IPL

  • associate partner
HOME » NEWS » Ipl » IPL 2020 LIVE SCORE SRH VS KXIP TODAY S MATCH AT DUBAI SUNRISERS HYDERABAD WON BY 69 RUNS VB

IPL 2020, SRH vs KXIP: ಬ್ಯಾಟಿಂಗ್-ಬೌಲಿಂಗ್​ನಲ್ಲಿ ವಾರ್ನರ್ ಪಡೆಯ ಅಬ್ಬರ: ಪಂಜಾಬ್​ಗೆ 5ನೇ ಸೋಲು

IPL 2020, Hyderabad vs Punjab: ಪೂರನ್ ಬ್ಯಾಟ್​ನಿಂದ ಸಿಕ್ಸರ್​ಗಳ ಮಳೆ ಸುರಿಯಿತು. ಪರಿಣಾಮ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಐಪಿಎಲ್ 2020ರ ಅತ್ಯಂತ ವೇಗದ ಅರ್ಧಶತಕ ಇದಾಯಿತು.

news18-kannada
Updated:October 8, 2020, 11:22 PM IST
IPL 2020, SRH vs KXIP: ಬ್ಯಾಟಿಂಗ್-ಬೌಲಿಂಗ್​ನಲ್ಲಿ ವಾರ್ನರ್ ಪಡೆಯ ಅಬ್ಬರ: ಪಂಜಾಬ್​ಗೆ 5ನೇ ಸೋಲು
SRH
  • Share this:
ದುಬೈ (ಅ. 08): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್​ನಲ್ಲಿ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಮಿಂಚಿದರೆ, ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಸನ್​ರೈಸರ್ಸ್​ 69 ರನ್​ಗಳ ಜಯ ಕಂಡಿದೆ. ನಿಕೋಲಸ್ ಪೂರನ್ ಏಕಾಂಗಿ ಹೋರಾಟ ಪಂಜಾಬ್ ತಂಡಕ್ಕೆ ಯಾವುದೇ ಪ್ರಯೋಜನ ನೀಡಲಿಲ್ಲ.

ಹೈದರಾಬಾದ್ ನೀಡಿದ್ದ 202 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಯಾಂಕ್ ಅಗರ್ವಾಲ್ 9 ರನ್​ಗೆ ಔಟ್ ಆದರೆ, ಸಿಮ್ರಾನ್ ಸಿಂಗ್ 11 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ನಾಯಕ ಕೆ. ಎಲ್ ರಾಹುಲ್ ಕೂಡ 11 ರನ್​ಗೆ ಸುಸ್ತಾದರು.

ಈ ಸಂದರ್ಭ ಗ್ಲೆನ್ ಮ್ಯಾಕ್ಸ್​ವೆಲ್ ಜೊತೆಯಾಗಿರುವ ನಿಕೋಲಸ್ ಪೂರನ್ ಸ್ಫೋಟಕ ಆಟವಾಡಿದರು. ಪೂರನ್ ಬ್ಯಾಟ್​ನಿಂದ ಸಿಕ್ಸರ್​ಗಳ ಮಳೆ ಸುರಿಯಿತು. ಪರಿಣಾಮ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಐಪಿಎಲ್ 2020ರ ಅತ್ಯಂತ ವೇಗದ ಅರ್ಧಶತಕ ಇದಾಯಿತು.

ಆದರೆ, ಇವರಿಗೆ ಸಾತ್ ನೀಡಬೇಕಿದ್ದ ಮ್ಯಾಕ್ಸ್​ವೆಲ್ 7 ರನ್​ಗೆ ನಿರ್ಗಮಿಸಿದರೆ, ಮಂದೀಪ್ ಸಿಂಗ್ ಕೂಡ 6 ರನ್​ಗೆ ಔಟ್ ಆದರು. ಬಳಿಕ ಪೂರನ್ ಕೂಡ ಅಂತಿಮವಾಗಿ 37 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಿಡಿಸಿ 77 ರನ್​ಗೆ ಔಟ್ ಆದರು. ನಂತರ ಬಂದ ಬ್ಯಾಟ್ಸ್​ಮನ್​ಗಳು ಯಾರೂ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.ಪಂಜಾಬ್ ತಂಡ 16.5 ಓವರ್​ನಲ್ಲಿ 132 ರನ್​ಗೆ ಆಲೌಟ್ ಆಯಿತು. ಪಂಜಾಬ್ ಪರ ರಶೀದ್ ಖಾನ್ 3 ವಿಕೆಟ್ ಕಿತ್ತರೆ, ಖಲೀಲ್ ಅಹ್ಮದ್ ಹಾಗೂ ನಟರಾಜನ್ ತಲಾ 2  ವಿಕೆಟ್ ಮತ್ತು ಅಭಿಷೇಕ್ ಶರ್ಮಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. ಓಪನರ್​ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಭರ್ಜರಿ ಬ್ಯಾಟಿಂಗ್ ಮಾಡಿದರು. 5 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.

ಪವರ್ ಪ್ಲೇ ಮುಗಿದ ಬಳಿಕ ಅಬ್ಬರಿಸಿದ ಬೈರ್​ಸ್ಟೋ ಮನಬಂದಂತೆ ಬ್ಯಾಟ್ ಬೀಸಿದರು. ಪಂಜಾಬ್ ಬೌಲರ್​ಗಳ ಬೆವರಿಳಿಸಿದ ಬೈರ್​ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿ 10 ಓವರ್ ಆಗುವ ಹೊತ್ತಿ​ಗೆ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಈ ಜೋಡಿ ಅಮೋಘ 160 ರನ್​ಗಳ ಜೊತೆಯಾಟ ಆಡಿತು. ವಾರ್ನರ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 52 ರನ್​ಗೆ ಔಟ್ ಆದರು.

ಇದರ ಬೆನ್ನಲ್ಲೇ ಶತಕದ ಅಂಚಿನಲ್ಲಿದ್ದ ಬೈರ್​ಸ್ಟೋ ಕೂಡ ಔಟ್ ಆದರು. 55 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿ ಬೈರ್​ಸ್ಟೋ ಎಲ್​ಬಿ ಬಲೆಗೆ ಸಿಲುಕಿದರು. ಆ ಬಳಿಕ ಹೈದರಾಬಾದ್ ತಂಡ ದಿಢೀರ್ ಕುಸಿತ ಕಂಡಿತು. ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು.

ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿತು. ಪಂಜಾಬ್ ಪರ ರವಿ ಬಿಷ್ಟೋಯ್ 3 ವಿಕೆಟ್ ಕಿತ್ತರೆ, ಅರ್ಶ್​ದೀಪ್ ನಾಥ್ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.
Published by: Vinay Bhat
First published: October 8, 2020, 11:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories