KXIP vs CSK: ರಾಹುಲ್ ಅರ್ಧಶತಕ: ಚೆನ್ನೈ ಕಿಂಗ್ಸ್​ಗೆ ಕಠಿಣ ಸವಾಲು ನೀಡಿದ ಪಂಜಾಬ್ ಕಿಂಗ್ಸ್

IPL 2020, CSK vs KXIP: ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್​ಕೆ 12 ಬಾರಿ ವಿಜಯ ಸಾಧಿಸಿದ್ರೆ 9 ಸಲ ಕಿಂಗ್ಸ್ ಇಲೆವೆನ್ ಪಂಜಾಬ್ ಜಯ ತನ್ನದಾಗಿಸಿದೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ನ 18ನೇ ಪಂದ್ಯದಲ್ಲಿ  ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ 179 ರನ್​ಗಳ ಟಾರ್ಗೆಟ್ ನೀಡಿದೆ. ನಾಯಕ ಕೆಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್ ಉತ್ತಮ ಮೊತ್ತ ಪೇರಿಸುವಂತಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ನಾಯಕ ಕೆಎಲ್ ರಾಹುಲ್  ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ರಾಹುಲ್ ಉತ್ತಮ ಆರಂಭ ಒದಗಿಸಿದರು.

  ಮೊದಲ 3 ಮೂರು ಓವರ್​ಗಳಲ್ಲಿ 19 ರನ್​ ಕಲೆಹಾಕಿದ ಈ ಜೋಡಿ ಪವರ್ ಪ್ಲೇ ಮುಕ್ತಾಯದ ವೇಳೆ ತಂಡದ ಮೊತ್ತವನ್ನು 46 ಕ್ಕೆ ತಂದು ನಿಲ್ಲಿಸಿದರು. ಬಳಿಕ ವೇಗದ ಆಟಕ್ಕೆ ಒತ್ತು ನೀಡಿದರೂ, ಮಯಾಂಕ್ ಅಗರ್ವಾಲ್ (26) ಪಿಯೂಷ್ ಚಾವ್ಲಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದರು.

  ಬಳಿಕ ನಾಯಕನ ಜೊತೆಗೂಡಿದ ಮಂದೀಪ್ ಸಿಂಗ್ ಆರಂಭದಲ್ಲೇ ಸಿಎಸ್​ಕೆ ಬೌಲರುಗಳ ವಿರುದ್ಧ ತಿರುಗಿ ಬಿದ್ದರು. ಅದರಲ್ಲೂ 11ನೇ ಓವರ್​ನಲ್ಲಿ ಪಿಯೂಷ್ ಚಾವ್ಲಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ರವೀಂದ್ರ ಜಡೇಜಾ ಎಸೆತದಲ್ಲಿ ರಾಯುಡುಗೆ ಸುಲಭ ಕ್ಯಾಚ್ ನೀಡಿ 16 ಎಸೆತಗಳಲ್ಲಿ 27 ರನ್ ಬಾರಿಸಿ ನಿರ್ಗಮಿಸಿದರು.

  ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಕೆಎಲ್ ರಾಹುಲ್, 45 ಎಸೆತಗಳಲ್ಲಿ ಭರ್ಜರಿ ಸಿಕ್ಸರ್​ನೊಂದಿಗೆ ಅರ್ಧಶತಕ ಪೂರೈಸಿದರು. ಅಲ್ಲದೆ ಶಾರ್ದುಲ್ ಠಾಕೂರ್​ ಅವರ 15ನೇ ಓವರ್​ನಲ್ಲಿ 16 ರನ್ ಬಾಚಿಕೊಂಡರು. 15 ಓವರ್​ಗಳಲ್ಲಿ 130 ರನ್ ಪೇರಿಸಿದ ಪಂಜಾಬ್ ಬ್ಯಾಟ್ಸ್​ಮನ್​ಗಳು, ಕೊನೆಯ ಓವರ್​ಗಳಲ್ಲಿ ಅಬ್ಬರಿಸಲು ಪ್ರಾರಂಭಿಸಿದರು. ಪರಿಣಾಮ 17ನೇ ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 152 ಕ್ಕೆ ಬಂದು ನಿಂತಿತು.

  3 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಪೂರನ್ ಬಿಗ್ ಹಿಟ್​ಗೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಧೋನಿಗೆ ಕ್ಯಾಚ್​ ನೀಡಿ ಕೆಎಲ್ ರಾಹುಲ್ (63) ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು. 18ನೇ ಓವರ್ ಎಸೆದ ಶಾರ್ದುಲ್ ಠಾಕೂರ್ 2 ವಿಕೆಟ್​ ಉರುಳಿಸಿ ನೀಡಿದ್ದು ಬರೀ 3 ರನ್ ಮಾತ್ರ.

  ಆದರೆ ಕೊನೆಯ ಎರಡು ಓವರ್​ಗಳಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಮ್ಯಾಕ್ಸ್​ವೆಲ್ ಹಾಗೂ ಸರ್ಫರಾಜ್ ಖಾನ್ ಜೋಡಿ 23 ರನ್​ ಕಲೆಹಾಕುವುದರೊಂದಿಗೆ ತಂಡದ ಮೊತ್ತವನ್ನು ನಿಗದಿತ 20 ಓವರ್​ನಲ್ಲಿ 178ಕ್ಕೆ ತಂದು ನಿಲ್ಲಿಸಿದರು. ಚೆನ್ನೈ ಸೂಪರ್ ಕಿಂಗ್ಸ್​ ಪರ ಶಾರ್ದುಲ್ ಠಾಕೂರ್ 4 ಓವರ್​ನಲ್ಲಿ 39 ರನ್ ನೀಡಿದ 2 ವಿಕೆಟ್ ಕಬಳಿಸಿದರು.
  Published by:zahir
  First published: