IPL

  • associate partner

KXIP vs RCB: ಬೆಂಗಳೂರು vs ಪಂಜಾಬ್ ಕನ್ನಡಿಗರು: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಮೊದಲ ಪಂದ್ಯದಲ್ಲಿ ವಿಫಲರಾದ ನಾಯಕ ವಿರಾಟ್ ಕೊಹ್ಲಿ ಪಂಜಾಬ್ ವಿರುದ್ಧ ತಮ್ಮ ಫಾರ್ಮ್​ ಮರಳಿ ಪಡೆಯುವ ವಿಶ್ವಾಸದಲ್ಲಿದೆ. ಆದರೆ ಆರ್​ಸಿಬಿ ಆಲ್​ರೌಂಡರ್ ಕ್ರಿಸ್ ಮೊರಿಸ್ ಗಾಯಗೊಂಡಿದ್ದು, ಹೀಗಾಗಿ ಇಂದಿನ ಪಂದ್ಯಕ್ಕೆ ಲಭ್ಯರಿಲ್ಲ.

news18-kannada
Updated:September 24, 2020, 6:25 PM IST
KXIP vs RCB: ಬೆಂಗಳೂರು vs ಪಂಜಾಬ್ ಕನ್ನಡಿಗರು: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
KXIP vs RCB
  • Share this:
ರಾಯಲ್ ಚಾಲೆಂಜರ್ಸ್ ಬೆಂಗಳೂರು​ ವರ್ಸಸ್ ಕಿಂಗ್ಸ್ ಇಲೆವೆನ್ ಪಂಜಾಬ್...ಇಂದಿನ ಪಂದ್ಯ ಕನ್ನಡಿಗರಿಗಂತು ಬಲು ವಿಶೇಷ. ಏಕೆಂದರೆ ಇತ್ತ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದರೆ, ಅತ್ತ ಪಂಜಾಬ್​ಗೆ ನಾಯಕನಾಗಿ ಕನ್ನಡಿಗ ಕೆಎಲ್ ರಾಹುಲ್ ಇದ್ದಾರೆ. ಹಾಗೆಯೇ ಆರಂಭಿಕನಾಗಿ ಕನ್ನಡಿಗ ದೇವ್​ದತ್ ಪಡಿಕ್ಕಲ್ ಕಣಕ್ಕಿಳಿಯುತ್ತಿದ್ರೆ, ಕಿಂಗ್ಸ್​ ಓಪನರ್​ ಆಗಿ ಮಯಾಂಕ್ ಅಗರ್ವಾಲ್ ಬ್ಯಾಟ್ ಬೀಸಲಿದ್ದಾರೆ. ಇಲ್ಲಿ ಸ್ಪೋಟಕ ಬ್ಯಾಟಿಂಗ್​ಗೆ ಎಬಿಡಿ ಬಂದರೆ, ಅಲ್ಲಿ ಕ್ರಿಸ್ ಗೇಲ್ ಆರ್ಭಟಿಸಲಿದ್ದಾರೆ.

ಹಾಗೆಯೇ ಆರ್​ಸಿಬಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡವಾದರೆ, ಪಂಜಾಬ್​ನಲ್ಲಿ ಕೋಚ್ ಸೇರಿ 6 ಕನ್ನಡಿಗರಿದ್ದಾರೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಯಾರಿಗೆ ಬೆಂಬಲ ಎಂಬ ಗೊಂದಲದಲ್ಲಿ ರಾಜ್ಯದ ಕ್ರಿಕೆಟ್ ಪ್ರಿಯರು ಇರುವುದು ಸುಳ್ಳಲ್ಲ.

ಈಗಾಗಲೇ ಉಭಯ ತಂಡಗಳು ಒಂದೊಂದು ಪಂದ್ಯವನ್ನಾಡಿದ್ದು, ಸನ್​ರೈಸರ್ಸ್​ ವಿರುದ್ಧ ಶೈನ್ ಆಗುವ ಮೂಲಕ ಆರ್​ಸಿಬಿ ಶುಭಾರಂಭ ಮಾಡಿದೆ. ಆದರೆ ಡೆಲ್ಲಿ ವಿರುದ್ಧ ಮಂಕಾದ ರಾಹುಲ್ ಪಡೆ ಇದೀಗ ಖಾತೆ ತೆರೆಯುವ ತವಕದಲ್ಲಿದೆ.

ಹೈದರಾಬಾದ್‌ ವಿರುದ್ಧ ಆರ್‌ಸಿಬಿ ಪ್ರದರ್ಶನಕ್ಕೆ ನಾಂದಿಯಾಡಿದ್ದು ಎಡಗೈ ಆರಂಭಿಕ ದೇವ್​ದತ್ ಪಡಿಕ್ಕಲ್‌. ಯುವ ಬ್ಯಾಟ್ಸ್​ಮನ್​ಗೆ ತಕ್ಕಮಟ್ಟಿಗೆ ಸಾಥ್ ನೀಡಿದ ಮೊದಲ ವಿಕೆಟ್​ಗೆ 90 ರನ್ ಕಲೆಹಾಕಲು ನೆರವಾಗಿದ್ದು ಆರೋನ್ ಫಿಂಚ್. ಇನ್ನು ಆರ್​ಸಿಬಿಯ ಹಳೆ ಹುಲಿ ಎಬಿ ಡಿವಿಲಿಯರ್ಸ್ ಕೂಡ ಅರ್ಧಶತಕದೊಂದಿಗೆ ಮಿಂಚಿದರು.

ಆದರೆ ಬೆಂಗಳೂರು ತಂಡದ ಬೌಲಿಂಗ್ ವಿಭಾಗವು ಹೇಳಿಕೊಳ್ಳುವಂತಹ ಮಟ್ಟದಲ್ಲಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇದರ ಹೊರತಾಗಿ ಸಮಾಧಾನಕರ ವಿಷಯವೆಂದರೆ ಚೇಸಿಂಗ್ ಪಿಚ್​​ನಲ್ಲಿ ಹೈದರಾಬಾದ್ ವಿರುದ್ಧ ಜಯ ಸಾಧಿಸುವಲ್ಲಿ ಆರ್​ಸಿಬಿ ಬೌಲರುಗಳು ಯಶಸ್ವಿಯಾಗಿರುವುದು.

ಇನ್ನು ಮೊದಲ ಪಂದ್ಯದಲ್ಲಿ ವಿಫಲರಾದ ನಾಯಕ ವಿರಾಟ್ ಕೊಹ್ಲಿ ಪಂಜಾಬ್ ವಿರುದ್ಧ ತಮ್ಮ ಫಾರ್ಮ್​ ಮರಳಿ ಪಡೆಯುವ ವಿಶ್ವಾಸದಲ್ಲಿದೆ. ಆದರೆ ಆರ್​ಸಿಬಿ ಆಲ್​ರೌಂಡರ್ ಕ್ರಿಸ್ ಮೊರಿಸ್ ಗಾಯಗೊಂಡಿದ್ದು, ಹೀಗಾಗಿ ಇಂದಿನ ಪಂದ್ಯಕ್ಕೆ ಲಭ್ಯರಿಲ್ಲ. ಹಾಗಾಗಿ ಯುವ ವಿಕೆಟ್ ಕೀಪರ್ ಜೋಶ್ ಫಿಲಿಪ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಬೌಲಿಂಗ್ ವಿಭಾಗದಲ್ಲಿ ಮೊದಲ ಪಂದ್ಯವನ್ನು ಆಡಿದ ಯಜುವೇಂದ್ರ ಚಹಲ್, ಡೇಲ್ ಸ್ಟೈನ್ ಹಾಗೂ ಸೈನಿ ಮುಂದುವರೆಯಲಿದ್ದು, ಉಮೇಶ್ ಯಾದವ್ ಬದಲಿಗೆ ಸಿರಾಜ್ ಅವರಿಗೆ ಅವಕಾಶ ನೀಡಬಹುದು. ಹೀಗಾಗಿ ಆರ್​ಸಿಬಿ ತಂಡದಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆ ಕಂಡು ಬರುವುದು ಡೌಟ್.ಇತ್ತ ಪಂಜಾಬ್ ತಂಡದಲ್ಲಿ ನಿಕೋಲಸ್ ಪೂರನ್ ಸ್ಥಾನದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಗೇಲ್ ತಂಡಕ್ಕೆ ಮರಳಿದ್ರೆ ರಾಹುಲ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲ್ಲಿದ್ದಾರೆ. ಹಾಗೆಯೇ ಒನ್​ಡೌನ್​ ಸ್ಥಾನದಲ್ಲಿ ಮಯಾಂಕ್ ಬ್ಯಾಟ್ ಬೀಸಬಹುದು. ಇನ್ನು ಮ್ಯಾಕ್ಸ್​ವೆಲ್ ಇಂದಿನ ಪಂದ್ಯದಲ್ಲೂ ಇರುವುದು ಬಹುತೇಕ ಖಚಿತ. ಆದರೆ ಕ್ರಿಸ್ ಜೋರ್ಡನ್ ಬದಲಿಗೆ ಆಲ್​ರೌಂಡರ್ ಜಿಮ್ಮಿ ನೀಶಮ್‌ ತಂಡದಲ್ಲಿ ಸ್ಥಾನ ಪಡೆಯಬಹುದು. ಉಳಿದಂತೆ ಮೊಹಮ್ಮದ್‌ ಶಮಿ, ರವಿ ಬಿಷ್ಣೋಯ್, ಶೆಲ್ಡನ್‌ ಕಾಟ್ರೆಲ್‌, ಕೆ. ಗೌತಮ್‌ ತಂಡದಲ್ಲಿರಲಿದ್ದಾರೆ.

ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಸಂಭವನೀಯ ತಂಡಗಳು ಇಂತಿವೆ:

ಆರ್​ಸಿಬಿ: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ ( ನಾಯಕ), ಎಬಿ ಡಿವಿಲಿಯರ್ಸ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಿವಮ್ ದುಬೆ, ನವದೀಪ್ ಸೈನಿ, ಉಮೇಶ್ ಯಾದವ್/ಸಿರಾಜ್, ಡೇಲ್ ಸ್ಟೇನ್, ಯುಜುವೇಂದ್ರ ಚಹಲ್.

ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್. ರಾಹುಲ್ (ನಾಯಕ/ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ನಿಕೋಲಸ್ ಪೂರನ್ / ಕ್ರಿಸ್ ಗೇಲ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ಕೃಷ್ಣಪ್ಪ ಗೌತಮ್, ಜಿಮ್ಮಿ ನೀಶಮ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮ್ಮಿ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ KXIP vs RCB ಹೈವೋಲ್ಟೇಜ್ ಪಂದ್ಯ
Published by: zahir
First published: September 24, 2020, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading