IPL

  • associate partner
HOME » NEWS » Ipl » IPL 2020 KL RAHUL BREAKS SACHIN TENDULKARS EIGHT YEAR OLD RECORD ZP

KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್

KL Rahul: ಈ ಹಿಂದೆ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್​ನ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟ್ಸಮನ್​ ಎಂಬ ದಾಖಲೆ ಬರೆದಿದ್ದರು. ಇದೀಗ ಮತ್ತೊಂದು ಮೈಲುಗಲ್ಲು ಬರೆದಿರುವ ರಾಹುಲ್, ಈ ಬಾರಿ ಪಂಜಾಬ್ ತಂಡಕ್ಕೆ ಟ್ರೋಫಿ ಗೆದ್ದು ಕೊಡುವ ವಿಶ್ವಾಸದಲ್ಲಿದ್ದಾರೆ.

news18-kannada
Updated:September 24, 2020, 10:27 PM IST
KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
ರಾಹುಲ್
  • Share this:
ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಹೊಸ ದಾಖಲೆ ಬರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2 ರನ್ ಕಲೆಹಾಕುವ ಮೂಲಕ ಐಪಿಎಲ್​ನಲ್ಲಿ ಅತೀ ವೇಗವಾಗಿ 2000 ರನ್ ಪೂರೈಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು.

ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸಚಿನ್ 63 ಇನಿಂಗ್ಸ್​ಗಳಲ್ಲಿ 2 ಸಾವಿರ ರನ್ ಪೂರೈಸಿದ್ದರು. ಆದರೆ ಇಂದಿನ ಪಂದ್ಯದ ಮೂಲಕ ಕನ್ನಡಿಗ ಕೆಎಲ್ ರಾಹುಲ್ 60ನೇ ಇನಿಂಗ್ಸ್​ನಲ್ಲಿ ಈ ಸಾಧನೆಗೈದು 8 ವರ್ಷಗಳಿಂದ ಸಚಿನ್ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
2018 ರಿಂದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈ ಹಿಂದೆ ಡೆಲ್ಲಿ  ವಿರುದ್ಧ 14  ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್​ನ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟ್ಸಮನ್​ ಎಂಬ ದಾಖಲೆ ಬರೆದಿದ್ದರು. ಇದೀಗ ಮತ್ತೊಂದು ಮೈಲುಗಲ್ಲು ಬರೆದಿರುವ ರಾಹುಲ್, ಈ ಬಾರಿ ಪಂಜಾಬ್ ತಂಡಕ್ಕೆ ಟ್ರೋಫಿ ಗೆದ್ದು ಕೊಡುವ ವಿಶ್ವಾಸದಲ್ಲಿದ್ದಾರೆ.

Youtube Video
ಇನ್ನು ಐಪಿಎಲ್​ ಇತಿಹಾಸದಲ್ಲೇ ಅತೀ ವೇಗವಾಗಿ 2 ಸಾವಿರ ರನ್ ಪೂರೈಸಿದ ದಾಖಲೆ ಯುನಿರ್ವಸಲ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಈ ಸಾಧನೆಯನ್ನು ಕೇವಲ 48 ಇನಿಂಗ್ಸ್​ಗಳಲ್ಲಿ ಮಾಡಿದ್ದರು.

ಸದ್ಯ ಉತ್ತಮ ಪ್ರದರ್ಶನ ತೋರುತ್ತಿರುವ ಕೆಎಲ್ ರಾಹುಲ್ ಈ ಬಾರಿ ಐಪಿಎಲ್​ನಲ್ಲಿ ನಾಯಕತ್ವದೊಂದಿಗೆ ಮಿಂಚಿದ್ರೆ ಭವಿಷ್ಯ ಟೀಮ್ ಇಂಡಿಯಾದ ಕಪ್ತಾನನಾಗಲಿದ್ದಾರೆ ಎಂದು ಇತ್ತೀಚೆಗಷ್ಟೇ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ತಿಳಿಸಿದ್ದರು.

POINTS TABLE:

ಅದರಂತೆ ಇದೀಗ ಉತ್ತಮವಾಗಿ ಬ್ಯಾಟ್ ಬೀಸುತ್ತಿರುವ ರಾಹುಲ್ ಮುಂದೆ ಭಾರತ ತಂಡವನ್ನು ಮುನ್ನಡೆಸಿದ್ರೆ ಅಚ್ಚರಿಪಡಬೇಕಿಲ್ಲ.
Published by: zahir
First published: September 24, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories