news18-kannada Updated:October 19, 2020, 6:29 PM IST
IPL 2020
IPL ಹಾಲಿ ಚಾಂಪಿಯನ್, 4 ಬಾರಿ ಟ್ರೋಫಿ ವಿಜೇತ ತಂಡ, ಇಂಡಿಯನ್ ಪ್ರೀಮಿಯರ್ ಲೀಗ್ನ ಬಲಿಷ್ಠ ತಂಡ, ಅನುಭವಿ ಆಟಗಾರರ ಪಡೆ...ಹೀಗಂದರೆ ಥಟ್ಟನೆ ನೀಲಿ ಜೆರ್ಸಿ ಹಾಕಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಕಣ್ಮುಂದೆ ಬರುವುದರಲ್ಲಿ ಸಂದೇಹವೇ ಇಲ್ಲ. ಅಂತಹದೊಂದು ಖದರ್ನ್ನು ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ ಸೃಷ್ಟಿಸಿದೆ. ಬ್ಯಾಟಿಂಗ್ ಇರಲಿ ಅಥವಾ ಬೌಲಿಂಗ್ ಆಗಿರಲಿ ಮುಂಬೈ ಸರಿಸಮಾನವಾಗಿರುವ ಮತ್ತೊಂದು ತಂಡವಿಲ್ಲ ಎನ್ನಬಹುದು.
ಇದೇ ಕಾರಣದಿಂದಲೇ 2013, 2015, 2017 ಮತ್ತು 2019ರಲ್ಲಿ ಐಪಿಎಲ್ ಚಾಂಪಿಯನ್ಸ್ ಪಟ್ಟವನ್ನು ಮುಂಬೈ ಇಂಡಿಯನ್ಸ್ ಅಲಂಕರಿಸಿದೆ. ಈ ಬಾರಿ ಕೂಡ ಭರ್ಜರಿ ಪ್ರದರ್ಶನದೊಂದಿಗೆ ಪ್ಲೇ ಆಫ್ಗೇರುವ ಸೂಚನೆಯಂತು ನೀಡಿದೆ. ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಮುಂಬೈ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೂಪರ್ ಸೋಲು ಅನುಭವಿಸಿದೆ. ಇದರೊಂದಿಗೆ ಐಪಿಎಲ್ನಲ್ಲಿ ಮುಂಬೈ ವಿರುದ್ಧ ಪಾರುಪತ್ಯ ಸ್ಥಾಪಿಸಿದ ತಂಡಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಅಗ್ರಸ್ಥಾನಕ್ಕೇರಿದೆ.
ಹೌದು, ಬಲಿಷ್ಠ ಮುಂಬೈ ತಂಡವನ್ನು ಐಪಿಎಲ್ನಲ್ಲಿ 12 ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿಸಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ರೋಹಿತ್ ಪಡೆ ವಿರುದ್ಧ 12 ಬಾರಿ ಗೆಲುವು ದಾಖಲಿಸಿತ್ತು. ಭಾನುವಾರ ಸೂಪರ್ ಓವರ್ನಲ್ಲಿ ಸೂಪರ್ ಗೆಲುವು ದಾಖಲಿಸುವ ಮೂಲಕ ರಾಹುಲ್ ಪಡೆ ಮುಂಬೈ ವಿರುದ್ಧದ ಗೆಲುವಿನ ವಿಚಾರದಲ್ಲಿ ಡೆಲ್ಲಿ ಹಾಗೂ ಸಿಎಸ್ಕೆ ಜತೆ ಸಮಬಲ ಸಾಧಿಸಿದೆ.
ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡವನ್ನು ಅತೀ ಹೆಚ್ಚು ಬಾರಿ ಮಟ್ಟ ಹಾಕಿದ ತಂಡಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಮೂರು ಸ್ಥಾನದಲ್ಲಿದೆ. ಸಿಎಸ್ಕೆ ವಿರುದ್ದ ಮುಂಬೈ 12 ಬಾರಿ ಸೋಲನುಭವಿಸಿದೆ. ಇದರ ಹೊರತಾಗಿ ಮುಂಬೈ ತಂಡವನ್ನು ಹೆಚ್ಚು ಬಾರಿ ಸೋಲಿಸಿದ್ದು ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್ಸಿಬಿ ಹಾಗೂ ಆರ್ಆರ್ ವಿರುದ್ಧ ಮುಂಬೈ ಇಂಡಿಯನ್ಸ್ ತಲಾ 10 ಪಂದ್ಯಗಳಲ್ಲಿ ಸೋತಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by:
zahir
First published:
October 19, 2020, 6:29 PM IST