IPL 2020, RR vs DC: ಮುಂದುವರೆದ ರಾಜಸ್ಥಾನ್ ಕಳಪೆ ಆಟ: ಅಗ್ರಸ್ಥಾನಕ್ಕೇರಿದ ಶ್ರೇಯಸ್ ಪಡೆ!
ಕೊನೆಯ ಹಂತದಲ್ಲು ಅಕ್ಷರ್ ಪಟೇಲ್ (17) ಹಾಗೂ ಹರ್ಷಲ್ ಪಟೇಲ್ (16) ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಏರಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.
ಶಾರ್ಜಾ (ಅ. 09): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿದ ಅಯ್ಯರ್ ಪಡೆ 46 ರನ್ಗಳ ಅಮೋಘ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಡೆಲ್ಲಿ ನೀಡಿದ್ದ 185 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೋಸ್ ಬಟ್ಲರ್(13) ಔಟ್ ಆದರಾದರೂ ಬಳಿಕ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಕೆಲ ಸಮಯ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಆದರೆ, ಪವರ್ ಪ್ಲೇ ಓವರ್ ಮುಗಿದ ಬೆನ್ನಲ್ಲೇ ಸ್ಮಿತ್ ದೊಡ್ಡ ಹೊಡೆತಕ್ಕೆ ಮಾರುಹೋಗಿ 24 ರನ್ಗೆ ನಿರ್ಗಮಿಸಿದರು.
Stoinis seems to be having some fun out there.
Picks up another wicket and Lomror departs after adding just 1 run to the tally.
ಸಂಜು ಸ್ಯಾಮ್ಸನ್ ಈ ಬಾರಿ ಮತ್ತೊಮ್ಮೆ ಎಡವಿ 5 ರನ್ಗೆ ಬ್ಯಾಟ್ ಕೆಳಗಿಟ್ಟರು. ಮಾಹಿಪಾಲ್ ಲಮ್ರೋರ್(1) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇತ್ತ ಚೆನ್ನಾಗಿಯೇ ರನ್ ಕಲೆಹಾಕುತ್ತಿದ್ದ ಜೈಸ್ವಾಲ್ 34 ರನ್ ಗಳಿಸಿರುವಾಗ ಸ್ಟಾಯಿನಿಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಬಳಿಕ ಬಂದ ಬ್ಯಾಟ್ಸ್ಮನ್ಗಳು ಯಾರು ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ರಾಹುಲ್ ತೇವಾಟಿಯ 29 ಎಸೆತಗಳಲ್ಲಿ 38 ರನ್ ಬಾರಿಸಿದರು. ಅಂತಿಮವಾಗಿ ಆರ್ಆರ್ ತಂಡ 19.4 ಓವರ್ನಲ್ಲಿ 138 ರನ್ಗೆ ಸರ್ವಪತನ ಕಂಡಿತು. ಆಲೌಟ್ ಆಯಿತು. ಡೆಲ್ಲಿ ಪರ ಕಗಿಸೊ ರಬಾಡ 3, ಆರ್. ಅಶ್ವಿನ್, ಮಾರ್ಕಸ್ ಸ್ಟಾಯಿನಿಸ್ ಹಾಗೂ ತಲಾ 2 ವಿಕೆಟ್ ಕಿತ್ತರೆ, ಅನ್ರಿಕ್ ನಾರ್ಟ್ಜೆ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತನ್ನ ಮೊದಲ ಓವರ್ನಲ್ಲೇ ಜೋಫ್ರಾ ಆರ್ಚರ್ ಅವರು ಶಿಖರ್ ಧವನ್(5) ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಬಳಿಕ 19 ರನ್ ಬಾರಿಸಿದ್ದ ಪೃಥ್ವಿ ಶಾ ಅವರನ್ನೂ ಔಟ್ ಮಾಡಿದರು. ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಶ್ರೇಯಸ್ ಅಯ್ಯರ್ 22 ರನ್ಗೆ ಹಾಗೂ ರಿಷಭ್ ಪಂತ್ ಕೇವಲ 5 ಗಳಿಸಿರುವಾಗ ರನೌಟ್ಗೆ ಬಲಿಯಾದರು.
Another one bites the dust. It's Stoinis who departs after scoring 39 runs.
ಮಾರ್ಕಸ್ ಸ್ಟಾಯಿನಿಸ್ ಏಕಾಂಗಿಯಾಗಿ ಬ್ಯಾಟ್ ಬೀಸಿದರಾದರೂ ಅಂತಿಮ ಹಂತದ ವರೆಗೆ ಕ್ರೀಸ್ನಲ್ಲಿ ನಿಲ್ಲಲಿಲ್ಲ. 30 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 39 ರನ್ಗೆ ಔಟ್ ಆದರು. ಬಳಿಕ ಸ್ಫೋಟಕ ಆಟಕ್ಕೆ ಮುಂದಾದ ಶಿಮ್ರೋನ್ ಹೆಟ್ಮೇರ್ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟು ನಿರ್ಗಮಿಸಿದರು. ಹೆಟ್ಮೇರ್ ಕೇವಲ 24 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಬಾರಿಸಿ 45 ರನ್ ಚಚ್ಚಿದರು.
ಕೊನೆಯ ಹಂತದಲ್ಲು ಅಕ್ಷರ್ ಪಟೇಲ್ (17) ಹಾಗೂ ಹರ್ಷಲ್ ಪಟೇಲ್ (16) ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಏರಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಆರ್ಆರ್ ಪರ ಜೋಫ್ರಾ ಆರ್ಚರ್ 3 ವಿಕೆಟ್ ಕಿತ್ತರೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರೋ ಟೈ, ಹಾಗೂ ರಾಹುಲ್ ತೇವಾಟಿಯಾ ತಲಾ 1 ವಿಕೆಟ್ ಪಡೆದರು.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ