IPL

  • associate partner
HOME » NEWS » Ipl » IPL 2020 LIVE SCORE SRH VS KXIP TODAYS MATCH AT DUBAI SRH FINISH WITH 201 6 VB

IPL 2020, SRH vs KXIP: ವಾರ್ನರ್-ಬೈರ್​​ಸ್ಟೋ 91 ಎಸೆತಗಳಲ್ಲಿ 160 ರನ್: ಪಂಜಾಬ್​ಗೆ 202 ರನ್ಸ್​ ಟಾರ್ಗೆಟ್

IPL 2020, Hyderabad vs Punjab Live Score: ಐಪಿಎಲ್​ನಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್​, 4 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದ ಇತಿಹಾಸವಿದೆ.

news18-kannada
Updated:October 8, 2020, 9:29 PM IST
IPL 2020, SRH vs KXIP: ವಾರ್ನರ್-ಬೈರ್​​ಸ್ಟೋ 91 ಎಸೆತಗಳಲ್ಲಿ 160 ರನ್: ಪಂಜಾಬ್​ಗೆ 202 ರನ್ಸ್​ ಟಾರ್ಗೆಟ್
ಪ್ರಮುಖವಾಗಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚದ ಅಭಿಷೇಕ್ ಶರ್ಮಾ ಬದಲು ಬ್ಯಾಟಿಂಗ್ ಬಲ ಹೆಚ್ಚಿಸಲು ಶ್ರೀವತ್ಸ್ ಗೋಸ್ವಾಮಿ ಕಣಕ್ಕಿಳಿಯುವ ಅಂದಾಜಿದೆ. ಜೊತೆಗೆ ಕೇನ್ ವಿಲಿಯಮ್ಸನ್ ಬದಲು ಜಾನಿ ಬೈರ್ಸ್ಟೋ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲು ಕಮ್ಬ್ಯಾಕ್ ಮಾಡಬಹುದು.
  • Share this:
ದುಬೈ (ಅ. 08): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಸವಾಲಿನ ಮೊತ್ತ ಕಲೆಹಾಕಿದೆ. ಜಾನಿ ಬೈರ್​ಸ್ಟೋ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಸನ್​ರೈಸರ್ಸ್​ ರಾಹುಲ್ ಪಡೆಗೆ ಗೆಲ್ಲಲು 202 ರನ್​ಗಳ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. ಓಪನರ್​ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಭರ್ಜರಿ ಬ್ಯಾಟಿಂಗ್ ಮಾಡಿದರು. 5 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.

ಪವರ್ ಪ್ಲೇ ಮುಗಿದ ಬಳಿಕ ಅಬ್ಬರಿಸಿದ ಬೈರ್​ಸ್ಟೋ ಮನಬಂದಂತೆ ಬ್ಯಾಟ್ ಬೀಸಿದರು. ಪಂಜಾಬ್ ಬೌಲರ್​ಗಳ ಬೆವರಿಳಿಸಿದ ಬೈರ್​ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿ 10 ಓವರ್ ಆಗುವ ಹೊತ್ತಿ​ಗೆ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಈ ಜೋಡಿ ಅಮೋಘ 160 ರನ್​ಗಳ ಜೊತೆಯಾಟ ಆಡಿತು. ವಾರ್ನರ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 52 ರನ್​ಗೆ ಔಟ್ ಆದರು.


ಇದರ ಬೆನ್ನಲ್ಲೇ ಶತಕದ ಅಂಚಿನಲ್ಲಿದ್ದ ಬೈರ್​ಸ್ಟೋ ಕೂಡ ಔಟ್ ಆದರು. 55 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿ ಬೈರ್​ಸ್ಟೋ ಎಲ್​ಬಿ ಬಲೆಗೆ ಸಿಲುಕಿದರು. ಆ ಬಳಿಕ ಹೈದರಾಬಾದ್ ತಂಡ ದಿಢೀರ್ ಕುಸಿತ ಕಂಡಿತು. ಕೊನೆಯ 5 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 40 ರನ್ ಕಲೆಹಾಕಿತು. ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು.

ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿತು. ಪಂಜಾಬ್ ಪರ ರವಿ ಬಿಷ್ಟೋಯ್ 3 ವಿಕೆಟ್ ಕಿತ್ತರೆ, ಅರ್ಶ್​ದೀಪ್ ನಾಥ್ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಖಲೀಲ್ ಅಹ್ಮದ್.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ಗ್ಲೆನ್ ಮ್ಯಾಕ್ಸ್ ವೆಲ್, ಸಿಮ್ರಾನ್ ಸಿಂಗ್, ನಿಕೋಲಸ್ ಪೂರನ್ , ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ಅರ್ಶ್​ದೀಪ್ ನಾಥ್, ಮಜೀದ್ ಉರ್ ರೆಹ್ಮಾನ್, ಮೊಹಮ್ಮದ್ ಶಮಿ.
Published by: Vinay Bhat
First published: October 8, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories