IPL

  • associate partner

KXIP vs RR, IPL 2020: ರಾಜಸ್ಥಾನ್​ಗೆ 186 ರನ್​ಗಳ ಟಾರ್ಗೆಟ್ ನೀಡಿದ ಪಂಜಾಬ್

IPL 2020, Kings XI Punjab and Rajasthan Royals Live Score: ಪಂಜಾ​ಬ್​ ಹಾಗೂ ರಾಜಸ್ಥಾನ್​ 20 ಬಾರಿ ಮುಖಾಮುಖಿ ಆಗಿದ್ದು, ರಾಜಸ್ಥಾನ್​ 11 ಬಾರಿ ಹಾಗೂ ಪಂಜಾಬ್​ 9 ಬಾರಿ ಗೆದ್ದಿದೆ.

news18-kannada
Updated:October 30, 2020, 9:20 PM IST
KXIP vs RR, IPL 2020: ರಾಜಸ್ಥಾನ್​ಗೆ 186 ರನ್​ಗಳ ಟಾರ್ಗೆಟ್ ನೀಡಿದ ಪಂಜಾಬ್
RR
  • Share this:
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಆರ್​ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಕಪ್ತಾನನ ನಿರ್ಧಾರ ಸರಿ ಎಂಬಂತೆ ಮೊದಲ ಓವರ್​ನಲ್ಲೇ ಮಂದೀಪ್ ಸಿಂಗ್​ ಅವರನ್ನು ಔಟ್ ಮಾಡುವ ಮೂಲಕ ಜೋಫ್ರಾ ಆರ್ಚರ್ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

ಬಳಿಕ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಆರಂಭದಲ್ಲೇ ಆರ್ಭಟಿಸಲು ಆರಂಭಿಸಿದರು. ಅದರಲ್ಲೂ ಕಾರ್ತಿಕ್ ತ್ಯಾಗಿ ಎಸೆದ 5ನೇ ಓವರ್​ನಲ್ಲಿ ಫೋರ್, ಸಿಕ್ಸ್, ಫೋರ್ ಬಾರಿಸುವ ಮೂಲಕ ರನ್​ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಹ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು. ಅಲ್ಲದೆ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಮೊದಲ ಹತ್ತು ಓವರ್ ಮುಕ್ತಾಯಕ್ಕೆ 81 ರನ್​ ಪೇರಿಸಿತು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಭರ್ಜರಿ ಸಿಕ್ಸರ್​ನೊಂದಿಗೆ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಯುನಿವರ್ಸ್ ಬಾಸ್​ ಬ್ಯಾಟ್​ನಿಂದ 4 ಸಿಕ್ಸರ್ ಹಾಗೂ 4 ಬೌಂಡರಿಗಳು ಮೂಡಿ ಬಂದಿದ್ದವು.

ತಂಡದ ಮೊತ್ತ 121 ರನ್​ ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ಕೆಎಲ್ ರಾಹುಲ್ (46) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಅರ್ಧಶತಕವನ್ನು ತಪ್ಪಿಸಿಕೊಂಡರು. ಬಳಿಕ ಗೇಲ್ ಜೊತೆಗೂಡಿದ ಪೂರನ್ ಆರಂಭದಲ್ಲೇ ಸಿಕ್ಸರ್​ಗಳ ಮೂಲಕ ಪವರ್ ತೋರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ 137 ರನ್​ಗಳಿಸಿತು.

ಅಂತಿಮ ಓವರ್​ಗಳಲ್ಲಿ ಆರ್ಭಟಿಸಲು ಆರಂಭಿಸಿದ ಪೂರನ್-ಗೇಲ್ ಸಿಕ್ಸ್, ಫೋರ್​ಗಳ ಮೂಲಕ ರನ್ ಗತಿಯನ್ನು ಹೆಚ್ಚಿಸಿದರು. ಆದರೆ ಸ್ಟೋಕ್ಸ್ ಅವರ 18ನೇ ಓವರ್​ನಲ್ಲಿ ರಾಹುಲ್ ತೆವಾಠಿಯಾ ಬೌಂಡರಿ ಲೈನ್​ನಲ್ಲಿ ಹಿಡಿದ ಅದ್ಭುತ ಕ್ಯಾಚ್​​ಗೆ ಪೂರನ್ (22) ಬಲಿಯಾಗಬೇಕಾಯಿತು. ಆದರೆ ಇನ್ನೊಂದೆಡೆ ಗೇಲ್ ಅಬ್ಬರ ಮುಂದುವರೆದಿತ್ತು. 63 ಎಸೆತಗಳಲ್ಲಿ 99 ರನ್​ಗಳಿಸಿದ್ದ ಗೇಲ್ ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಬೌಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ತಮ್ಮ ಈ ಭರ್ಜರಿ ಬ್ಯಾಟಿಂಗ್​ನಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದ್ದರು.ನಕೊನೆಯ ಓವರ್​ನಲ್ಲಿ 9 ರನ್ ನೀಡಿದ ಆರ್ಚರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೊತ್ತವನ್ನು 185 ಕ್ಕೆ ನಿಯಂತ್ರಿಸಿದರು.

ಓವರ್​: 20

ಸ್ಕೋರ್: 185/4







ಉಭಯ ತಂಡಗಳಿಗೂ ಇಂದಿನ ಪಂದ್ಯವು ಮಹತ್ವದಾಗಿದ್ದು, ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳುವ ತವಕದಲ್ಲಿದೆ. ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

12 ಪಾಯಿಂಟ್ಸ್​ಗಳೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಇತ್ತ 10 ಅಂಕಗಳಿಸಿರುವ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್ ಕನಸನ್ನು ಉಳಿಸಿಕೊಳ್ಳಲು ಆರ್​ಆರ್ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಅತ್ತ ಪಂಜಾಬ್ ಇಂದು ಗೆದ್ದರೆ 14 ಪಾಯಿಂಟ್​ಗಳೊಂದಿಗೆ ಪ್ಲೇ ಆಫ್ ಆಸೆಯನ್ನು ಖಚಿತಪಡಿಸಿಕೊಳ್ಳಲಿದೆ.

ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಸತತ ಸೋಲಿನ ಬಳಿಕ ಸತತ ಗೆಲುವುಗಳೊಂದಿಗೆ ಭರ್ಜರಿ​ ಕಂಬ್ಯಾಕ್ ಮಾಡಿದೆ. ಅದೇ ರೀತಿಯ ಮುಂಬೈ ವಿರುದ್ಧ 195 ರನ್​ಗಳನ್ನು ಚೇಸ್​ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತನ್ನ ಬ್ಯಾಟಿಂಗ್ ವಿಭಾಗದ ಸಾಮರ್ಥ್ಯವನ್ನು ತೆರೆದಿಟ್ಟಿದೆ.

ಇದಕ್ಕೂ ಮುನ್ನ ನಡೆದ ಪಂಜಾಬ್ ಮತ್ತು ರಾಜಸ್ಥಾನ್ ನಡುವಣ ಮುಖಾಮುಖಿ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸಂಜು ಸ್ಯಾಮ್ಸನ್ ಅವರ 42 ಎಸೆತಗಳ 85 ಮತ್ತು ರಾಹುಲ್ ತೆವಾಠಿಯಾ ಹಾಗೂ ಸ್ಟೀವ್ ಸ್ಮಿತ್‌ರ ಅರ್ಧಶತಕಗಳ ನೆರವಿನಿಂದ ಆರ್‌ಆರ್ ಪಂಜಾಬ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು . ಕಿಂಗ್ಸ್ ಇಲೆವೆನ್ ಓಪನರ್ ಮಯಾಂಕ್ ಅಗರ್ವಾಲ್ ಅವರ ಸ್ಪೋಟಕ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 223 ರನ್ ಪೇರಿಸಿತ್ತು.

ಆದರೆ ಈ ಮೊತ್ತವನ್ನು 19.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ಹೊಸ ಇತಿಹಾಸ ಬರೆದಿದ್ದರು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ. ಇನ್ನು ಎರಡು ತಂಡಗಳು ಈ ಬಾರಿ 200 ಕ್ಕೂ ಅಧಿಕ ರನ್​ ಬಾರಿಸಿರುವ ಕಾರಣ ಇಂದಿನ ಪಂದ್ಯದಲ್ಲೂ ಬೃಹತ್ ಟಾರ್ಗೆಟ್ ನಿರೀಕ್ಷಿಸಬಹುದು. ಎರಡು ತಂಡಗಳು ಬಲಿಷ್ಠವಾಗಿದ್ದು, ಅಂಕಿ ಅಂಶಗಳು ಕೂಡ ಅದನ್ನೇ ಹೇಳುತ್ತಿದೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ​​ ತಂಡ ಪ್ರಕಟ
Published by: zahir
First published: October 30, 2020, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading