IPL

  • associate partner
HOME » NEWS » Ipl » IPL 2020 KXIP VS MI LIVE SCORE MATCH 13 AT DUBAI KINGS XI PUNJAB VS MUMBAI INDIANS LATEST UPDATES ZP

KXIP vs MI: ಹಿಟ್​ಮ್ಯಾನ್ ಅರ್ಧಶತಕ: ಪಂಜಾಬ್​ ಮುಂದಿದೆ ಕಠಿಣ ಗುರಿ..!

IPL 2020: ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 13 ರಲ್ಲಿ ಜಯ ಸಾಧಿಸಿದ್ರೆ, ಪಂಜಾಬ್ 11 ಬಾರಿ ಗೆಲುವು ತನ್ನದಾಗಿಸಿಕೊಂಡಿದೆ.

news18-kannada
Updated:October 1, 2020, 9:28 PM IST
KXIP vs MI: ಹಿಟ್​ಮ್ಯಾನ್ ಅರ್ಧಶತಕ: ಪಂಜಾಬ್​ ಮುಂದಿದೆ ಕಠಿಣ ಗುರಿ..!
MI vs KXIP
  • Share this:
ಅಬುಧಾಬಿ ಶೇಖ್ ಝಯಾದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ನ 13ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್​ ಕಿಂಗ್ಸ್​ ಇಲೆವೆನ್ ತಂಡಕ್ಕೆ ಗೆಲ್ಲಲು 192 ರನ್​ಗಳ ಟಾರ್ಗೆಟ್ ನಿಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ನಾಯಕ ರಾಹುಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಶೆಲ್ಡೆನ್ ಕಾಟ್ರೆಲ್ ಕ್ವಿಂಟನ್ ಡಿ ಕಾಕ್​ರನ್ನು ಮೊದಲ ಓವರ್​ನಲ್ಲೇ ಪೆವಿಲಿಯನ್​ಗೆ ಕಳುಹಿಸಿ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು.

ತಂಡದ ಮೊತ್ತ 21 ರನ್ ಇದ್ದಾಗ ರನ್ ಕದಿಯುವ ಆತುರದಲ್ಲಿ  ಸೂರ್ಯಕುಮಾರ್ ಯಾದವ್ (10) ಮೊಹಮ್ಮದ್ ಶಮಿ ನಿಖರ ಎಸೆತಕ್ಕೆ ರನೌಟ್ ಆಗಿ ಹೊರನಡೆದರು. ಈ ಬಳಿಕ ಜೊತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇನಲ್ಲಿ ಮುಂಬೈ ಇಂಡಿಯನ್ಸ್​ ಗಳಿಸಿದ್ದು 41 ರನ್​ಗಳು ಮಾತ್ರ. ಹಾಗೆಯೇ ಮೊದಲ ಹತ್ತು ಓವರ್​ಗಳಲ್ಲಿ ಪೇರಿಸಿದ್ದು 62 ರನ್​ಗಳು.

ಹತ್ತು ಓವರ್​ಗಳ ಬಳಿಕ ಇಶಾನ್ ಕಿಶನ್ ಒಂದಷ್ಟು ಆರ್ಭಟಿಸಲು ಯತ್ನಿಸಿದರೂ ಪಂಜಾಬ್ ಬೌಲರುಗಳ ಮುಂದೆ ಅದು ಸಾಧ್ಯವಾಗಿಲ್ಲ. ಅದರಲ್ಲೂ 24 ರನ್​ಗಳಿಸಿದ್ದಾಗ ರವಿ ಬಿಷ್ಣೋಯ್ ಕ್ಯಾಚ್ ಕೈಚೆಲ್ಲುವ ಮೂಲಕ ಇಶಾನ್​ಗೆ ಜೀವದಾನ ನೀಡಿದ್ದರು. ಆದರೆ ಅದನ್ನು ಸದುಪಯೋಗಪಡಿಸುವಲ್ಲಿ ಎಡವಿದ ಮುಂಬೈ ಎಡಗೈ ದಾಂಡಿಗ 28 ರನ್​ಗಳಿಸಿ ಕೃಷ್ಣಪ್ಪ ಗೌತಮ್​ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ವೇಳೆಗೆ ಹಿಟ್​ಮ್ಯಾನ್ ಬ್ಯಾಟ್​ನಿಂದ 1 ಸಿಕ್ಸರ್ ಹಾಗೂ 7 ಬೌಂಡರಿಗಳು ಸಿಡಿದಿದ್ದವು. ಹಾಫ್ ಸೆಂಚುರಿ ಬೆನ್ನಲ್ಲೇ ಆರ್ಭಟ ಶುರು ಮಾಡಿದ ಹಿಟ್​ಮ್ಯಾನ್ ಫೋರ್​-ಸಿಕ್ಸ್​ಗಳ ಸುರಿಮಳೆ ಸುರಿಸಿದರು. ಪರಿಣಾಮ 16 ಓವರ್​ಗಳಲ್ಲಿ ತಂಡದ ಮೊತ್ತ 124 ಕ್ಕೆ ಬಂದು ನಿಂತಿತು.

ಆದರೆ 17ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಲೈನ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೇಮ್ಸ್ ನೀಶಮ್ ಅವರ ಅದ್ಭುತ ಫೀಲ್ಡಿಂಗ್​ ಕ್ಯಾಚ್​ಗೆ 45 ಎಸೆತಗಳಲ್ಲಿ 70 ರನ್​ ಬಾರಿಸಿದ ರೋಹಿತ್ ಹೊರನಡೆಯಬೇಕಾಯಿತು.

ಆ ಬಳಿಕ ಕ್ರೀಸ್​ಗೆ ಆಗಮಸಿದ ಹಾರ್ದಿಕ್ ಪಾಂಡ್ಯ ಜಿಮ್ಮಿ ನೀಶಮ್ ಎಸೆದ 18ನೇ ಓವರ್​ನಲ್ಲಿ ಸಿಕ್ಸ್​-ಫೋರ್​ಗಳೊಂದಿಗೆ ಬರೋಬ್ಬರಿ 18 ರನ್ ಕಲೆಹಾಕಿದರು. 19ನೇ ಓವರ್​ನಲ್ಲೂ 19 ರನ್​ಗಳನ್ನು ಕಲೆಹಾಕುವಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ ಯಶಸ್ವಿಯಾದರು.

ಇನ್ನು ಅಂತಿಮ ಓವರ್​ನಲ್ಲಿ 4 ಭರ್ಜರಿ ಸಿಕ್ಸರ್​ಗಳೊಂದಿಗೆ 25 ರನ್​ ಬಾರಿಸಿ ಪೊಲಾರ್ಡ್-ಪಾಂಡ್ಯ ಜೋಡಿ 23 ಎಸೆತಗಳಲ್ಲಿ 67 ರನ್​ಗಳ ಜೊತೆಯಾಟವಾಡಿದರು. ಇದರೊಂದಿಗೆ ತಂಡದ ಮೊತ್ತ ನಿಗದಿತ 20 ಓವರ್​ನಲ್ಲಿ 191 ಕ್ಕೆ ಬಂದು ನಿಂತಿತು.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
Published by: zahir
First published: October 1, 2020, 9:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories