್ಟೆಡ್ ವಿಮಾನ ಹತ್ತಿದ ದಿನದಿಂದ ಟೂರ್ನಮೆಂಟ್ನ ಕೊನೆಯ ದಿನದ ಕೊನೆಯ ಎಸೆತದವರೆಗೂ ಅನ್ವಯವಾಗಿರಲಿದೆ. ಇದರ ಪ್ರಕಾರ ಒಬ್ಬ ಆಟಗಾರ ಮತ್ತೊಬ್ಬ ಆಟಗಾರನ ಹೋಟೆಲ್ ಕೋಣೆಗೆ ಭೇಟಿಯಾಗುವ ಆಗಿಲ್ಲ. ಅವರ ಪಂದ್ಯದ ಬಗ್ಗೆ ಚರ್ಚಿಸಲು ಸೇರುವ ಸಂದರ್ಭದಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ.
IPL 2020: ಇಂದಿನಿಂದ ಐಪಿಎಲ್ 13ನೇ ಆವೃತ್ತಿ ಆರಂಭ: MI vs CSK ನಡುವೆ ಹೈವೋಲ್ಟೇಜ್ ಪಂದ್ಯ ನಿರೀಕ್ಷೆ!
ಇನ್ನೂ ಹಲವು ನಿಯಾಮವಳಿಗಳ ಮಧ್ಯೆ ನಡೆಯುತ್ತಿರುವ ಐಪಿಎಲ್ನಲ್ಲಿ ಈ ವರ್ಷ ರಾತ್ರಿ ಪಂದ್ಯಗಳು 8 ಗಂಟೆಗೆ ಪ್ರಾರಂಭವಾಗುವ ಬದಲು 7:30 ಕ್ಕೆ 30 ನಿಮಿಷ ಮುಂಚಿತವಾಗಿ ಶುರುವಾಗಲಿದೆ. ಮಧ್ಯಾಹ್ನದ ಪಂದ್ಯಗಳು 4 ಗಂಟೆಗೆ ಬದಲಾಗಿ 3: 30 ಕ್ಕೆ ಪ್ರಾರಂಭವಾಗುತ್ತಿದೆ.
ಪಂದ್ಯದ ಮಧ್ಯೆ ಅಥವಾ ಒಂದು ತಂಡದ ಪಂದ್ಯ ಗೆದ್ದ ಬಳಿಕ ಸಾಮಾನ್ಯವಾಗಿ ಡ್ರೆಸ್ಸಿಂಗ್ ರೋಂಗೆ ತೆರಳಿ ಕುಣಿಸು ಕುಪ್ಪಳಿಸುವುದು ನೀವು ನೋಡೆ ಇರುತ್ತೀರಿ. ಅಥವಾ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ಗುಂಪುಗೂಡಿ ಸಮಲೋಚನೆ ನಡೆಸುತ್ತಿರುತ್ತಾರೆ. ಆದರೆ, ಈ ಬಾರಿ ಈರೀತಿಯಾಗಿ ಯಾವುದು ನಡೆಯುವುದಿಲ್ಲ.
Published by:
Vinay Bhat
First published:
September 19, 2020, 4:01 PM IST