RCB vs RR: ರಾಯಲ್ಸ್ ಎದುರು ಮಿಂಚಿದ ಚಾಲೆಂಜರ್ಸ್​: ಅಂಕಪಟ್ಟಿಯಲ್ಲಿ ಆರ್​ಸಿಬಿ ಟಾಪ್!

8 ವಿಕೆಟ್​ಗಳ ಬೊಂಬಾಟ್ ಜಯದೊಂದಿಗೆ ಆರ್​ಸಿಬಿ ತಂಡ ಐಪಿಎಲ್ 2020 ರಲ್ಲಿ 6 ಅಂಕ ಸಂಪಾದಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ವಿರಾಟ್ ಕೊಹ್ಲಿ - ದೇವದತ್ ಪಡಿಕ್ಕಲ್.

ವಿರಾಟ್ ಕೊಹ್ಲಿ - ದೇವದತ್ ಪಡಿಕ್ಕಲ್.

 • Share this:
  ಅಬುಧಾಬಿ (ಅ. 03): ಇಲ್ಲಿನ ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್​ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಕೊಹ್ಲಿ ಹುಡುಗರು 8 ವಿಕೆಟ್​ಗಳ ಜಯದೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

  ರಾಜಸ್ಥಾನ್ ನೀಡಿದ್ದ 155 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್​ಸಿಬಿ ಆರಂಭದಲ್ಲೇ ಆ್ಯರೋನ್ ಫಿಂಚ್(8) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಶುರುವಾಗಿದ್ದು, ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿಯ ಬೊಂಬಾಟ್ ಆಟ.

  ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ ಕಿಂಗ್ ಕೊಹ್ಲಿ ಅತ್ಯುತ್ತಮ ಸಾತ್ ನೀಡಿದರು. ಈ ಜೋಡಿ ತಂಡದ ಗೆಲುವನ್ನು ಪಕ್ಕ ಮಾಡಿತು. ಜೊತೆಗೆ ಬರೋಬ್ಬರು 99 ರನ್​ಗಳ ಜೊತೆಯಾಟ ಆಡಿತು.

  ಪಡಿಕ್ಕಲ್ 53 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 63 ರನ್ ಚಚ್ಚಿದರೆ, ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 75 ರನ್ ಗಳಿಸಿದರು. ಆರ್​ಸಿಬಿ 19.1 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ ಹಾಗೂ ಜೋಫ್ರಾ ಆರ್ಚರ್ ತಲಾ 1 ವಿಕೆಟ್ ಪಡೆದರು.

  8 ವಿಕೆಟ್​ಗಳ ಬೊಂಬಾಟ್ ಜಯದೊಂದಿಗೆ ಆರ್​ಸಿಬಿ ತಂಡ ಐಪಿಎಲ್ 2020 ರಲ್ಲಿ 6 ಅಂಕ ಸಂಪಾದಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

  ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​​ಆರ್​ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಕಣಕ್ಕಿಳಿದ ಓಪನರ್​ಗಳ ಪೈಕಿ ನಾಯಕ ಸ್ಮಿತ್(5) ಮೂರನೇ ಓವರ್​ನಲ್ಲಿ ಇಸುರು ಉದಾನ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ಇದಾದ ಬೆನ್ನಲ್ಲೇ 22 ರನ್ ಗಳಿಸಿದ್ದ ಜಾಸ್ ಬಟ್ಲರ್ ಕೂಡ ನಿರ್ಗಮಿಸಿದರು.

  ತಂಡಕ್ಕೆ ಆಸರೆಯಾಗುತ್ತಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಕೇವಲ 4 ರನ್​ಗೆ ಪೆವಿಲಿಯನ್​ಗೆ ಸೇರಿಸಕೊಂಡರೆ, ರಾಬಿನ್ ಉತ್ತಪ್ಪ ಆಟ 17 ರನ್​ಗೆ ಅಂತ್ಯವಾಯಿತು. ನಂತರ ಮಾಹಿಪಾಲ್ ಲಮ್ರೋರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರಾದರೂ ಇವರಿಗೆ ರಿಯಾನ್ ಪರಾಗ್(16) ಉತ್ತಮ ಸಾತ್ ನೀಡಲಿಲ್ಲ.

  ಮಾಹಿಪಾಲ್ ಕೂಡ 39 ಎಸೆತಗಳಳ್ಲಿ 1 ಬೌಂಡರಿ, 3 ಸಿಕ್ಸರ್ ಸಿಡಿಸಿ 47 ರನ್​ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ರಾಹುಲ್ ತೇವಾಟಿಯ(24) ಹಾಗೂ ಜೋಫ್ರಾ ಆರ್ಚರ್(16) ಒಂದಿಷ್ಟು ರನ್ ಕಲೆಹಾಕಿದರು.

  ಅಂತಿಮವಾಗಿ ರಾಜಸ್ಥಾನ್ ತಂಡ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಆರ್​ಸಿಬಿ ಪರ ಯಜುವೇಂದ್ರ ಚಹಾಲ್ 3 ವಿಕೆಟ್ ಕಿತ್ತರೆ, ಇಸುರು ಉದಾನ 2 ಹಾಗೂ ನವ್​ದೀಪ್ ಸೈನಿ 1 ವಿಕೆಟ್ ಪಡೆದರು.
  Published by:Vinay Bhat
  First published: