KXIP vs CSK: ಉಭಯ ಟೀಮ್​ನಲ್ಲೂ 1 ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅನುಭವಿ ಆಟಗಾರರೇ ಕೈಕೊಡುತ್ತಿರುವುದು ಧೋನಿಗೆ ಪ್ರಮುಖ ಚಿಂತೆ. ಆರಂಭಿಕರಾಗಿ ಶೇನ್ ವಾಟ್ಸನ್ ಸತತ ವೈಫಲ್ಯ ಹೊಂದಿದ್ದಾರೆ.

 KXIP vs CSK

KXIP vs CSK

 • Share this:
  ಭಾನುವಾರ ಐಪಿಎಲ್​ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ. ಉಭಯ ತಂಡಗಳು ಸತತ ಸೋಲಿನಿಂದ ಕಂಗೆಟ್ಟಿದ್ದು, ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಒಂದೆಡೆ ಸಿಎಸ್​ಕೆ ಹ್ಯಾಟ್ರಿಕ್ ಸೋಲಿನಿಂದ ಭಾರೀ ಮುಖಭಂಗಕ್ಕೆ ಗುರಿಯಾಗಿದೆ. ಇನ್ನೊಂದೆಡೆ ಪಂಜಾಬ್ ಸತತ ಸೋತರೂ ತಂಡದಲ್ಲಿ ಮಾಡಿಕೊಳ್ಳುತ್ತಿಲ್ಲ ಎಂಬ ಟೀಕೆಗಳು ಜೋರಾಗಿ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಬದಲಾವಣೆಯೊಂದಿಗೆ ಎರಡು ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ.

  ಕಿಂಗ್ಸ್ ಇಲೆವೆನ್ ಪರ ಬ್ಯಾಟ್ಸ್‌ಮನ್‌ಗಳು ಮಿಂಚುತ್ತಿದ್ದರೂ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಡೆತ್ ಓವರ್‌ಗಳಲ್ಲಿ ಪ್ರಮುಖ ಬೌಲರುಗಳು ಕೈಕೊಡುತ್ತಿರುವುದು ತಂಡಕ್ಕೆ ಭಾರೀ ಹಿನ್ನಡೆಯಾಗುತ್ತಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್, ನಿಕೋಲಸ್ ಪೂರನ್ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರ ಸ್ಥಾನದಲ್ಲಿ ಕ್ರಿಸ್ ಗೇಲ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಶಮಿ ಮಿಂಚಿದರೂ ಸಹ ಬೌಲರುಗಳಿಂದ ಸಾಥ್ ಸಿಗದಿರುವುದು ನಾಯಕ ರಾಹುಲ್ ಚಿಂತೆಗೆ ಕಾರಣವಾಗಿದೆ.

  ಇನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅನುಭವಿ ಆಟಗಾರರೇ ಕೈಕೊಡುತ್ತಿರುವುದು ಧೋನಿಗೆ ಪ್ರಮುಖ ಚಿಂತೆ. ಆರಂಭಿಕರಾಗಿ ಶೇನ್ ವಾಟ್ಸನ್ ಸತತ ವೈಫಲ್ಯ ಹೊಂದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಾಟ್ಸನ್ ಬದಲು ಮತ್ತೊಬ್ಬ ಆರಂಭಿಕ ಪ್ರಯೋಗ ಮಾಡಲು ಸಿಎಸ್​ಕೆ ಮುಂದಾಗಬಹುದು. ಇದರ ಹೊರತಾಗಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದು ಕೂಡ ಮುಂದುವರೆಯುವ ಸಾಧ್ಯತೆಯಿದೆ.

  ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್/ಕ್ರಿಸ್ ಗೇಲ್, ಮಂದೀಪ್ ಸಿಂಗ್, ಜೇಮ್ಸ್ ನೀಶಮ್, ಮಂದೀಪ್ ಸಿಂಗ್, ಕೆ.ಗೌತಮ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಮಯಾಂಕ್ ಅಗರ್ವಾಲ್

  ಸಂಭಾವ್ಯ ತಂಡ: ಎಂಎಸ್ ಧೋನಿ (ನಾಯಕ), ಅಂಬಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರ್ರನ್, ಕೇದಾರ್ ಜಾಧವ್, ಡ್ವೈನ್ ಬ್ರಾವೊ, ರವೀಂದ್ರ ಜಡೇಜಾ, ಪೀಯುಷ್ ಚಾವ್ಲಾ, ಶಾರ್ದೂಲ್ ಠಾಕೂರ್, ದೀಪರ್ ಚಹರ್, ಇಮ್ರಾನ್ ತಾಹಿರ್
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: