IPL

  • associate partner
HOME » NEWS » Ipl » IPL 2020 LIVE SCORE MI VS SRH TODAYS MATCH AT SHARJAH MUMBAI INDIANS 208 5 VB

MI vs SRH: ಡಿಕಾಕ್ ಅರ್ಧಶತಕ, ಪಾಂಡ್ಯ-ಪೊಲಾರ್ಡ್​ ಸ್ಫೋಟಕ ಆಟ: ಹೈದರಾಬಾದ್​ಗೆ 209 ರನ್ಸ್ ಟಾರ್ಗೆಟ್

ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 27 ರನ್​ಗೆ ಔಟ್ ಆದರು. ಬಳಿಕ ಡಿಕಾಕ್ ಜೊತೆಯಾದ ಇಶಾನ್ ಕಿಶನ್ ಉತ್ತಮ ಆಟ ಪ್ರದರ್ಶಿಸಿದರು. ಅದರಲ್ಲೂ ಡಿಕಾಕ್ ಬಿರುಸಿನ ಆಟದ ಮೊರೆ ಹೋದರೆ ಕಿಶನ್ ಇವರಿಗರ ಉತ್ತಮ ಸಾತ್ ನೀಡಿದರು.

news18-kannada
Updated:October 4, 2020, 5:15 PM IST
MI vs SRH: ಡಿಕಾಕ್ ಅರ್ಧಶತಕ, ಪಾಂಡ್ಯ-ಪೊಲಾರ್ಡ್​ ಸ್ಫೋಟಕ ಆಟ: ಹೈದರಾಬಾದ್​ಗೆ 209 ರನ್ಸ್ ಟಾರ್ಗೆಟ್
ಡಿಕಾಕ್
  • Share this:
ಶಾರ್ಜಾ (ಅ. 04): ಇಲ್ಲಿನ ಶಾರ್ಜಾ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಐಪಿಎಲ್ 2020ರ 17ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಡೇವಿಡ್ ವಾರ್ನರ್ ಸಾರಥ್ಯದ ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ಕಠಿಣ ಟಾರ್ಗೆಟ್ ನೀಡಿದೆ. ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮುಂಬೈ ತಂಡ 20 ಓವರ್​ನಲ್ಲಿ 208 ರನ್ ಬಾರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಮುಂಬೈ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರ್​ನಲ್ಲೇ ನಾಯಕ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯ ಕುಮಾರ್ ಯಾದವ್ ಜೊತೆಯಾಗಿ ಒಂದಿಷ್ಟು ರನ್ ಕಲೆಹಾಕಿದರಷ್ಟೆ.

ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 27 ರನ್​ಗೆ ಔಟ್ ಆದರು. ಬಳಿಕ ಡಿಕಾಕ್ ಜೊತೆಯಾದ ಇಶಾನ್ ಕಿಶನ್ ಉತ್ತಮ ಆಟ ಪ್ರದರ್ಶಿಸಿದರು. ಅದರಲ್ಲೂ ಡಿಕಾಕ್ ಬಿರುಸಿನ ಆಟದ ಮೊರೆ ಹೋದರೆ ಕಿಶನ್ ಇವರಿಗರ ಉತ್ತಮ ಸಾತ್ ನೀಡಿದರು.




ಕ್ವಿಂಟನ್ ಡಿಕಾಕ್ ಈ ಬಾರಿಯ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಕೂಡ ಸಿಡಿಸಿದರು.  39 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿದ ಡಿಕಾಕ್ 67 ರನ್ ಬಾರಿಸಿದರು. ಜೊತೆಗೆ ಕಿಶನ್​ರೊಂದಿಗೆ 78 ರನ್​​ಗಳ ಉಪಯುಕ್ತ ಜೊತೆಯಾಟ ಆಡಿದರು. ಇದರ ಬೆನ್ನಲ್ಲೆ ಇಶಾನ್ ಕಿಶನ್(31) ಕೂಡ ಪೆವಿಲಿಯನ್ ಸೇರಿಕೊಂಡರು.

ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್​ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಪ್ರಮುಖ ಪಾತ್ರವಹಿಸಿದರು. ಹಾರ್ದಿಕ್ 19 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿ 28 ರನ್ ಬಾರಿಸಿದರೆ, ಪೊಲಾರ್ಡ್​ 13 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ ಅಜೇಯ 25 ರನ್ ಗಳಿಸಿದರು. ಕ್ರುನಾಲ್ ಪಾಂಡ್ಯ ಕೇವಲ 4 ಎಸೆತಗಳಲ್ಲಿ 20 ರನ್ ಚಚ್ಚಿದರು.

ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್​​ನಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿತು. ಹೈದರಾಬಾದ್ ಪರ ಸಂದೀಪ್ ಶರ್ಮಾ ಹಾಗೂ ಸಿದ್ಧಾರ್ಥ್​ ಕೌಲ್ ತಲಾ 2 ವಿಕೆಟ್ ಕಿತ್ತರೆ, ರಶೀದ್ ಖಾನ್ 1 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಸೂರ್ಯಕುಮಾರ್‌ ಯಾದವ್‌, ಇಶಾನ್ ಕಿಶನ್, ಕೀರನ್‌ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಜೇಮ್ಸ್ ಪ್ಯಾಟಿಸನ್, ರಾಹುಲ್‌ ಚಹರ್, ಜಸ್ಪ್ರಿತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಸಿದ್ಧಾರ್ಥ್​ ಕೌಲ್.
Published by: Vinay Bhat
First published: October 4, 2020, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories