IPL

  • associate partner
HOME » NEWS » Ipl » IPL 2020 MI KKR BURJ KHALIFA LIGHTS UP FOR KOLKATA KNIGHT RIDERS ZP

IPL 2020, VIDEO: ಬುರ್ಜ್ ಖಲೀಫಾ ಮೇಲೆ ಮಿಂಚಿದ KKR ಆಟಗಾರರು

ದಿನೇಶ್ ಕಾರ್ತಿಕ್ ಸಾರಥ್ಯದ ಕೆಕೆಆರ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಜಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸುವ ವಿಶ್ವಾಸದಲ್ಲಿದೆ.

news18-kannada
Updated:September 23, 2020, 6:24 PM IST
IPL 2020, VIDEO: ಬುರ್ಜ್ ಖಲೀಫಾ ಮೇಲೆ ಮಿಂಚಿದ KKR ಆಟಗಾರರು
KKR
  • Share this:
IPLನ 13ನೇ ಸೀಸನ್ ಆರಂಭಿಸುವ ಮುನ್ನವೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಒಂದು ಸರ್​ಪ್ರೈಸ್ ಕಾದಿತ್ತು. ವಿಶ್ವದ ಪ್ರತಿಷ್ಠಿತ ಹಾಗೂ ಅತ್ಯಂತ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ ಕೆಕೆಆರ್ ತಂಡದ ಲಾಂಛನ ಮತ್ತು ಆಟಗಾರರ ಚಿತ್ರ ಪ್ರದರ್ಶಿಸಲಾಯಿತು. ಈ ಗೌರವ ಪಡೆದ ಮೊದಲ ಕ್ರಿಕೆಟ್ ತಂಡದ ಹೆಗ್ಗಳಿಕೆ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್​ದ್ದಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿರುವ ಕೆಕೆಆರ್ ತಂಡಕ್ಕೆ ಮಂಗಳವಾರ ರಾತ್ರಿ​ ಈ ಮೂಲಕ ಅರಬ್ ರಾಷ್ಟ್ರ ಶುಭಕೋರಿದೆ. ಈ ಕಂಗೊಳಿಸುವ ವಿಡಿಯೋವನ್ನು ಕೆಕೆಆರ್ ತಂಡ ಟ್ವಿಟರ್ ಖಾತೆಯಲ್ಲಿ ಪ್ರದರ್ಶಿಸಿದ್ದು, ಅಭಿಮಾನಿಗಳ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ಕೆಕೆಆರ್ ತಂಡದ ಮಾಲೀಕರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ ಅವರಿಗೂ ಬುರ್ಜ್ ಖಲೀಫಾದಲ್ಲಿ ಫ್ಲ್ಯಾಟ್ ಇದ್ದು, ಇದೇ ಕಾರಣದಿಂದ ಕೆಕೆಆರ್ ತಂಡಕ್ಕೆ ಈ ಗೌರವ ನೀಡಲಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಭರ್ಜರಿ ತಯಾರಿಯೊಂದಿಗೆ ಮೊದಲ ಪಂದ್ಯಕ್ಕಾಗಿ ಸಜ್ಜಾಗಿದ್ದ ಕೆಕೆಆರ್​ ಆಟಗಾರರಿಗೆ ಪ್ರತಿಷ್ಠಿತ ಗೌರವ ಸಿಕ್ಕ ಹುಮ್ಮಸ್ಸಿನಲ್ಲಿದ್ದಾರೆ.ದಿನೇಶ್ ಕಾರ್ತಿಕ್ ಸಾರಥ್ಯದ ಕೆಕೆಆರ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಜಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸುವ ವಿಶ್ವಾಸದಲ್ಲಿದೆ. ಹಾಗೆಯೇ ಮೊದಲ ಪಂದ್ಯದಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್​ ಕೆಕೆಆರ್ ವಿರುದ್ಧ ಗೆಲ್ಲುವ ಮೂಲಕ ಜಯದ ಖಾತೆ ತೆರೆಯಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020, KKR vs MI: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವವರು ಯಾರು? ಇಲ್ಲಿದೆ ಮಾಹಿತಿ
Published by: zahir
First published: September 23, 2020, 6:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories