IPL

  • associate partner
HOME » NEWS » Ipl » IPL 2020 KXIP VS MI HEAD TO HEAD RECORD ZP

KXIP vs MI: ಪಂಜಾಬ್ vs ಮುಂಬೈ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ

KXIP vs MI Head to head record: ಉಭಯ ತಂಡಗಳಲ್ಲಿಯೂ ಬಲಿಷ್ಠ ದಾಂಡಿಗರಿದ್ದು, ಇತ್ತ ನಾಯಕ ಕೆಎಲ್ ರಾಹುಲ್ ಓಪನಿಂಗ್ ಆರಂಭಿಸುತ್ರಿದ್ರೆ, ಅತ್ತ ಕಪ್ತಾನ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ಇಲ್ಲಿ ಮಯಾಂಕ್ ಸಿಡಿಯುತ್ತಿದ್ರೆ, ಮುಂಬೈ ಪಾಳಯದಲ್ಲಿ ಪಾಕೆಟ್ ಡೈನಾಮೋ ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.

news18-kannada
Updated:October 1, 2020, 5:35 PM IST
KXIP vs MI: ಪಂಜಾಬ್  vs ಮುಂಬೈ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ
KXIP vs MI
  • Share this:
ಐಪಿಎಲ್ ಅಂಗಳದ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಲಿದೆ. ಅಬುಧಾಬಿಯ ಶೇಖ್ ಝಾಯದ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂಬುದಕ್ಕೆ ಎರಡು ತಂಡಗಳ ಹಿಂದಿನ ಪಂದ್ಯಗಳೇ ಸಾಕ್ಷಿ. ತಲಾ ಮೂರು ಪಂದ್ಯಗಳನ್ನಾಡಿರುವ ಎರಡೂ ತಂಡಗಳು ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ ಎರಡೂ ತಂಡಗಳು ಸೂಪರ್​ ಓವರ್​ನಲ್ಲಿ ಸೋಲುಗಳನ್ನು ಕಂಡಿರುವುದು ಗಮನಾರ್ಹ. ರೋಹಿತ್ ಪಡೆಯುವ ಆರ್​ಸಿಬಿ ವಿರುದ್ಧ ಸೂಪರ್ ಸೋಲು ಕಂಡರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್ ಆಟದಲ್ಲಿ ರಾಹುಲ್ ಪಡೆ ಶರಣಾಗಿತ್ತು. ಹಾಗೆಯೇ ಉಭಯ ತಂಡಗಳು ಟೂರ್ನಿಯಲ್ಲಿ 200 ಕ್ಕೂ ಅಧಿಕ ರನ್​ ಕೂಡ ಬಾರಿಸಿದ್ದಾರೆ. ಹೀಗಾಗಿ 4ನೇ ಪಂದ್ಯದ ಮೂಲಕ 2ನೇ ಜಯ ಸಾಧಿಸುವ ತವಕದಲ್ಲಿ ಎರಡೂ ತಂಡಗಳು.

ಇನ್ನು ಉಭಯ ತಂಡಗಳಲ್ಲಿಯೂ ಬಲಿಷ್ಠ ದಾಂಡಿಗರಿದ್ದು, ಇತ್ತ ನಾಯಕ ಕೆಎಲ್ ರಾಹುಲ್ ಓಪನಿಂಗ್ ಆರಂಭಿಸುತ್ರಿದ್ರೆ, ಅತ್ತ ಕಪ್ತಾನ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ಇಲ್ಲಿ ಮಯಾಂಕ್ ಸಿಡಿಯುತ್ತಿದ್ರೆ, ಮುಂಬೈ ಪಾಳಯದಲ್ಲಿ ಪಾಕೆಟ್ ಡೈನಾಮೋ ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಹಾಗೆಯೇ ಉಭಯ ತಂಡಗಳ ಈ ಹಿಂದಿನ ಅಂಕಿ ಅಂಶಗಳಲ್ಲೂ ಹೆಚ್ಚಿನ ವ್ಯತ್ಯಾಸಗಳಿಲ್ಲ ಎಂಬುದು ವಿಶೇಷ.

ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 13 ರಲ್ಲಿ ಜಯ ಸಾಧಿಸಿದ್ರೆ, ಪಂಜಾಬ್ 11 ಬಾರಿ ವಿಜಯಿಶಾಲಿಯಾಗಿದ್ದಾರೆ. ಹಾಗೆಯೇ ಕೊನೆಯ ಐದು ಪಂದ್ಯಗಳ ಮುಖಾಮುಖಿಯಲ್ಲೂ ಪಂಜಾಬ್ 2 ಗೆದ್ದರೆ, ಮುಂಬೈ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದರಲ್ಲಿ ಒಂದು ಪಂದ್ಯವನ್ನು ಕಿಂಗ್ಸ್ ಇಲೆವೆನ್ 3 ರನ್​ಗಳಿಂದ ಪರಾಜಯಗೊಂಡರೆ, ಮತ್ತೊಂದು ಪಂದ್ಯದಲ್ಲಿ ಮುಂಬೈ 3 ವಿಕೆಟ್​ಗಳಿಂದ ರೋಚಕ ಗೆಲುವು ಸಾಧಿಸಿರುವುದು ವಿಶೇಷ. ಹೀಗಾಗಿ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಎರಡೂ ಟೀಮ್​ಗಳು ಪರಸ್ಪರ ಸಮಬಲ ಹೊಂದಿದೆ ಎಂದೇ ಹೇಳಬಹುದು.

ಇನ್ನು 2014 ರಲ್ಲಿ ಯುಎಇ ಐಪಿಎಲ್ ಎರಡು ತಂಡಗಳು ಪರಸ್ಪರ ಮುಖಾಮುಖಿಯಾಗಿಲ್ಲ. ಹೀಗಾಗಿ ಇದೇ ಮೊದಲ ಬಾರಿ ಮರಳುಗಾಡಿನ ಪಿಚ್​ನ ಎದುರುಗೊಳುತ್ತಿದೆ. ಅದೇ ರೀತಿ ಮುಂಬೈ ವಿರುದ್ಧ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದು ಶಾನ್ ಮಾರ್ಷ್. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಬ್ಯಾಟ್ ಬೀಸಿದ್ದ ಮಾರ್ಷ್​ ರೋಹಿತ್ ಪಡೆ ವಿರುದ್ಧ 526 ರನ್​ ಕಲೆಹಾಕಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗ ಐಪಿಎಲ್​ನಲ್ಲಿಲ್ಲ. ಹೀಗಾಗಿ ಇದು ಗಣನೆಗೆ ಬರುವುದಿಲ್ಲ. ಇದರ ಹೊರತಾಗಿ ಕೀರನ್ ಪೊಲಾರ್ಡ್ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಅದ್ಭುತವಾಗಿ ಬ್ಯಾಟ್ ಬೀಸಿ 417 ಕಲೆಹಾಕಿದ್ದಾರೆ. ಹೀಗಾಗಿ ಇಂದು ಕೂಡ ಪೊಲಾರ್ಡ್ ಆರ್ಭಟವನ್ನು ನಿರೀಕ್ಷಿಸಬಹುದು.

ಮುಂಬೈ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದ ಪಂಜಾಬ್ ಬೌಲರ್ ಆಗಿ ಪಿಯೂಷ್ ಚಾವ್ಲಾ (15) ಮುಂಚೂಣಿಯಲ್ಲಿದ್ದು, ಹಾಗೆಯೇ ಕಿಂಗ್ಸ್ ವಿಕೆಟ್ ಉರುಳಿಸಿದ ಮುಂಬೈ ವೇಗಿಯಾಗಿ ಲಸಿತ್ ಮಾಲಿಂಗ (22) ಅವರಿದ್ದಾರೆ. ಆದರೆ ಈ ಇಬ್ಬರೂ ಬೌಲರ್​ಗಳು ಈಗ ಎರಡೂ ತಂಡಗಳಲ್ಲಿ ಇಲ್ಲ ಎಂಬುದು ವಿಶೇಷ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ವಿರುದ್ಧ ಪೇರಿಸಿದ ಗರಿಷ್ಠ ಮೊತ್ತ 230 ರನ್​ಗಳು. ಹಾಗೆಯೇ ಮುಂಬೈ ಇಂಡಿಯನ್ಸ್ ಪಂಜಾಬ್ ವಿರುದ್ಧ 223 ರನ್​ಗಳನ್ನು ಬಾರಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಬಹುದು.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
Published by: zahir
First published: October 1, 2020, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories