ಅಬುಧಾಬಿಯ ಶೇಖ್ ಝಯಾದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 8ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಆಕರ್ಷಕ ಅರ್ಧಶತಕದೊಂದಿಗೆ ಕೆಕೆಆರ್ ಐಪಿಎಲ್ ಸೀಸನ್ನಲ್ಲಿ ಮೊದಲ ಜಯ ತನ್ನದಾಗಿಸಿತು. ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ನೀಡಿದ 143 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. 2ನೇ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು.
ಹೈದರಾಬಾದ್ ವೇಗಿ ಖಲೀಲ್ ಅಹ್ಮದ್ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ಸುನೀಲ್ ನರೈನ್ ಶೂನ್ಯಕ್ಕೆ ಔಟಾದರು. ಆ ಬಳಿಕ ಜೊತೆಯಾದ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪರಿಣಾಮ ಮೊದಲ 4 ಓವರ್ಗಳಲ್ಲಿ ತಂಡದ ಮೊತ್ತ 40ರ ಗಡಿದಾಟಿತು. ಈ ವೇಳೆ ನಟರಾಜನ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ರಾಣಾ (26) ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಯಕ ದಿನೇಶ್ ಕಾರ್ತಿಕ್ ರಶೀದ್ ಖಾನ್ ಎಸೆತದಲ್ಲಿ ಎಲ್ಡಬ್ಲ್ಯೂ ಆಗಿ ಬಂದ ವೇಗದಲ್ಲೇ ಪೆವಿಲಿಯನ್ ಕಡೆ ಮುಖ ಮಾಡಿದರು.
4ನೇ ವಿಕೆಟ್ಗೆ ಜೊತೆಯಾದ ಗಿಲ್ ಹಾಗೂ ಮೋರ್ಗನ್ 92 ರನ್ಗಳ ಭರ್ಜರಿ ಜೊತೆಯಾಟದ ಮೂಲಕ ಹೈದರಾಬಾದ್ ಬೌಲರುಗಳನ್ನು ದಂಡಿಸಿದರು. ಅಲ್ಲದೆ ಕೊನೆಯವರೆಗೂ ಬ್ಯಾಟ್ ಬೀಸಿದ ಈ ಜೋಡಿ 18ನೇ ಓವರ್ನಲ್ಲಿ ಗುರಿ ಮುಟ್ಟುವ ಮೂಲಕ ಕೆಕೆಆರ್ಗೆ ಮೊದಲ ಜಯ ತಂದುಕೊಟ್ಟರು. ಕೆಕೆಆರ್ ಪರ 62 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ 70 ರನ್ ಬಾರಿಸಿ ಗಮನ ಸೆಳೆದರು. ಅತ್ತ ಇಯಾನ್ ಮೋರ್ಗನ್ ಕೂಡ 29 ಎಸೆತಗಳಲ್ಲಿ 42 ರನ್ಗಳ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್ಆರ್ಹೆಚ್ಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಓಪನರ್ಗಳಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಅವರನ್ನು ಆರಂಭದಲ್ಲೇ ರನ್ ಗಳಿಸದಂತೆ ತಡೆಯುವಲ್ಲಿ ಕೆಕೆಆರ್ ಬೌಲರುಗಳು ಯಶಸ್ವಿಯಾದರು.
ಪ್ಯಾಟ್ ಕಮಿನ್ಸ್ ಎಸೆದ ನಾಲ್ಕನೇ ಓವರ್ನ ಕೊನೆಯ ಬಾಲ್ನ್ನು ಗುರುತಿಸಲು ಎಡವಿದ ಬೈರ್ಸ್ಟೋವ್ (5) ಕ್ಲೀನ್ ಬೌಲ್ಡ್ ಆದರು. ಈ ಬಳಿಕ ಜೊತೆಗೂಡಿದ ವಾರ್ನರ್ -ಮನೀಷ್ ಪಾಂಡೆ ಜೋಡಿ 31 ರನ್ಗಳ ಜೊತೆಯಾಟದೊಂದಿಗೆ 9 ಓವರ್ಗಳಲ್ಲಿ ತಂಡದ ಮೊತ್ತವನ್ನು 59 ಕ್ಕೇರಿಸಿದರು. ಇದೇ ವೇಳೆ 10ನೇ ಓವರ್ನಲ್ಲಿ ದಾಳಿಗಿಳಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ವಾರ್ನರ್ (36) ನಿರ್ಗಮಿಸಿದರು.
ನಾಯಕ ನಿರ್ಗಮನದೊಂದಿಗೆ ಹೈದರಾಬಾದ್ ರನ್ ಗತಿಯು ನಿಧಾನಗೊಂಡಿತು. ಪರಿಣಾಮ 15 ಓವರ್ಗಳಲ್ಲಿ ಸನ್ರೈಸರ್ಸ್ ಗಳಿಸಿದ್ದು 99 ರನ್ಗಳು ಮಾತ್ರ. ಪಂದ್ಯ ಮೇಲೆ ಹಿಡಿತ ಸಾಧಿಸಿದ್ದ ಕೆಕೆಆರ್ ಬೌಲರುಗಳು ಮನೀಷ್ ಪಾಂಡೆ ಹಾಗೂ ವೃದ್ಧಿಮಾನ್ ಸಾಹ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಇತ್ತ ಪಾಂಡೆ ದೊಡ್ಡ ಹೊಡೆತಕ್ಕೆ ಮುಂದಾದರೂ ನಿರೀಕ್ಷಿತ ಫಲ ಸಿಗಲಿಲ್ಲ. ಹೀಗಾಗಿ 17 ಓವರ್ನಲ್ಲಿ ಎಸ್ಆರ್ಹೆಚ್ 118 ರನ್ ಮಾತ್ರ ಪೇರಿಸಲು ಸಾಧ್ಯವಾಯಿತು. ಇತ್ತ 36 ಎಸೆತಗಳಲ್ಲಿ ಮನೀಷ್ ಪಾಂಡೆ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ರಸೆಲ್ಗೆ ಕ್ಯಾಚ್ ನೀಡಿದ ಪಾಂಡೆ 51 ರನ್ನೊಂದಿಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ಕೊನೆಯ ಎರಡು ಓವರ್ಗಳಿರುವಾಗ ಕ್ರೀಸ್ಗಿಳಿದ ಮೊಹಮ್ಮದ್ ನಬಿ ಬಿರುಸಿನ ಆಟಕ್ಕೆ ಮುಂದಾರೂ ಕೆಕೆಆರ್ ಬೌಲರುಗಳ ನಿಖರ ದಾಳಿ ಮುಂದೆ ಪರದಾಡಿದರು. ಹಾಗೆಯೇ 31 ಎಸೆತಗಳಲ್ಲಿ 30 ಬಾರಿಸಿದ ವೃದ್ಧಿಮಾನ್ ಸಾಹ ಕೊನೆಯ ಓವರ್ನಲ್ಲಿ ವಿನಾಕಾರಣ ರನೌಟ್ ಆಗಿ ಹೊರ ನಡೆದರು. ಅಂತಿಮವಾಗಿ ನಬಿ ಕೊನೆಯ ಓವರ್ ಫೋರ್ ಸಹಾಯದಿಂದ ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 142 ರನ್ ಪೇರಿಸುವಂತಾಯಿತು.
ಕೆಕೆಆರ್ ಪರ ಉತ್ತಮ ದಾಳಿ ಸಂಘಟಿಸಿದ ವೇಗಿ ಪ್ಯಾಟ್ ಕಮಿನ್ಸ್ 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಉರುಳಿಸಿ ಗಮನ ಸೆಳೆದರು.
ಸ್ಕೋರ್:
ಸನ್ರೈಸರ್ಸ್ ಹೈದರಾಬಾದ್: 142/4 (20)
ಕೊಲ್ಕತ್ತಾ ನೈಟ್ ರೈಡರ್ಸ್: 145/3 (18)
ಉಭಯ ತಂಡಗಳು ಇಂತಿವೆ:
SRH: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಾಹ, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ , ರಶೀದ್ ಖಾನ್, ಭುವನೇಶ್ವರ್ ಕುಮಾರ್. ಟಿ ನಟರಾಜನ್, ಖಲೀಲ್ ಅಹ್ಮದ್
SRH: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಾಹ, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ , ರಶೀದ್ ಖಾನ್, ಭುವನೇಶ್ವರ್ ಕುಮಾರ್. ಟಿ ನಟರಾಜನ್, ಖಲೀಲ್ ಅಹ್ಮದ್
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
Also Read: KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ