IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?

ಐಪಿಎಲ್​ನ 26ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಠಿಯ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡದ ಖಲೀಲ್ ಅಹ್ಮದ್ ನಡುವೆ ಪಿಚ್​ನಲ್ಲಿ ಮಾತಿನ ಚಕಮಕಿ ನಡೆಯಿತು.

ಪಾಂಡ್ಯ ಬ್ರದರ್ಸ್

ಪಾಂಡ್ಯ ಬ್ರದರ್ಸ್

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಸೀಸನ್​ ಕೋಪ-ತಾಪಗಳಿಂದ ಸುದ್ದಿಯಾಗುತ್ತಿದೆ. ಒಂದೆಡೆ ಯುಎಇ ಹವಾಮಾನ ತಾಪವಾದರೆ, ಮತ್ತೊಂದೆಡೆ ಮೈದಾನದಲ್ಲಿನ ಕೋಪ ನೆತ್ತಿಗೇರುತ್ತಿದೆ. ಐಪಿಎಲ್​ನ 26ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಠಿಯ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡದ ಖಲೀಲ್ ಅಹ್ಮದ್ ನಡುವೆ ಪಿಚ್​ನಲ್ಲಿ ಮಾತಿನ ಚಕಮಕಿ ನಡೆಯಿತು. ಇದಾದ ಬಳಿಕ 27ನೇ ಪಂದ್ಯದಲ್ಲೂ ಇಬ್ಬರು ಆಟಗಾರರು ಜಗಳವಾಡಿದ್ದರು. ಆದರೆ ಈ ಬಾರಿ ಕೋಪ ನೆತ್ತಿಗೇರಿಸಿಕೊಂಡಿದ್ದು ಒಂದೇ ತಂಡದ ಆಟಗಾರರು ಎಂಬುದು ವಿಶೇಷ. ಅದರಲ್ಲೂ ಸಹೋದರರು ಎಂಬುದು ಮತ್ತೊಂದು ವಿಶೇಷ.

  ಹೌದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಪಾಂಡ್ಯ ಬ್ರದರ್ಸ್ ಮೈದಾನದಲ್ಲೇ ಬೈಯ್ದಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ್ದರು. ಮೊದಲೇ ವಿಕೆಟ್ ಬೀಳದ ಒತ್ತಡದಲ್ಲಿ ಬೌಲರುಗಳಿದ್ದರು. ಈ ವೇಳೆ 7 ಓವರ್​ನಲ್ಲಿ ಬೌಲಿಂಗ್​ಗೆ ಇಳಿದ ಕೃನಾಲ್ ಪಾಂಡ್ಯ ಅವರ 5ನೇ ಎಸೆತದಲ್ಲಿ ಅಯ್ಯರ್​ ತ್ವರಿತ ಸಿಂಗಲ್ ಓಡಿದರು.

  ಅತ್ತ ಕವರ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅಯ್ಯರ್​ನ್ನು ರನೌಟ್ ಮಾಡಲು ಚೆಂಡನ್ನು ನಾನ್​ ಸ್ಟ್ರೈಕರ್​ನತ್ತ ವೇಗವಾಗಿ ಎಸೆದರು. ಆದರೆ ಅದಾಗಲೇ ಕ್ರೀಸ್ ಒಳಗೆ ತಲುಪಿದ್ದರಿಂದ ಆ ಥ್ರೋ ಅಗತ್ಯವಿರಲಿಲ್ಲ. ಇತ್ತ ತಮ್ಮ ವೇಗದ ಎಸೆತವನ್ನು ಹಿಡಿಯಲು ಕೃನಾಲ್ ಪಾಂಡ್ಯಗೂ ಸಾಧ್ಯವಾಗಿರಲಿಲ್ಲ. ಪರಿಣಾಮ ಓವರ್ ಥ್ರೋ ಮೂಲಕ ಮತ್ತೊಂದು ರನ್ ಡೆಲ್ಲಿ ಪಾಲಾಯಿತು.

  ತನ್ನ ಸಹೋದರನ ಈ ಫೀಲ್ಡಿಂಗ್ ಕೃನಾಲ್‌ಗೆ ಇಷ್ಟವಾಗಿರಲಿಲ್ಲ. ಅಲ್ಲದೇ ಮೈದಾನದಲ್ಲೇ ಬೈದು ತನ್ನ ಕೋಪವನ್ನು ವ್ಯಕ್ತಪಡಿಸಿದರು. ಇದಕ್ಕೆ ಹಾರ್ದಿಕ್ ಪಾಂಡ್ಯ ಕೂಡ ವಿವರಣೆಯನ್ನು ನೀಡುತ್ತಾ ಫೀಲ್ಡ್‌ ಕವರ್ ಮಾಡಲು ಬರಬೇಕಿತ್ತು ಎಂದು ತಮ್ಮ ಸಿಟ್ಟನ್ನು ಹೊರಹಾಕಿದರು. ಈ ಘಟನೆಯನ್ನು ವೀಕ್ಷಿಸುತ್ತಿದ್ದ ಕಮೆಂಟೇಟರ್ ಪ್ರೀತಿಯಿದ್ದಲ್ಲಿ ಮಾತ್ರ ಕೋಪವಿರುತ್ತೇ ಎನ್ನುವ ಮೂಲಕ ಗಮನ ಸೆಳೆದರು.


  ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್​ಗಳ ಟಾರ್ಗೆಟ್​ನ್ನು ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ ಮತ್ತು ಕ್ವಿಂಟನ್ ಡಿ ಕಾಕ್ ಅವರ ಉತ್ತಮ ಪ್ರದರ್ಶನದಿಂದ ಚೇಸ್ ಮಾಡಿ ಗೆಲುವು ದಾಖಲಿಸಿತು.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: