IPL

  • associate partner
HOME » NEWS » Ipl » IPL 2020 LIVE SCORE MI VS SRH TODAYS MATCH AT SHARJAH MUMBAI INDIANS WON BY 34 RUNS VB

MI vs SRH: ವಾರ್ನರ್ ಹೋರಾಟ ವ್ಯರ್ಥ: ಮುಂಬೈ ಬ್ಯಾಟಿಂಗ್ ಅಬ್ಬರದ ಮುಂದೆ ಸೋತ ಹೈದರಾಬಾದ್

ಕಳೆದ ಪಂದ್ಯದಲ್ಲಿ ಮಿಂಚಿದ್ದ ಪ್ರಿಯಂ ಗಾರ್ಗ್​ ಈ ಬಾರಿ ಕೇವಲ 8 ರನ್​ಗೆ ಸುಸ್ತಾದರು. ಈ ನಡುವೆ ವಾರ್ನರ್ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಅರ್ಧಶತಕ ಪೂರೈಸಿ ಬಿರುಸಿನ ಆಟ ಆಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

news18-kannada
Updated:October 4, 2020, 7:28 PM IST
MI vs SRH: ವಾರ್ನರ್ ಹೋರಾಟ ವ್ಯರ್ಥ: ಮುಂಬೈ ಬ್ಯಾಟಿಂಗ್ ಅಬ್ಬರದ ಮುಂದೆ ಸೋತ ಹೈದರಾಬಾದ್
ಮುಂಬೈ ಇಂಡಿಯನ್ಸ್
  • Share this:
ಶಾರ್ಜಾ (ಅ. 04): ಇಲ್ಲಿನ ಶಾರ್ಜಾ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಐಪಿಎಲ್ 2020ರ 17ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ರೋಹಿತ್ ಪಡೆ 34 ರನ್​ಗಳ ಜಯ ಸಾಧಿಸಿದೆ. ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟ ವ್ಯರ್ಥವಾಯಿತು.

ಮುಂಬೈ ನೀಡಿದ್ದ209 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮಖ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ಜಾನಿ ಬೈರ್​ಸ್ಟೋ ಹಾಗೂ ನಾಯಕ ಡೇವಿಡ್ ವಾರ್ನರ್ ಪೈಕಿ ಬೈರ್​ಸ್ಟೋ 15 ಎಸೆತಗಳಲ್ಲಿ 25 ರನ್ ಬಾರಿಸಿ ಔಟ್ ಆದರು.

ನಿನ್ನ ಜೊತೆ ಸಿಕ್ಸ್ ಸಿಡಿಸುವ ಸ್ಫರ್ಧೆ ಮಾಡಬೇಕು ಎಂದ ಯುವರಾಜ್​ಗೆ ಪಡಿಕ್ಕಲ್ ರಿಪ್ಲೇ ಏನು ಗೊತ್ತೇ?

ಈ ಸಂದರ್ಭ ತಂಡವನ್ನು ಮೇಲೆತ್ತುವ ಜವಾಬ್ದಾರಿ ಹೊತ್ತ ಮನೀಶ್ ಪಾಂಡೆ ಹಾಗೂ ವಾರ್ನರ್ ಅತ್ಯುತ್ತಮ ಜೊತೆಯಾಟ ಆಡಿದರು. ಪಾಂಡೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಪಾಂಡೆ 19 ಎಸೆತಗಳಲ್ಲಿ 30 ರನ್ ಬಾರಿಸಿ ಔಟ್ ಆದರು. ಕೇನ್ ವಿಲಿಯಮ್ಸನ್ 3 ರನ್​ಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು.

ಕಳೆದ ಪಂದ್ಯದಲ್ಲಿ ಮಿಂಚಿದ್ದ ಪ್ರಿಯಂ ಗಾರ್ಗ್​ ಈ ಬಾರಿ ಕೇವಲ 8 ರನ್​ಗೆ ಸುಸ್ತಾದರು. ಈ ನಡುವೆ ವಾರ್ನರ್ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಅರ್ಧಶತಕ ಪೂರೈಸಿ ಬಿರುಸಿನ ಆಟ ಆಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ವಾರ್ನರ್ ಕೂಡ 44 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಿಡಿಸಿ 60 ರನ್​ಗೆ ಔಟ್ ಆದರು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಅಷ್ಟೊಂದು ಪರಿಣಾಮಕಾರಿ ಆಗಲಿಲ್ಲ. ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳನ್ನಷ್ಟೆ ಕಲೆಹಾಕುವ ಮೂಲಕ ಸೋಲೊಪ್ಪಿಗೊಂಡಿತು. ಮುಂಬೈ ಪರ ಜೇಮ್ಸ್ ಪ್ಯಾಟಿಸನ್, ಜಸ್​ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್​ ತಲಾ 2 ವಿಕೆಟ್ ಕಿತ್ತರೆ, ಕ್ರುನಾಲ್ ಪಾಂಡ್ಯ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಮುಂಬೈ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರ್​ನಲ್ಲೇ ನಾಯಕ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯ ಕುಮಾರ್ ಯಾದವ್ ಜೊತೆಯಾಗಿ ಒಂದಿಷ್ಟು ರನ್ ಕಲೆಹಾಕಿದರಷ್ಟೆ.

ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 27 ರನ್​ಗೆ ಔಟ್ ಆದರು. ಬಳಿಕ ಡಿಕಾಕ್ ಜೊತೆಯಾದ ಇಶಾನ್ ಕಿಶನ್ ಉತ್ತಮ ಆಟ ಪ್ರದರ್ಶಿಸಿದರು. ಅದರಲ್ಲೂ ಡಿಕಾಕ್ ಬಿರುಸಿನ ಆಟದ ಮೊರೆ ಹೋದರೆ ಕಿಶನ್ ಇವರಿಗರ ಉತ್ತಮ ಸಾತ್ ನೀಡಿದರು.

ಕ್ವಿಂಟನ್ ಡಿಕಾಕ್ ಈ ಬಾರಿಯ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಕೂಡ ಸಿಡಿಸಿದರು.  39 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿದ ಡಿಕಾಕ್ 67 ರನ್ ಬಾರಿಸಿದರು. ಜೊತೆಗೆ ಕಿಶನ್​ರೊಂದಿಗೆ 78 ರನ್​​ಗಳ ಉಪಯುಕ್ತ ಜೊತೆಯಾಟ ಆಡಿದರು. ಇದರ ಬೆನ್ನಲ್ಲೆ ಇಶಾನ್ ಕಿಶನ್(31) ಕೂಡ ಪೆವಿಲಿಯನ್ ಸೇರಿಕೊಂಡರು.

ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್​ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಪ್ರಮುಖ ಪಾತ್ರವಹಿಸಿದರು. ಹಾರ್ದಿಕ್ 19 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿ 28 ರನ್ ಬಾರಿಸಿದರೆ, ಪೊಲಾರ್ಡ್​ 13 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ ಅಜೇಯ 25 ರನ್ ಗಳಿಸಿದರು. ಕ್ರುನಾಲ್ ಪಾಂಡ್ಯ ಕೇವಲ 4 ಎಸೆತಗಳಲ್ಲಿ 20 ರನ್ ಚಚ್ಚಿದರು.

ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್​​ನಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿತು. ಹೈದರಾಬಾದ್ ಪರ ಸಂದೀಪ್ ಶರ್ಮಾ ಹಾಗೂ ಸಿದ್ಧಾರ್ಥ್​ ಕೌಲ್ ತಲಾ 2 ವಿಕೆಟ್ ಕಿತ್ತರೆ, ರಶೀದ್ ಖಾನ್ 1 ವಿಕೆಟ್ ಪಡೆದರು.
Published by: Vinay Bhat
First published: October 4, 2020, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories