IPL

  • associate partner

IPL 2020, KXIP vs RCB: ರಾಹುಲ್ ಸ್ಪೋಟಕ ಶತಕ: ಆರ್​ಸಿಬಿಗೆ ಗೆಲ್ಲಲು 207 ರನ್​ಗಳ ಟಾರ್ಗೆಟ್

Dream11 IPL 2020 Live Score: ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 6ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸುತ್ತಿದೆ.

news18-kannada
Updated:September 24, 2020, 9:43 PM IST
IPL 2020, KXIP vs RCB: ರಾಹುಲ್ ಸ್ಪೋಟಕ ಶತಕ: ಆರ್​ಸಿಬಿಗೆ ಗೆಲ್ಲಲು 207 ರನ್​ಗಳ ಟಾರ್ಗೆಟ್
kl rahul
  • Share this:
ದುಬೈ: IPL 13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ  ಬೌಲಿಂಗ್ ಆಯ್ದುಕೊಂಡಿದ್ದಾರೆ.

ಅದರಂತೆ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್, ಉಮೇಶ್ ಯಾದವ್​ ಅವರ ಮೊದಲ ಓವರ್​ನಲ್ಲಿ 8 ರನ್ ಕಲೆಹಾಕಿದರು. ಡೇಲ್ ಸ್ಟೇನ್ ಎಸೆದ 2ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ಐಪಿಎಲ್​ನಲ್ಲಿ 2 ಸಾವಿರ ರನ್ ಪೂರೈಸಿದರು.

ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ರಾಹುಲ್-ಮಯಾಂಕ್ ಪವರ್​ಪ್ಲೇನಲ್ಲಿ ಅರ್ಧಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಚಹಾಲ್ ಅವರ 7ನೇ ಓವರ್​ನಲ್ಲಿ ಚೆಂಡನ್ನು ಗುರುತಿಸುವಲ್ಲಿ ಎಡವಿದ ಮಯಾಂಕ್ (26) ಕ್ಲೀನ್ ಬೌಲ್ಡ್ ಆಗುವ ಮೂಲಕ ಹೊರ ನಡೆದರು.

ನಂತರ ಜೊತೆಗೂಡಿ ಪೂರನ್ ಹಾಗೂ ರಾಹುಲ್ ಎಚ್ಚರಿಕೆಯ ಆಟದೊಂದಿಗೆ ರನ್ ಕದಿಯುವಲ್ಲಿ ಹೆಚ್ಚಿನ ಒತ್ತು ನೀಡಿದರು. ಪರಿಣಾಮ ಮೊದಲ 10 ಓವರ್​ಗಳಲ್ಲಿ ಕಿಂಗ್ಸ್ ಮೊತ್ತವು 90 ಕ್ಕೆ ಬಂದು ನಿಂತಿತು. ಇದರ ಬೆನ್ನಲ್ಲೇ ತಮ್ಮ ಅರ್ಧಶತಕ ಪೂರೈಸಿದ ಪಂಜಾಬ್ ನಾಯಕ ಬ್ಯಾಟ್ ಮೇಲೆಕ್ಕೆತ್ತಿದರು. 36 ಎಸೆತಗಳನ್ನು ಎದುರಿಸಿದ ರಾಹುಲ್ ಈ ವೇಳೆಗೆ 1 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದ್ದರು.

12 ಓವರ್​ಗಳಲ್ಲಿ 100 ರನ್ ಪೂರೈಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಆದರೆ ಶಿವಂ ದುಬೆ ಎಸೆತದಲ್ಲಿ ಎಬಿಡಿಗೆ ಕ್ಯಾಚ್ ನೀಡುವುದರೊಂದಿಗೆ ಪೂರನ್ (17) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಸ್ಪೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ (5) ಕೂಡ ವಿಕೆಟ್ ಒಪ್ಪಿಸಿ ಹೊರ ನಡೆದರು.

83 ​ ಹಾಗೂ 89 ರನ್​ ಗಳಿಸಿದ್ದ ವೇಳೆ ಕೊಹ್ಲಿ ಬಿಟ್ಟ 2 ಕ್ಯಾಚ್​ನಿಂದ ಜೀವದಾನ ಪಡೆದ ಕೆಎಲ್ ರಾಹುಲ್, ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಸ್ಟೇನ್ ಅವರ 19ನೇ ಓವರ್​ನಲ್ಲಿ ಸಿಕ್ಸ್, ಫೋರ್ ಬಾರಿಸುವ ಮೂಲಕ 62 ಎಸೆತಗಳಲ್ಲಿ ಶತಕ ಪೂರೈಸಿದರು.

ಕೊನೆಯ ಎರಡು ಓವರ್​ಗಳಲ್ಲಿ 49 ರನ್ ಚಚ್ಚಿದ ಕೆಎಲ್ ರಾಹುಲ್ ತಂಡದ ಮೊತ್ತವನ್ನು 206 ಕ್ಕೆ ತಂದು ನಿಲ್ಲಿಸಿದರು. ಬೆಂಗಳೂರು ಪರ ಶಿವಂ ದುಬೆ 2 ವಿಕೆಟ್ ಪಡೆದರೆ, ಚಹಾಲ್ 1 ವಿಕೆಟ್ ಉರುಳಿಸಿದರು.ಸ್ಕೋರ್: 206/3

ಓವರ್: 20



ರಾಯಲ್ ಚಾಲೆಂಜರ್ಸ್​ ಪರ ಮೊದಲ ಪಂದ್ಯದಲ್ಲಿ ಕನ್ನಡಿಗ ದೇವ್​ದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ, ಇತ್ತ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಕಿಂಗ್ಸ್ ಇಲೆವೆನ್ ಪರ ಅಬ್ಬರಿಸಿದ್ದರು. ಹಾಗೆಯೇ ಪಂಜಾಬ್​ ತಂಡದ ಕೋಚ್ ಆಗಿರುವ ಅನಿಲ್ ಕುಂಬ್ಳೆ ಈ ಹಿಂದೆ ಆರ್​ಸಿಬಿ ತಂಡವನ್ನು ಮುನ್ನಡೆಸಿದವರು. ಇವರೊಂದಿಗೆ ಕಿಂಗ್ಸ್​ ಇಲೆವೆನ್​ನಲ್ಲಿ ಐವರು ಕನ್ನಡಿಗರು ಕೂಡ ಇರುವುದು ವಿಶೇಷ. ಹೀಗಾಗಿ ಇಂದಿನ ಪಂದ್ಯವು ಬೆಂಗಳೂರುವ ವರ್ಸಸ್ ಪಂಜಾಬ್ ಕನ್ನಡಿಗರು ಎಂಬತಾಗಿದೆ.



ಇನ್ನು ಅಂಕಿ ಅಂಶಗಳನ್ನು ಗಮನಿಸಿದ್ರೆ ಉಭಯ ತಂಡಗಳು 24 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಎರಡು ತಂಡಗಳು ತಲಾ 12 ಬಾರಿ ಗೆದ್ದಿರುವುದು ವಿಶೇಷ. ಇದೇ ಕಾರಣದಿಂದ ಇಂದಿನ ಪಂದ್ಯ ಯಾರು ಬಲಿಷ್ಠ ಎಂಬುದನ್ನು ನಿರ್ಧರಿಸಲಿದೆ ಎನ್ನಬಹುದು. ಕೊನೆಯ ಐದು ಪಂದ್ಯಗಳನ್ನು ಗಮನಿಸುವುದಾದರೆ , ಪಂಜಾಬ್ ವಿರುದ್ದ ಆರ್​ಸಿಬಿ ಪಾರುಪತ್ಯ ಸಾಧಿಸಿದೆ. ಏಕೆಂದರೆ ಕೊಹ್ಲಿ ಪಡೆ ವಿರುದ್ದ ಕೊನೆಯ ಐದು ಪಂದ್ಯಗಳಲ್ಲಿ ಪಂಜಾಬ್ ಗೆದ್ದಿದ್ದು ಒಂದು ಬಾರಿ ಮಾತ್ರ.

ಆರ್​ಸಿಬಿ ಕೊನೆಯ ಐದು ಪಂದ್ಯಗಳಲ್ಲಿ ಪಂಜಾಬ್ ವಿರುದ್ಧ 17 ರನ್ ಜಯ , 8 ವಿಕೆಟ್‌ ಜಯ , 10 ವಿಕೆಟ್ ಗೆಲುವು ಹಾಗೂ 4 ವಿಕೆಟ್‌ ವಿಜಯ ಸಾಧಿಸಿ ಆದರೆ ಕಳೆದ ಸೀಸನ್​ನಲ್ಲಿ ಕೊನೆಯ ಮುಖಾಮುಖಿಯಲ್ಲಿ ಕಿಂಗ್ಸ್​ ಇಲೆವೆನ್ ಆರ್​ಸಿಬಿ ವಿರುದ್ಧ 19 ರನ್ ಜಯಗಳಿಸಿತ್ತು. 2014 ರಲ್ಲಿ ದುಬೈನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 8 ವಿಕೆಟ್ ನಷ್ಟಕ್ಕೆ 124 ರನ್​ಗಳಿಸಲು ಮಾತ್ರ ಶಕ್ತವಾಗಿತ್ತು. ಈ ಟಾರ್ಗೆಟ್​ನ್ನು 18.5 ಓವರ್​ನಲ್ಲಿ ಬೆನ್ನೆತ್ತುವ ಮೂಲಕ ಕಿಂಗ್ಸ್ ಇಲೆವೆನ್ 5 ವಿಕೆಟ್​ಗಳ ವಿಜಯ ಸಾಧಿಸಿತ್ತು.
Published by: zahir
First published: September 24, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading