IPL

  • associate partner
HOME » NEWS » Ipl » IPL 2020 LIVE SCORE RCB VS KXIP TODAYS MATCH AT SHARJAH KINGS XI PUNJAB WON BY 8 WKTS VB

IPL 2020, RCB vs KXIP: ಆರ್ಭಟಿಸಿದ ರಾಹುಲ್-ಗೇಲ್: ರೋಚಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತ ಆರ್​ಸಿಬಿ

ಅರ್ಧಶತಕ ಸಿಡಿಸಿದ ರಾಹುಲ್ ಜೊತೆಯಾದ ಕ್ರೀಸ್​ ಗೇಲ್ ಬೊಂಬಾಟ್ ಆಟ ಪ್ರದರ್ಶಿಸಿ ತಂಡದ ಗೆಲುವನ್ನು ಖಚಿತ ಪಡಿಸಿದರು. ಐಪಿಎಲ್ 2020 ರಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಗೇಲ್ ಆರ್ಭಟಿಸಿದರು.

news18-kannada
Updated:October 15, 2020, 11:04 PM IST
IPL 2020, RCB vs KXIP: ಆರ್ಭಟಿಸಿದ ರಾಹುಲ್-ಗೇಲ್: ರೋಚಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತ ಆರ್​ಸಿಬಿ
ಕ್ರಿಸ್ ಗೇಲ್ - ಕೆ. ಎಲ್ ರಾಹುಲ್.
  • Share this:
ಶಾರ್ಜಾ (ಅ. 15): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 31ನೇ ರೋಚಕ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೋಲು ಕಂಡಿದೆ. ಕೆ. ಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ 2ನೇ ಗೆಲುವು ಕಂಡಿದೆ. ಈ ಮೂಲಕ ಪ್ಲೇ ಆಫ್ ಹಾದಿಯ ಕನಸು ಜೀವಂತವಾಗಿರಿಸಿದೆ. ಇತ್ತ ಕೊಹ್ಲಿ ಪಡೆ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿದೆ.

ಆರ್​ಸಿಬಿ ನೀಡಿದ್ದ 172 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ಕೆ, ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡರು. ಮಯಾಂಕ್ ಅಬ್ಬರಿಸಿದರೆ ರಾಹುಲ್ ಉತ್ತಮ ಸಾತ್ ನೀಡಿದರು.

ಈ ಸಂದರ್ಭ ವಿಕೆಟ್​ಗಾಗಿ ಪರದಾಡುತ್ತಿದ್ದ ಆರ್​ಸಿಬಿಗೆ ಚಹಾಲ್ ಬ್ರೇಕ್ ನೀಡಿದರು. 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಬಾರಿಸಿ 45 ರನ್​ಗೆ ಮಯಾಂಕ್ ಬೌಲ್ಡ್​ ಆದರು. ಈ ಜೋಡಿ 71 ರನ್​ಗಳ ಕಾಣಿಕೆ ನೀಡಿತು.

ಬಳಿಕ ಅರ್ಧಶತಕ ಸಿಡಿಸಿದ ರಾಹುಲ್ ಜೊತೆಯಾದ ಕ್ರೀಸ್​ ಗೇಲ್ ಬೊಂಬಾಟ್ ಆಟ ಪ್ರದರ್ಶಿಸಿ ತಂಡದ ಗೆಲುವನ್ನು ಖಚಿತ ಪಡಿಸಿದರು. ಐಪಿಎಲ್ 2020 ರಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಗೇಲ್ ಆರ್ಭಟಿಸಿದರು. ರಾಹುಲ್ 49 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಬಾರಿಸಿ ಅಜೇಯ 61 ರನ್ ಚಚ್ಚಿದರೆ, ಗೇಲ್ 45 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಸಿಡಿಸಿ ಅಜೇಯ 53 ರನ್ ಗಳಿಸಿದರು. ಇವರಿಬ್ಬರು 93 ರನ್​ಗಳ ಜೊತೆಯಾಟ ಆಡಿದರು.

ಆದರೆ, ಅಂತಿಮ ಓವರ್​ನಲ್ಲಿ ನಾಟಕೀಯ ಪ್ರದರ್ಶನ ಮೂಡಿಬಂತು. ಕೊನೆಯ 6 ಎಸೆತಗಳಲ್ಲಿ ಪಂಜಾಬ್​ಗೆ ಗೆಲ್ಲಲು 3 ರನ್​ಗಳ ಅವಶ್ಯಕತೆಯಿತ್ತು. ಚಹಾಲ್ ಬೊಂಬಾಟ್ ಬಾಲ್​ನ ಪರಿಣಾಮ ಕೊನೆಯ ಒಂದು ಎಸೆತಗಳಲ್ಲಿ 1 ರನ್​ಗಳು ಬೇಕಾಯಿತು. 5ನೇ ಎಸೆತದಲ್ಲಿ ಗೇಲ್ ರನೌಟ್​ಗೆ ಬಲಿಯಾದರು. 6ನೇ ಎಸೆತದಲ್ಲಿ ಪೂರನ್ ಚೆಂಡನ್ನು ಸಿಕ್ಸ್​ಗೆ ಅಟ್ಟುವ ಮೂಲಕ ಪಂಜಾಬ್​ಗೆ ಗೆಲುವು ತಂದಿಟ್ಟರು.

ಪಂಜಾಬ್ 20 ಓವರ್​ನಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸುವ ಮೂಲಕ ರೋಚಕ ಗೆಲುವು ಸಾಧಿಸಿತು. ಆರ್​ಸಿಬಿ ಪರ ಚಹಾಲ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಮೊದಲ 4 ಓವರ್​ಗಳಲ್ಲಿ 38 ರನ್ ಚಚ್ಚಿದರು. ಆದರೆ, 5ನೇ ಓವರ್​ನ ಮೊದಲ ಎಸೆತದಲ್ಲೇ 12 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಪಡಿಕ್ಕಲ್ ಔಟ್ ಆದರು. ಫಿಂಚ್ ಆಟ 16 ರನ್​ಗೆ ಅಂತ್ಯವಾಯಿತು.

ವಾಷಿಂಗ್ಟನ್ ಸುಂದರ್(13) ನಾಯಕ ವಿರಾಟ್ ಕೊಹ್ಲಿ ಜೊತೆ ಕೆಲಹೊತ್ತು ಬ್ಯಾಟ್ ಬೀಸಿದರು. ಬಳಿಕ ಶಿವಂ ದುಬೆ ಜೊತೆಯಾದ ಕೊಹ್ಲಿ 41 ರನ್​ಗಳ ಕಾಣಿಕೆ ನೀಡಿದರು. ದುಬೆ 19 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 23 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಎಬಿ ಡಿವಿಲಿಯರ್ಸ್​(2) ಈ ಬಾರಿ ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.

ಅಂತಿಮ ಹಂತದಲ್ಲಿ ಪಂಜಾಬ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರಿಂದ ಆರ್​ಸಿಬಿ ರನ್ ಕಲೆಹಾಕಲು ಪರದಾಡಿತು. ಆದರೆ, ಕೊನೆಯ ಓವರ್​​ನಲ್ಲಿ ಮೊರೀಸ್ ಹಾಗೂ ಉದಾನ ಸೇರಿ 17 ರನ್ ಚಚ್ಚಿದರು. ಕೊಹ್ಲಿ 39 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ 48 ರನ್ ಗಳಿಸಿ ಔಟ್ ಆದರು. ಕ್ರಿಸ್ ಮೊರೀಸ್ 8 ಎಸೆತಗಳಲ್ಲಿ ಅಜೇಯ 25 ರನ್ ಸಿಡಿಸಿದರು.

ಅಂತಿಮವಾಗಿ ಆರ್​ಸಿಬಿ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಪಂಜಾಬ್ ಪರ ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್ 2 ವಿಕೆಟ್ ಕಿತ್ತರೆ, ಅರ್ಶ್​ದೀಪ್ ಸಿಂಗ್, ಕ್ರಿಸ್ ಜಾರ್ಡನ್ 1 ವಿಕೆಟ್ ಪಡೆದರು.
Published by: Vinay Bhat
First published: October 15, 2020, 11:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories