KXIP vs RR: ಗೇಲ್ ಆರ್ಭಟ: ರಾಜಸ್ಥಾನ್ ರಾಯಲ್ಸ್​ಗೆ ಕಠಿಣ ಸವಾಲು ನೀಡಿದ ಪಂಜಾಬ್

IPL 2020, Kings XI Punjab and Rajasthan Royals: ಪಂಜಾ​ಬ್​ ಹಾಗೂ ರಾಜಸ್ಥಾನ್​ 20 ಬಾರಿ ಮುಖಾಮುಖಿ ಆಗಿದ್ದು, ರಾಜಸ್ಥಾನ್​ ರಾಯಲ್ಸ್ 11 ಬಾರಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್​ 9 ಬಾರಿ ಗೆದ್ದಿದೆ.

Chris Gayle

Chris Gayle

 • Share this:
  ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 50ನೇ ಪಂದ್ಯದಲ್ಲಿ  ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್​ಗೆ 186 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ  ಟಾಸ್ ಗೆದ್ದ ಆರ್​ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಕಪ್ತಾನನ ನಿರ್ಧಾರ ಸರಿ ಎಂಬಂತೆ ಮೊದಲ ಓವರ್​ನಲ್ಲೇ ಮಂದೀಪ್ ಸಿಂಗ್​ ಅವರನ್ನು ಔಟ್ ಮಾಡುವ ಮೂಲಕ ಜೋಫ್ರಾ ಆರ್ಚರ್ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

  ಬಳಿಕ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಆರಂಭದಲ್ಲೇ ಆರ್ಭಟಿಸಲು ಆರಂಭಿಸಿದರು. ಅದರಲ್ಲೂ ಕಾರ್ತಿಕ್ ತ್ಯಾಗಿ ಎಸೆದ 5ನೇ ಓವರ್​ನಲ್ಲಿ ಫೋರ್, ಸಿಕ್ಸ್, ಫೋರ್ ಬಾರಿಸುವ ಮೂಲಕ ರನ್​ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಹ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು. ಅಲ್ಲದೆ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಮೊದಲ ಹತ್ತು ಓವರ್ ಮುಕ್ತಾಯಕ್ಕೆ 81 ರನ್​ ಪೇರಿಸಿತು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಭರ್ಜರಿ ಸಿಕ್ಸರ್​ನೊಂದಿಗೆ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಯುನಿವರ್ಸ್ ಬಾಸ್​ ಬ್ಯಾಟ್​ನಿಂದ 4 ಸಿಕ್ಸರ್ ಹಾಗೂ 4 ಬೌಂಡರಿಗಳು ಮೂಡಿ ಬಂದಿದ್ದವು.

  ತಂಡದ ಮೊತ್ತ 121 ರನ್​ ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ಕೆಎಲ್ ರಾಹುಲ್ (46) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಅರ್ಧಶತಕವನ್ನು ತಪ್ಪಿಸಿಕೊಂಡರು. ಬಳಿಕ ಗೇಲ್ ಜೊತೆಗೂಡಿದ ಪೂರನ್ ಆರಂಭದಲ್ಲೇ ಸಿಕ್ಸರ್​ಗಳ ಮೂಲಕ ಪವರ್ ತೋರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ 137 ರನ್​ಗಳಿಸಿತು.

  ಅಂತಿಮ ಓವರ್​ಗಳಲ್ಲಿ ಆರ್ಭಟಿಸಲು ಆರಂಭಿಸಿದ ಪೂರನ್-ಗೇಲ್ ಸಿಕ್ಸ್, ಫೋರ್​ಗಳ ಮೂಲಕ ರನ್ ಗತಿಯನ್ನು ಹೆಚ್ಚಿಸಿದರು. ಆದರೆ ಸ್ಟೋಕ್ಸ್ ಅವರ 18ನೇ ಓವರ್​ನಲ್ಲಿ ರಾಹುಲ್ ತೆವಾಠಿಯಾ ಬೌಂಡರಿ ಲೈನ್​ನಲ್ಲಿ ಹಿಡಿದ ಅದ್ಭುತ ಕ್ಯಾಚ್​​ಗೆ ಪೂರನ್ (22) ಬಲಿಯಾಗಬೇಕಾಯಿತು. ಆದರೆ ಇನ್ನೊಂದೆಡೆ ಗೇಲ್ ಅಬ್ಬರ ಮುಂದುವರೆದಿತ್ತು. 63 ಎಸೆತಗಳಲ್ಲಿ 99 ರನ್​ಗಳಿಸಿದ್ದ ಗೇಲ್ ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಬೌಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ತಮ್ಮ ಈ ಭರ್ಜರಿ ಬ್ಯಾಟಿಂಗ್​ನಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದ್ದರು.

  ಕ್ರಿಸ್ ಗೇಲ್​ 10 ರನ್ ಗಳಿಸಿದ್ದ ವೇಳೆ ರಿಯಾನ್ ಪರಾಗ್ ಕೈಚೆಲ್ಲಿದ ಕ್ಯಾಚ್ ರಾಜಸ್ಥಾನ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಇನ್ನು ಕೊನೆಯ ಓವರ್​ನಲ್ಲಿ 9 ರನ್ ನೀಡಿದ ಆರ್ಚರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೊತ್ತವನ್ನು 185 ಕ್ಕೆ ನಿಯಂತ್ರಿಸಿದರು. ರಾಜಸ್ಥಾನ್ ರಾಯಲ್ಸ್ ಪರ 4 ಓವರ್​ನಲ್ಲಿ ಕೇವಲ 26 ರನ್ ನೀಡಿ 2 ವಿಕೆಟ್ ಉರುಳಿಸುವ ಮೂಲಕ ಜೋಫ್ರಾ ಆರ್ಚರ್ ಯಶಸ್ವಿ ಬೌಲರ್ ಎನಿಸಿಕೊಂಡರು.  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ​​ ತಂಡ ಪ್ರಕಟ
  Published by:zahir
  First published: