IPL

  • associate partner
HOME » NEWS » Ipl » IPL 2020 LIVE SCORE SRH VS KXIP MATCH 22 DUBAI LATEST UPDATES POORAN SLAMS 17 BALL 50 VB

SRH vs KXIP, IPL 2020 LIVE Score: ಪೂರನ್ ಔಟ್: ಸೋಲಿನ ಸುಳಿಯಲ್ಲಿ ಪಂಜಾಬ್

IPL 2020, Hyderabad vs Punjab Live Score: ಐಪಿಎಲ್​ನಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್​, 4 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದ ಇತಿಹಾಸವಿದೆ.

news18-kannada
Updated:October 8, 2020, 11:10 PM IST
SRH vs KXIP, IPL 2020 LIVE Score: ಪೂರನ್ ಔಟ್: ಸೋಲಿನ ಸುಳಿಯಲ್ಲಿ ಪಂಜಾಬ್
ನಿಕೋಲಸ್ ಪೂರನ್
  • Share this:
ದುಬೈ (ಅ. 08): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಸವಾಲಿನ ಮೊತ್ತ ಕಲೆಹಾಕಿದೆ. ಜಾನಿ ಬೈರ್​ಸ್ಟೋ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಸನ್​ರೈಸರ್ಸ್​ ರಾಹುಲ್ ಪಡೆಗೆ ಗೆಲ್ಲಲು 202 ರನ್​ಗಳ ಟಾರ್ಗೆಟ್ ನೀಡಿದೆ.

ಸದ್ಯ ಗುರಿ ಬೆನ್ನಟ್ಟಿರುವ ಪಂಜಾಬ್ ತಂಡದ ಆರಂಭದಲ್ಲೇ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಯಾಂಕ್ ಅಗರ್ವಾಲ್ 9 ರನ್​ಗೆ ಔಟ್ ಆದರೆ, ಸಿಮ್ರಾನ್ ಸಿಂಗ್ 11 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ನಾಯಕ ಕೆ. ಎಲ್ ರಾಹುಲ್ ಕೂಡ 11 ರನ್​ಗೆ ಸುಸ್ತಾದರು.

ಈ ಸಂದರ್ಭ ಗ್ಲೆನ್ ಮ್ಯಾಕ್ಸ್​ವೆಲ್ ಜೊತೆಯಾಗಿರುವ ನಿಕೋಲಸ್ ಪೂರನ್ ಸ್ಫೋಟಕ ಆಟವಾಡಿದರು. ಪೂರನ್ ಬ್ಯಾಟ್​ನಿಂದ ಸಿಕ್ಸರ್​ಗಳ ಮಳೆ ಸುರಿಯಿತು. ಪರಿಣಾಮ ಕೇವಲ 17 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು. ಐಪಿಎಲ್ 2020ರ ಅತ್ಯಂತ ವೇಗದ ಅರ್ಧಶತಕ ಇದಾಯಿತು.

ಆದರೆ, ಇವರಿಗೆ ಸಾತ್ ನೀಡಬೇಕಿದ್ದ ಮ್ಯಾಕ್ಸ್​ವೆಲ್ 7 ರನ್​ಗೆ ನಿರ್ಗಮಿಸಿದರೆ, ಮಂದೀಪ್ ಸಿಂಗ್ ಕೂಡ 6 ರನ್​ಗೆ ಔಟ್ ಆದರು. ಸದ್ಯ ಪೂರನ್ ಹಾಗೂ ಮಜೀದ್ ಕ್ರೀಸ್​ನಲ್ಲಿದ್ದಾರೆ.

ಟಾಸ್ ಗೆದ್ದ ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. ಓಪನರ್​ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಭರ್ಜರಿ ಬ್ಯಾಟಿಂಗ್ ಮಾಡಿದರು. 5 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.

ಪವರ್ ಪ್ಲೇ ಮುಗಿದ ಬಳಿಕ ಅಬ್ಬರಿಸಿದ ಬೈರ್​ಸ್ಟೋ ಮನಬಂದಂತೆ ಬ್ಯಾಟ್ ಬೀಸಿದರು. ಪಂಜಾಬ್ ಬೌಲರ್​ಗಳ ಬೆವರಿಳಿಸಿದ ಬೈರ್​ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿ 10 ಓವರ್ ಆಗುವ ಹೊತ್ತಿ​ಗೆ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಈ ಜೋಡಿ ಅಮೋಘ 160 ರನ್​ಗಳ ಜೊತೆಯಾಟ ಆಡಿತು. ವಾರ್ನರ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 52 ರನ್​ಗೆ ಔಟ್ ಆದರು.

ಇದರ ಬೆನ್ನಲ್ಲೇ ಶತಕದ ಅಂಚಿನಲ್ಲಿದ್ದ ಬೈರ್​ಸ್ಟೋ ಕೂಡ ಔಟ್ ಆದರು. 55 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿ ಬೈರ್​ಸ್ಟೋ ಎಲ್​ಬಿ ಬಲೆಗೆ ಸಿಲುಕಿದರು. ಆ ಬಳಿಕ ಹೈದರಾಬಾದ್ ತಂಡ ದಿಢೀರ್ ಕುಸಿತ ಕಂಡಿತು. ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು.

ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿತು. ಪಂಜಾಬ್ ಪರ ರವಿ ಬಿಷ್ಟೋಯ್ 3 ವಿಕೆಟ್ ಕಿತ್ತರೆ, ಅರ್ಶ್​ದೀಪ್ ನಾಥ್ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಖಲೀಲ್ ಅಹ್ಮದ್.

ಇತ್ತ ಪಂಜಾಬ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಕ್ರಿಸ್ ಜೋರ್ಡಾನ್, ಹರ್ಪ್ರೀತ್ ಬ್ರಾರ್ ಹಾಗೂ ಸರ್ಫರಾಜ್ ಖಾನ್ ತಂಡದಿಂದ ಹೊರಗುಳಿದಿದ್ದು, ಇವರ ಜಾಗಕ್ಕೆ ಪ್ರಭ್ ಸಿಮ್ರಾನ್, ಅರ್ಶ್​ದೀಪ್ ನಾಥ್ ಹಾಗೂ ಮುಜೀದ್ ಉರ್ ರೆಹ್ಮಾನ್ ಸ್ಥಾನ ಪಡೆದುಕೊಂಡಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ಗ್ಲೆನ್ ಮ್ಯಾಕ್ಸ್ ವೆಲ್, ಸಿಮ್ರಾನ್ ಸಿಂಗ್, ನಿಕೋಲಸ್ ಪೂರನ್ , ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ಅರ್ಶ್​ದೀಪ್ ನಾಥ್, ಮಜೀದ್ ಉರ್ ರೆಹ್ಮಾನ್, ಮೊಹಮ್ಮದ್ ಶಮಿ.

ಪಂಜಾಬ್ ತಂಡ ಆಡಿರುವ 5 ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೆ ಗೆದ್ದು ನಾಲ್ಕರಲ್ಲಿ ಸೋಲುಕಂಡಿದೆ. ಇತ್ತ ಹೈದರಾಬಾದ್ ಐದು ಪಂದ್ಯಗಳಲ್ಲಿ ಎರಡು ಗೆದ್ದು ಮೂರರಲ್ಲಿ ಸೋಲುಂಡಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದೆ.

ಕೆ. ಎಲ್ ರಾಹುಲ್ ಪಡೆ ಸಮರ್ಥ ಆಟಗಾರರನ್ನು ಹೊಂದಿದ್ದರೂ ಗೆಲುವು ಸಾಧಿಸುವಲ್ಲಿ ಎಡವುತ್ತಿದೆ. ಉಭಯ ಕನ್ನಡಿಗರಾದ ರಾಹುಲ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಿಕೋಲಸ್ ಪೂರನ್ ಕೂಡ ತಮ್ಮ ನೈಜ್ಯ ಆಟವಾಡುತ್ತಿದ್ದಾರೆ. ಆದರೆ, ಪಂದ್ಯವನ್ನು ಫಿನಿಶ್ ಮಾಡುವವರು ಯಾರು ಎಂಬುದು ನೋಡಬೇಕಿದೆ.

ಇತ್ತ ಹೈದರಾಬಾದ್ ತಂಡ ಕೂಡ ಅನುಭವಿ ಆಟಗಾರರಿಂದ ಕೂಡಿದ್ದರೂ ಗೆಲುವು ಕಾಣುತ್ತಿಲ್ಲ. ಭುವನೇಶ್ವರ್ ಕುಮಾರ್ ಟೂರ್ನಿಂದಲೇ ಹೊರ ನಡೆದಿರುವುದು ತಂಡಕ್ಕೆ ಮತ್ತೊಂದು ಆಘಾತ.

ನಾಯಕ ವಾರ್ನರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಆದರೂ ಇವರಿಗೆ ಜೋಡಿಯಾಗಿರುವ ಜಾನಿ ಬೈರ್​ಸ್ಟೋ ಬ್ಯಾಟ್​ನಿಂದ ರನ್ ಬರುತ್ತಿಲ್ಲ. ಮನೀಶ್ ಪಾಂಡೆ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಇವರೆಲ್ಲ ಇಂದು ಮಿಂಚಲೇ ಬೇಕಾಗಿದೆ.

ಈವರೆಗೆ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಜಯದ ನಗೆ ಬೀರಿದ್ದರೆ, 4 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ.
Published by: Vinay Bhat
First published: October 8, 2020, 10:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories