IPL

  • associate partner
HOME » NEWS » Ipl » IPL 2020 LAST LEAGUE MATCH BETWEEN SRH AND MUMBAI INDIANS SNVS

SRH vs MI – ಹೈದರಾಬಾದ್ ವರ್ಸಸ್ ಮುಂಬೈ ಪಂದ್ಯ: ಯಾರಿಗೆ ಗೆಲುವಿನ ಸಾಧ್ಯತೆ ಹೆಚ್ಚು?

ಅಗ್ರಸ್ಥಾನ ಖಚಿತಪಡಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯಕ್ಕೆ ಎರಡನೇ ಸ್ತರದ ಆಟಗಾರರನ್ನ ಕಣಕ್ಕಿಳಿಸಿ ಪ್ರಯೋಗ ಮಾಡಲಿದೆ. ಇದರ ಲಾಭವನ್ನು ಹೈದರಾಬಾದ್ ಪಡೆದು ಪ್ಲೇ ಆಫ್ ಪ್ರವೇಶ ಮಾಡುತ್ತಾ ಎಂದು ಕಾದುನೋಡಬೇಕು.

cricketnext
Updated:November 3, 2020, 9:59 AM IST
SRH vs MI – ಹೈದರಾಬಾದ್ ವರ್ಸಸ್ ಮುಂಬೈ ಪಂದ್ಯ: ಯಾರಿಗೆ ಗೆಲುವಿನ ಸಾಧ್ಯತೆ ಹೆಚ್ಚು?
MIvsSRH
  • Cricketnext
  • Last Updated: November 3, 2020, 9:59 AM IST
  • Share this:
ಬೆಂಗಳೂರು(ನ. 03): ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯ ಇಂದು ನಡೆಯುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ದುಬೈನಲ್ಲಿ ಮುಖಾಮುಖಿಯಾಗುತ್ತಿವೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿವೆ. ಮುಂಬೈ ಮತ್ತು ಡೆಲ್ಲಿ ತಂಡಗಳು ಟಾಪ್-2 ತಂಡಗಳಾಗಿ ಕ್ವಾಲಿಫಯರ್ ಹಂತ ಮುಟ್ಟಿವೆ. ದುಬೈನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಇವತ್ತಿನ ಪಂದ್ಯದಲ್ಲಿ ಹೈದರಾಬಾದ್​ಗೆ ಮಾಡು ಇಲ್ಲ ಮಡಿ ಪಂದ್ಯವಾಗಿದೆ. ಮುಂಬೈ ಮತ್ತು ಹೈದರಾಬಾದ್ ಪಂದ್ಯದ ಫಲಿತಾಂಶದ ಮೇಲೆ ಕೆಕೆಆರ್ ತಂಡದ ಪ್ಲೇ ಆಫ್ ಪ್ರವೇಶದ ಅವಕಾಶ ನಿಂತಿದೆ. ಹೈದರಾಬಾದ್ ಸೋತರೆ ಕೆಕೆಆರ್ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆಯುತ್ತದೆ.

ಇವತ್ತಿನ ಕೊನೆಯ ಲೀಗ್ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ ಯಾವ ಪರಿಣಾಮ ಬೀರದ ಪಂದ್ಯ. ಇದನ್ನ ಸೋತರೂ ಮುಂಬೈನ ಅಗ್ರಸ್ಥಾನಕ್ಕೆ ಯಾವುದೇ ಸಂಚಕಾರ ಇರುವುದಿಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲೂ ಮುಂಬೈನ ಬ್ಯಾಟಿಂಗ್ ಸ್ಫೋಟಕ ಶಕ್ತಿ ಹೊಂದಿದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಅವಕಾಶ ಇದೆ. ಹೀಗಾಗಿ, ಮುಂಬೈನಿಂದ ಸೆಕೆಂಡ್ ಸ್ಟ್ರಿಂಗ್ ಟೀಮ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: DC vs RCB, IPL 2020: ಡೆಲ್ಲಿಗೆ ಭರ್ಜರಿ ಜಯ: ಸೋತರೂ ಪ್ಲೇ ಆಫ್​ಗೆ ಲಗ್ಗೆಯಿಟ್ಟ ಆರ್​ಸಿಬಿ

ಇನ್ನೊಂದೆಡೆ, ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಎರಡು ಗೆಲುವುಗಳ ಮೂಲಕ ಅಂಕಪಟ್ಟಿಯಲ್ಲಿ ಅಚ್ಚರಿ ರೀತಿಯಲ್ಲಿ ಮೇಲೆದ್ದಿದೆ. 12 ಅಂಕಗಳನ್ನ ಹೊಂದಿರುವ ಆ ತಂಡದ ರನ್ ರೇಟ್ +0.555 ಇದೆ. ಹೀಗಾಗಿ, ಈ ಪಂದ್ಯವನ್ನ ಗೆದ್ದರೆ ಅಂಕಪಟ್ಟಿಯಲ್ಲಿ ಬೆಂಗಳೂರನ್ನ ಹಿಂದಿಕ್ಕಿ ಮೂರನೇ ಸ್ಥಾನ ಅಲಂಕರಿಸುವುದು ನಿಶ್ಚಿತ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳ ವಿರುದ್ಧ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಹೈದರಾಬಾದ್ ತಂಡ ಮುಂಬೈ ಅನ್ನು ಆತ್ಮವಿಶ್ವಾಸದಿಂದ ಎದುರಿಸಲಿದೆ. ಮುಂಬೈನಿಂದ ಎರಡನೇ ಸ್ತರದ ಆಟಗಾರರು ಹಣಾಹಣಿಗೆ ಇಳಿಯುವುದರಿಂದ ಹೈದರಾಬಾದ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿರುವುದ ಮೇಲ್ನೋಟಕ್ಕೆ ತೋರುತ್ತಿದೆ. ವೃದ್ಧಿಮಾನ್ ಸಾಹಾ ಆಗಮನದಿಂದ ಹೈದರಾಬಾದ್​ನ ಆರಂಭಿಕ ಬ್ಯಾಟಿಂಗ್ ಕೂಡ ಪ್ರಬಲಗೊಂಡಂತಾಗಿದೆ.

ಇದನ್ನೂ ಓದಿ: IPL 2020: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್..!

ಲೀಗ್ ಹಂತ ಮುಗಿದ ಬಳಿಕ ಪ್ಲೇ ಆಫ್ ಪಂದ್ಯಗಳು ಪ್ರಾರಂಭವಾಗುತ್ತವೆ. ನವೆಂಬರ್ 5ರಂದು ಮುಂಬೈ ಮತ್ತು ಡೆಲ್ಲಿ ಮಧ್ಯೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಫೈನಲ್ ಪ್ರವೇಶಿಸುತ್ತಾರೆ. ಸೋತವರಿಗೆ ಎರಡನೇ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶ ಇರುತ್ತದೆ. ಮರುದಿನ, ಅಂದರೆ ನ. 6ರಂದು 3 ಮತ್ತು 4ನೇ ಸ್ಥಾನ ಪಡೆದ ತಂಡಗಳ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಹೈದರಾಬಾದ್ ಅಥವಾ ಕೋಲ್ಕತಾ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರನ್ನು ಎದುರುಗೊಳ್ಳಲಿವೆ. ಇದರಲ್ಲಿ ಗೆದ್ದವರು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯುತ್ತಾರೆ. ಅಲ್ಲಿ ಮೊದಲ ಕ್ವಾಲಿಫಯರ್​ನಲ್ಲಿ ಸೋತ ತಂಡವನ್ನು ಎದಿರುಗೊಳ್ಳುತ್ತಾರೆ. ನ. 8ರಂದು ನಡೆಯುವ ಈ ಎರಡನೇ ಕ್ವಾಲಿಫೈರ್​ನಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸುತ್ತದೆ. ನ. 10ರಂದು ಪ್ರಶಸ್ತಿಗಾಗಿ ಹಣಾಹಣಿ ನಡೆಯುತ್ತದೆ.

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ನೆಟ್ ರನ್ ರೇಟ್ ಲೆಕ್ಕಾಚಾರ ಮಾಡುವುದು ಹೀಗೆ
Published by: Vijayasarthy SN
First published: November 3, 2020, 9:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories