IPL

  • associate partner
HOME » NEWS » Ipl » IPL 2020 KXIP VS SRH LIVE CRICKET SCORE KINGS XI PUNJAB VS SUNRISERS HYDERABAD KXIP WON BY 12 RUNS VB

KXIP vs SRH IPL 2020: ಕೊನೆ ಹಂತದಲ್ಲಿ ಪಂಜಾಬ್ ಕಮ್​ಬ್ಯಾಕ್: ರೋಚಕ ಪಂದ್ಯದಲ್ಲಿ ರಾಹುಲ್ ಪಡೆಗೆ ಜಯ

IPL 2020, KXIP vs SRH: ಕಳೆದ ಪಂದ್ಯದಲ್ಲಿ ಆಡಿದಂತೆ ಎಚ್ಚರಿಕೆಯ ಆಟ ಪ್ರದರ್ಶಿಸಿದ ಪಾಂಡೆ-ಶಂಕರ್ ತಂಡಕ್ಕೆ ಗೆಲುವು ತಂದುಕೊಡಲಿದ್ದಾರೆಂದೇ ನಂಬಲಾಗಿತ್ತು. ಆದರೆ, 17ನೇ ಓವರ್​ನಲ್ಲಿ ಸಿಕ್ಸ್​ ಸಿಡಿಸುವಲ್ಲಿ ವಿಫಲರಾದ ಪಾಂಡೆ 15 ರನ್​ಗೆ ಔಟ್ ಆದರು.

news18-kannada
Updated:October 24, 2020, 11:39 PM IST
KXIP vs SRH IPL 2020: ಕೊನೆ ಹಂತದಲ್ಲಿ ಪಂಜಾಬ್ ಕಮ್​ಬ್ಯಾಕ್: ರೋಚಕ ಪಂದ್ಯದಲ್ಲಿ ರಾಹುಲ್ ಪಡೆಗೆ ಜಯ
KXIP
  • Share this:
ದುಬೈ (ಅ. 24): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 12 ರನ್​ಗಳ ಜಯ ಸಾಧಿಸಿದೆ. ಗೆಲುವಿನ ಸನಿಹದಲ್ಲಿ ಎಡವಿದ ವಾರ್ನರ್ ಪಡೆ ಈ ಸೋಲಿನೊಂದಿಗೆ ಪ್ಲೇ ಆಫ್ ಹಾದಿ ಕಠಿಣವಾಗಿದೆ.

ಪಂಜಾಬ್ ನೀಡಿದ್ದ 127 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಹೈದರಾಬಾದ್ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋ ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡರು. ಮೊದಲ 6 ಓವರ್​ನಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು.

ಆದರೆ, ಪವರ್ ಪ್ಲೇ ಮುಗಿದ ಬೆನ್ನಲ್ಲೇ 20 ಎಸೆತಗಳಲ್ಲಿ 35 ರನ್ ಗಳಿಸಿದ್ದ ವಾರ್ನರ್ ಔಟ್ ಆದರೆ, ಬೈರ್​ಸ್ಟೋ 19 ರನ್​ಗೆ ನಿರ್ಗಮಿಸಿದರು. ಅಬ್ದುಲ್ ಸಮದ್(7) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ಸಂದರ್ಭ ಒಂದಾದ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ತಂಡದ ಗೆಲುವಿಗೆ ಹೋರಾಟ ನಡೆಸಿದರು.

ಕಳೆದ ಪಂದ್ಯದಲ್ಲಿ ಆಡಿದಂತೆ ಎಚ್ಚರಿಕೆಯ ಆಟ ಪ್ರದರ್ಶಿಸಿದ ಪಾಂಡೆ-ಶಂಕರ್ ತಂಡಕ್ಕೆ ಗೆಲುವು ತಂದುಕೊಡಲಿದ್ದಾರೆಂದೇ ನಂಬಲಾಗಿತ್ತು. ಆದರೆ, 17ನೇ ಓವರ್​ನಲ್ಲಿ ಸಿಕ್ಸ್​ ಸಿಡಿಸುವಲ್ಲಿ ವಿಫಲರಾದ ಪಾಂಡೆ 15 ರನ್​ಗೆ ಔಟ್ ಆದರು. ಶಂಕರ್ 27 ಎಸೆತಗಳಲ್ಲಿ 26 ಗಳಿಸಿ ನಿರ್ಗಮಿಸಿದರು.

ಕೊನೆ ಹಂತದಲ್ಲಿ ಜೇಸನ್ ಹೋಲ್ಡರ್(5) ಕೂಡ ನಿರ್ಗಮಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಹೈದರಾಬಾದ್ 19.5 ಓವರ್​ನಲ್ಲಿ 114 ರನ್​ಗೆ ಆಲೌಟ್ ಆಯಿತು. ಪಂಜಾಬ್ ಪರ ಕ್ರಿಸ್ ಜೋರ್ಡನ್ 3 ವಿಕೆಟ್ ಕಿತ್ತರೆ ಹಾಗೂ ಅರ್ಶ್​​ದೀಪ್ ಸಿಂಗ್ 3, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್ ಹಾಗೂ ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ತಂಡ ನಿಧಾನಗತಿಯ ಆರಂಭ ಪಡೆದುಕೊಂಡಿತು.ಅಗರ್ವಾಲ್ ಅನುಪಸ್ಥಿತಿಯಲ್ಲಿ ಕೆ. ಎಲ್ ರಾಹುಲ್ ಜೊತೆ ಇನ್ನಿಂಗ್ಸ್​ ಆರಂಭಿಸಿದ ಮಂದೀಪ್ ಸಿಂಗ್ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲ. 14 ಎಸೆತಗಳಲ್ಲಿ 17 ರನ್ ಗಳಿಸಿ ಔಟ್ ಆದರು.

ಆದರೆ, ಬಳಿಕ ರಾಹುಲ್ ಜೊತೆಯಾದ ಕ್ರಿಸ್ ಗೇಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ನಿಧಾನಗತಿಯಲ್ಲಿ ರನ್ ಕಲೆಹಾಕಿತು. ಆದರೆ, ಹೆಚ್ಚುಹೊತ್ತು ಕ್ರೀಸ್​ನಲ್ಲಿ ಈ ಜೋಡಿ ಇರಲಿಲ್ಲ. ರಾಹುಲ್ 27 ಎಸೆತಗಳಲ್ಲಿ 27 ರನ್ ಗಳಿಸಿ ಔಟ್ ಆದರೆ, ಗೇಲ್ ಆಟ 20 ರನ್​ಗೆ ಅಂತ್ಯವಾಯಿತು. ಗ್ಲೆನ್ ಮ್ಯಾಕ್ಸ್​ವೆಲ್(12) ಮತ್ತೊಮ್ಮೆ ವೈಫಲ್ಯ ಅನುಭವಿಸಿದರೆ, ದೀಪಕ್ ಹೂಡ ಸೊನ್ನೆ ಸುತ್ತಿದರು.

ಅಂತಿಮ ಹಂತದಲ್ಲಿ ನಿಕೋಲಸ್ ಪೂರನ್(28 ಎಸೆತಗಳಲ್ಲಿ 32 ರನ್) ಬ್ಯಾಟ್ ಬೀಸಿ ತಂಡದ ಮೊತ್ತ 120ರ ಗಡಿ ದಾಟಲು ನೆರವಾದರು. ಪಂಜಾಬ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಹೈದರಾಬಾದ್ ಪರ ರಶೀದ್ ಖಾನ್, ಜೇಸನ್ ಹೋಲ್ಡರ್ ಮತ್ತು ಸಂದೀಪ್ ಶರ್ಮಾ ತಲಾ 2 ವಿಕೆಟ್ ಕಿತ್ತರೆ.
Published by: Vinay Bhat
First published: October 24, 2020, 11:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories