IPL

  • associate partner
HOME » NEWS » Ipl » IPL 2020 KXIP VS RR LIVE CRICKET SCORE KINGS XI PUNJAB AND RAJASTHAN ROYALS WON BY 7 WICKETS ZP

KXIP vs RR: ಕಿಂಗ್ಸ್ ಅಂಗಳದಲ್ಲಿ ರಾಯಲ್ಸ್ ದರ್ಬಾರ್

IPL 2020, Kings XI Punjab and Rajasthan Royals: ಪಂಜಾ​ಬ್​ ಹಾಗೂ ರಾಜಸ್ಥಾನ್​ 21 ಬಾರಿ ಮುಖಾಮುಖಿ ಆಗಿದ್ದು, ರಾಜಸ್ಥಾನ್​ ರಾಯಲ್ಸ್ 12 ಬಾರಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್​ 9 ಬಾರಿ ಗೆದ್ದಿದೆ.

news18-kannada
Updated:October 30, 2020, 11:11 PM IST
KXIP vs RR: ಕಿಂಗ್ಸ್ ಅಂಗಳದಲ್ಲಿ ರಾಯಲ್ಸ್ ದರ್ಬಾರ್
Ben Stokes
  • Share this:
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 50ನೇ ಪಂದ್ಯದಲ್ಲಿ  ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪ್ಲೇ ಆಫ್​ಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.  ಇದಕ್ಕೂ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್​ಗೆ 186 ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್​ಗೆ ಬೆನ್ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೋಕ್ಸ್​ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ 5ನೇ ಓವರ್​ನಲ್ಲೇ ತಂಡದ ಮೊತ್ತ 50ರ ಗಡಿದಾಟಿತು. ಅಷ್ಟೇ ಅಲ್ಲದೆ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಸ್ಟೋಕ್ಸ್ ಬ್ಯಾಟ್​ನಿಂದ 3 ಸಿಕ್ಸ್, 6 ಬೌಂಡರಿಗಳು ಮೂಡಿಬಂದಿದ್ದವು. ಆದರೆ ಇದರ ಬೆನ್ನಲ್ಲೇ ಜೋರ್ಡನ್ ಎಸೆತದಲ್ಲಿ ಕ್ಯಾಚ್ ನೀಡಿ ಸ್ಟೋಕ್ಸ್  ನಿರ್ಗಮಿಸಿದರು.

ಬಳಿಕ ಜೊತೆಗೂಡಿದ ಸಂಜು ಸ್ಯಾಮ್ಸನ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಶಿಸಿದರು. ಅದರಲ್ಲೂ ಸ್ಯಾಮ್ಸನ್ ಕೆಲ ಬಿರುಸಿನ ಹೊಡೆತಗಳ ಮೂಲಕ ತಂಡದ ರನ್ ಗತಿ ಇಳಿಕೆಯಾಗದಂತೆ ನೋಡಿಕೊಂಡರು. ಪರಿಣಾಮ 10 ಓವರ್​ನಲ್ಲಿ ತಂಡದ ಮೊತ್ತ 103 ಕ್ಕೆ ಬಂದು ನಿಂತಿತು.

ಇದರ ಬೆನ್ನಲ್ಲೇ ರಾಬಿನ್ ಉತ್ತಪ್ಪ (30) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಮುಖ ಮಾಡಿದರು. ಆದರೆ ಮತ್ತೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 25 ಎಸೆತಗಳಲ್ಲಿ 48 ರನ್​ಗಳಿಸಿದ್ದರು. ಈ ಹಂತದಲ್ಲಿ ರನ್ ಕದಿಯುವ ಆತುರದಲ್ಲಿ ಸುಚಿತ್ ಥ್ರೋನಲ್ಲಿ ರನೌಟ್​ ಆಗುವ ಮೂಲಕ ಸ್ಯಾಮ್ಸನ್ ಹೊರ ನಡೆದರು.

ಅದಾಗಲೇ ಗುರಿಯ ಸಮೀಪದಲ್ಲಿದ್ದ ತಂಡವನ್ನು ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಅತ್ಯುತ್ತಮ ಜೊತೆಯಾಟದ ಮೂಲಕ ಗೆಲುವಿನತ್ತ ಕೊಂಡೊಯ್ದರು. ಅದರಲ್ಲೂ ಮೊಹಮ್ಮದ್ ಶಮಿ ಎಸೆದ 17ನೇ ಓವರ್​ನಲ್ಲಿ 19 ರನ್​ ಕಲೆಹಾಕುವ ಮೂಲಕ ಜಯವನ್ನು ಖಚಿತಪಡಿಸಿದರು. ಅದರಂತೆ 17.3 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ ರಾಯಲ್ಸ್ 186 ರನ್​ಗಳ ಗುರಿಮುಟ್ಟಿತು.

ಇದಕ್ಕೂ ಮುನ್ನ  ಟಾಸ್ ಗೆದ್ದ ಆರ್​ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಕಪ್ತಾನನ ನಿರ್ಧಾರ ಸರಿ ಎಂಬಂತೆ ಮೊದಲ ಓವರ್​ನಲ್ಲೇ ಮಂದೀಪ್ ಸಿಂಗ್​ ಅವರನ್ನು ಔಟ್ ಮಾಡುವ ಮೂಲಕ ಜೋಫ್ರಾ ಆರ್ಚರ್ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

ಬಳಿಕ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಆರಂಭದಲ್ಲೇ ಆರ್ಭಟಿಸಲು ಆರಂಭಿಸಿದರು. ಅದರಲ್ಲೂ ಕಾರ್ತಿಕ್ ತ್ಯಾಗಿ ಎಸೆದ 5ನೇ ಓವರ್​ನಲ್ಲಿ ಫೋರ್, ಸಿಕ್ಸ್, ಫೋರ್ ಬಾರಿಸುವ ಮೂಲಕ ರನ್​ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಹ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು. ಅಲ್ಲದೆ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಮೊದಲ ಹತ್ತು ಓವರ್ ಮುಕ್ತಾಯಕ್ಕೆ 81 ರನ್​ ಪೇರಿಸಿತು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಭರ್ಜರಿ ಸಿಕ್ಸರ್​ನೊಂದಿಗೆ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಯುನಿವರ್ಸ್ ಬಾಸ್​ ಬ್ಯಾಟ್​ನಿಂದ 4 ಸಿಕ್ಸರ್ ಹಾಗೂ 4 ಬೌಂಡರಿಗಳು ಮೂಡಿ ಬಂದಿದ್ದವು.

ತಂಡದ ಮೊತ್ತ 121 ರನ್​ ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ಕೆಎಲ್ ರಾಹುಲ್ (46) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಅರ್ಧಶತಕವನ್ನು ತಪ್ಪಿಸಿಕೊಂಡರು. ಬಳಿಕ ಗೇಲ್ ಜೊತೆಗೂಡಿದ ಪೂರನ್ ಆರಂಭದಲ್ಲೇ ಸಿಕ್ಸರ್​ಗಳ ಮೂಲಕ ಪವರ್ ತೋರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ 137 ರನ್​ಗಳಿಸಿತು.ಅಂತಿಮ ಓವರ್​ಗಳಲ್ಲಿ ಆರ್ಭಟಿಸಲು ಆರಂಭಿಸಿದ ಪೂರನ್-ಗೇಲ್ ಸಿಕ್ಸ್, ಫೋರ್​ಗಳ ಮೂಲಕ ರನ್ ಗತಿಯನ್ನು ಹೆಚ್ಚಿಸಿದರು. ಆದರೆ ಸ್ಟೋಕ್ಸ್ ಅವರ 18ನೇ ಓವರ್​ನಲ್ಲಿ ರಾಹುಲ್ ತೆವಾಠಿಯಾ ಬೌಂಡರಿ ಲೈನ್​ನಲ್ಲಿ ಹಿಡಿದ ಅದ್ಭುತ ಕ್ಯಾಚ್​​ಗೆ ಪೂರನ್ (22) ಬಲಿಯಾಗಬೇಕಾಯಿತು. ಆದರೆ ಇನ್ನೊಂದೆಡೆ ಗೇಲ್ ಅಬ್ಬರ ಮುಂದುವರೆದಿತ್ತು. 63 ಎಸೆತಗಳಲ್ಲಿ 99 ರನ್​ಗಳಿಸಿದ್ದ ಗೇಲ್ ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಬೌಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ತಮ್ಮ ಈ ಭರ್ಜರಿ ಬ್ಯಾಟಿಂಗ್​ನಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದ್ದರು.

ಕ್ರಿಸ್ ಗೇಲ್​ 10 ರನ್ ಗಳಿಸಿದ್ದ ವೇಳೆ ರಿಯಾನ್ ಪರಾಗ್ ಕೈಚೆಲ್ಲಿದ ಕ್ಯಾಚ್ ರಾಜಸ್ಥಾನ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಇನ್ನು ಕೊನೆಯ ಓವರ್​ನಲ್ಲಿ 9 ರನ್ ನೀಡಿದ ಆರ್ಚರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೊತ್ತವನ್ನು 185 ಕ್ಕೆ ನಿಯಂತ್ರಿಸಿದರು. ರಾಜಸ್ಥಾನ್ ರಾಯಲ್ಸ್ ಪರ 4 ಓವರ್​ನಲ್ಲಿ ಕೇವಲ 26 ರನ್ ನೀಡಿ 2 ವಿಕೆಟ್ ಉರುಳಿಸುವ ಮೂಲಕ ಜೋಫ್ರಾ ಆರ್ಚರ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಈ ಭರ್ಜರಿ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ. ಇನ್ನು ಕಿಂಗ್ಸ್ ಇಲೆವೆನ್ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆಲ್ಲುವ ಮೂಲಕ  ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಹೊಂದಿದೆ.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ​​ ತಂಡ ಪ್ರಕಟ
Published by: zahir
First published: October 30, 2020, 9:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories