CSK vs KKR: ರಾಹುಲ್ ತ್ರಿಪಾಠಿ ಫಿಫ್ಟಿ: ಕೆಕೆಆರ್​ ಕಡೆಯಿಂದ ಸಿಎಸ್​ಕೆಗೆ ಸ್ಪರ್ಧಾತ್ಮಕ ಸವಾಲು..!

CSK vs KKR Score: ಉಭಯ ತಂಡಗಳು ಐಪಿಎಲ್​ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 13 ಬಾರಿ ವಿಜಯ ಸಾಧಿಸಿದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ 7 ಬಾರಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

Rahul Tripathi

Rahul Tripathi

 • Share this:
  ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ 168 ರನ್​ಗಳ ಟಾರ್ಗೆಟ್ ನೀಡಿದೆ. ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿಯ ಆಕರ್ಷಕ ಅರ್ಧಶತಕದ ನೆರವಿನಿಂದ ಕೆಕೆಆರ್ ನಿಗದಿತ 20 ಓವರ್​ನಲ್ಲಿ  167 ರನ್ ಪೇರಿಸಿತು. ಇದಕ್ಕೂ ಮುನ್ನ  ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ  ಶುಭ್​ಮನ್ ಗಿಲ್ ಜೊತೆ ಸುನೀಲ್ ನರೈನ್ ಬದಲಿಗೆ ರಾಹುಲ್ ತ್ರಿಪಾಠಿ ಆರಂಭಿಕರಾಗಿ ಕಣಕ್ಕಿಳಿದರು.

  ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಆರಂಭಿಸಿದ ಕೆಕೆಆರ್ ಜೋಡಿ ಮೊದಲ ಮೂರು ಓವರ್​ನಲ್ಲಿ 25 ರನ್ ಪೇರಿಸಿತು. ಆದರೆ ಶಾರ್ದುಲ್ ಠಾಕೂರ್ ಎಸೆದ 5ನೇ ಓವರ್​ನಲ್ಲಿ ಶುಭ್​ಮನ್ ಗಿಲ್ (11) ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ತ್ರಿಪಾಠಿ, ನಿತೇಶ್ ರಾಣಾ ಜೊತೆಗೂಡಿ ಪವರ್​ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 52 ಕ್ಕೆ ತಂದು ನಿಲ್ಲಿಸಿದರು.

  ತಂಡದ ಮೊತ್ತ 70 ಆಗಿದ್ದ ವೇಳೆ ಸ್ಯಾಮ್ ಕರನ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಮುಂದಾದ ನಿತೇಶ್ ರಾಣಾ (9) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ 31 ಎಸೆತಗಳಲ್ಲಿ ರಾಹುಲ್ ತ್ರಿಪಾಠಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸುನೀಲ್ ನರೈನ್ ಒಂದು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ ಅಬ್ಬರಿಸಿದರು. ಆದರೆ 17 ರನ್​ಗಳಿಸಿದ್ದ ವೇಳೆ ಬೌಂಡರಿ ಲೈನ್​ನಲ್ಲಿ ರವೀಂದ್ರ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ನಿಂದ ಹೊರ ನಡೆಯಬೇಕಾಯಿತು.

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ್ದ ಇಯಾನ್ ಮೋರ್ಗನ್ ಈ ಬಾರಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಎಡವಿದರು. 10 ಎಸೆತಗಳನ್ನು ಎದುರಿಸಿದ್ದ ಮೋರ್ಗನ್ ಕೇವಲ 7 ರನ್​ಗಳಿಸಿ ಸ್ಯಾಮ್ ಕರನ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

  ಮತ್ತೊಂದೆಡೆ ಚೆನ್ನೈ ಬೌಲರುಗಳ ವಿರುದ್ಧ ಸೂಪರ್ ಆಟ ಪ್ರದರ್ಶಿಸಿದ ತ್ರಿಪಾಠಿಯ ನೆರವಿನಿಂದ ಕೆಕೆಆರ್ 15 ಓವರ್​ಗಳಲ್ಲಿ 128 ರನ್​ಗಳಿಸಿತು. ಆದರೆ 16ನೇ ಓವರ್​ನ 2ನೇ ಎಸೆತದಲ್ಲಿ ಆಂಡ್ರೆ ರಸೆಲ್ (2) ಧೋನಿಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಆದರೆ ತ್ರಿಪಾಠಿ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದ್ದರು. 3 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 51 ಎಸೆತಗಳಲ್ಲಿ 81 ರನ್​​ ಸಿಡಿಸಿದರು. ಆದರೆ ಬ್ರಾವೊ ಎಸೆದ 17ನೇ ಓವರ್​ನಲ್ಲಿ​ ವಿಕೆಟ್ ಒಪ್ಪಿಸಿದರು.

  ಕೊನೆಯ ಮೂರು ಓವರ್​ಗಳಿರುವಾಗ ನಾಯಕನ ಜೊತೆಗೂಡಿದ ಪ್ಯಾಟ್ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನೊಂದೆಡೆ 19ನೇ ಓವರ್​ನಲ್ಲಿ ಕಾರ್ತಿಕ್ 12 ರನ್​ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅಂತಿಮ ಓವರ್​ನಲ್ಲಿ  2 ವಿಕೆಟ್ ಉರುಳಿಸಿದ ಡ್ವೇನ್ ಬ್ರಾವೊ ಕೇವಲ 5 ರನ್ ನೀಡುವ ಮೂಲಕ ಕೆಕೆಆರ್ ಮೊತ್ತವನ್ನು 167 ಕ್ಕೆ ನಿಯಂತ್ರಿಸಿದರು. CSK ಪರ ಡ್ವೇನ್ ಬ್ರಾವೊ 4 ಓವರ್​ನಲ್ಲಿ 37 ರನ್ ನೀಡಿದ 3 ವಿಕೆಟ್ ಉರುಳಿಸಿ ಮಿಂಚಿದರು.

  ಈPOINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: