IPL

  • associate partner
HOME » NEWS » Ipl » IPL 2020 KXIP VS SRH LIVE CRICKET SCORE KINGS XI PUNJAB VS SUNRISERS HYDERABAD KXIP SLOW START AND LOST 1 WICKET VB

KXIP vs SRH IPL 2020 Live Score: ಪಂಜಾಬ್ ದಿಢೀರ್ ಕುಸಿತ: 5 ವಿಕೆಟ್ ಪತನ

IPL 2020, Kings XI Punjab vs Sunrisers Hyderabad Live Score: ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 15 ಬಾರಿ ಮುಖಾಮುಖಿಯಾಗಿದ್ದು, 11 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ 4 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ.

news18-kannada
Updated:October 24, 2020, 8:49 PM IST
KXIP vs SRH IPL 2020 Live Score: ಪಂಜಾಬ್ ದಿಢೀರ್ ಕುಸಿತ: 5 ವಿಕೆಟ್ ಪತನ
KXIP vs SRH Live Score Updates
  • Share this:
ದುಬೈ (ಅ. 24): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್​ನ 43ನೇ ಪಂದ್ಯ ನಡೆಯುತ್ತಿದ್ದು, ಕೆ. ಎಲ್ ರಾಹುಲ್ ನಾಯಕತ್ವದ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿ ಆಗುತ್ತಿವೆ. ಪ್ಲೇ ಆಫ್​ ಕನಸು ಕಾಣುತ್ತಿರುವ ಎರಡೂ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ.

ಸದ್ಯ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿರುವ ಪಂಜಾಬ್ ತಂಡ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದೆ. ಅಗರ್ವಾಲ್ ಅನುಪಸ್ಥಿತಿಯಲ್ಲಿ ಕೆ. ಎಲ್ ರಾಹುಲ್ ಜೊತೆ ಇನ್ನಿಂಗ್ಸ್​ ಆರಂಭಿಸಿದ ಮಂದೀಪ್ ಸಿಂಗ್ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲ. 14 ಎಸೆತಗಳಲ್ಲಿ 17 ರನ್ ಗಳಿಸಿ ಔಟ್ ಆದರು.

ಆದರೆ, ಬಳಿಕ ರಾಹುಲ್ ಜೊತೆಯಾದ ಕ್ರಿಸ್ ಗೇಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ನಿಧಾನಗತಿಯಲ್ಲಿ ರನ್ ಕಲೆಹಾಕಿತು. ಆದರೆ, ಹೆಚ್ಚುಹೊತ್ತು ಕ್ರೀಸ್​ನಲ್ಲಿ ಈ ಜೋಡಿ ಇರಲಿಲ್ಲ. ರಾಹುಲ್ 27 ಎಸೆತಗಳಲ್ಲಿ 27 ರನ್ ಗಳಿಸಿ ಔಟ್ ಆದರೆ, ಗೇಲ್ ಆಟ 20 ರನ್​ಗೆ ಅಂತ್ಯವಾಯಿತು.

ಸದ್ಯ ಕ್ರೀಸ್​ನಲ್ಲಿ ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಇದ್ದಾರೆ..

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ವಿಜಯ್ ಶಂಕರ್, ಪ್ರಿಯಂ ಗಾರ್ಗ್, ಜೇಸನ್ ಹೋಲ್ಡರ್, ರಶೀದ್ ಖಾನ್, ಅಬ್ದುಲ್ ಸಮದ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.

ಪಂಜಾಬ್ ತಂಡದಲ್ಲಿ ಎರಡು ದೊಡ್ಡ ಬದಲಾವಣೆ ಮಾಡಲಾಗಿದೆ. ಮಯಾಂಕ್ ಅಗರ್ವಾಲ್ ಬದಲು ಮಂದೀಪ್ ಸಿಂಗ್ ಹಾಗೂ ಜಿಮ್ಮಿ ನೀಶಮ್ ಬದಲು ಕ್ರಿಸ್ ಜೋರ್ಡನ್ ಕಣಕ್ಕಿಳಿಯುತ್ತಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಕ್ರಿಸ್ ಗೇಲ್, ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಅರ್ಶ್​ದೀಪ್ ನಾಥ್, ಮೊಹಮ್ಮದ್ ಶಮಿ.


ಪಂಜಾಬ್ ಹಾಗೂ ಹೈದರಾಬಾದ್ ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಜಯ ಗಳಿಸಿದರೆ 6 ಪಂದ್ಯಗಳಲ್ಲಿ ಸೋಲು ಕಂಡಿವೆ. ಹೈದರಾಬಾದ್ ಮತ್ತು ಪಂಜಾಬ್ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದೆ.

ಪಂಜಾಬ್ ತಂಡ ಕ್ರಿಸ್ ಗೇಲ್ ಬಂದಮೇಲೆ ಆಡಿದ ಮೂರು ಪಂದ್ಯವನ್ನು ಗೆದ್ದುಬೀಗಿದೆ. ಹೀಗೆ ತಂಡಕ್ಕೆ ಬ್ಯಾಟಿಂಗ್ ಬಲಬಂದಂತಾಗಿದೆ. ಟೂರ್ನಿ ಆರಂಭದಿಂದಲೂ ವೈಫಲ್ಯ ಅನುಭವಿಸಿದ್ದ ಮ್ಯಕ್ಸ್​​ವೆಲ್ ಲಯಕ್ಕೆ ಮರಳಿದ್ದಾರೆ. ರಾಹುಲ್, ಮಯಾಂಕ್ ಪಂಜಾಬ್​ನ ಆಧಾರವಾಗಿದ್ದಾರೆ. ಸ್ಫೋಟಕ ಆಟಗಾರ ನಿಕೋಲಸ್ ಪೂರನ್ ತಂಡದ ಬ್ಯಾಟಿಂಗ್ ಸಾಮರ್ಥ್ಯ ಹೆಚ್ಚಿಸಿದ್ದಾರೆ.

ಇತ್ತ ಹೈದರಾಬಾದ್ ಪರ ಕಳೆದ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಅದ್ಭುತ ಪ್ರದರ್ಶನ ತೋರಿದ್ದರು. ವಿಜಯ್ ಶಂಕರ್ ಕೂಡ ಬ್ಯಾಟ್ ಬೀಸಿದ್ದರು. ಆದರೆ, ಇತರೆ ಬ್ಯಾಟ್ಸ್​ಮನ್​ಗಳು ಯಾರು ಅಬ್ಬರಿಸಲಿಲ್ಲ. ಹೀಗಾಗಿ ಸಂಘಟಿತ ಪ್ರದರ್ಶನ ನೀಡುವ ಅಗತ್ಯವಿದೆ. ಹೊಸದಾಗಿ ತಂಡ ಸೇರಿಕೊಂಡಿರುವ ವಿಂಡೀಸ್ ಆಲ್​ರೌಂಡರ್​ ಜೇಸನ್ ಹೋಲ್ಡರ್​​ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ನ ಸಾಮರ್ಥ್ಯ ಹೆಚ್ಚಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 15 ಬಾರಿ ಮುಖಾಮುಖಿಯಾಗಿದ್ದು, 11 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ 4 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ.
Published by: Vinay Bhat
First published: October 24, 2020, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories