IPL 2020, KKR vs RCB: ಪ್ಲೇ ಆಫ್ ಸನಿಹದಲ್ಲಿ ಆರ್​ಸಿಬಿ: ಕೋಲ್ಕತ್ತಾಗೆ ಮಹತ್ವದ ಪಂದ್ಯ

ಆರ್​ಸಿಬಿ ಈ ಬಾರಿಯ ಟೂರ್ನಿಯಲ್ಲಿ ಭರ್ಜರಿ ಫಾರ್ಮ್​ನಲ್ಲಿದೆಯಾದರೂ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಪದೇಪದೆ ಎಡವುತ್ತಿದೆ. ದೇವದತ್ ಪಡಿಕ್ಕಲ್ ಬ್ಯಾಟ್ ಸದ್ದು ಮಾಡುತ್ತಿದೆ.

KKR vs RCB

KKR vs RCB

 • Share this:
  ಅಬುಧಾಬಿ (ಅ. 21): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿಂದು ಐಪಿಎಲ್​ನ 39ನೇ ಪಂದ್ಯ ನಡೆಯಲಿದ್ದು, ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿ ಆಗಲಿವೆ. ಆರ್​ಸಿಬಿ ಈ ಪಂದ್ಯ ಗೆದ್ದು ಪ್ಲೇ ಆಫ್ ಹಂತವನ್ನು ಸನಿಹಗೊಳಿಸುವ ಅಂದಾಜಿನಲ್ಲಿದ್ದರೆ, ಇತ್ತ ಕೆಕೆಆರ್​ ಪಾಲಿಗೆ ಈ ಮ್ಯಾಚ್ ಮಹತ್ವ ಪಡೆದಿದೆ.

  ಆರ್‌ಸಿಬಿ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, ಇನ್ನುಳಿದ ಮೂರರಲ್ಲಿ ಸೋಲು ಅನುಭವಿಸಿದೆ. ಒಟ್ಟು 12 ಅಂಕಗಳೊಂದಿಗೆ ಐಪಿಎಲ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕೋಲ್ಕತ್ತಾ ಆಡಿರುವ 9 ಪಂದ್ಯಗಳಿಂದ 5ರಲ್ಲಿ ಗೆಲುವು ಪಡೆದು ನಾಲ್ಕನೇ ಸ್ಥಾನದಲ್ಲಿದೆ.

  Devdutt Padikkal: ಕೊನೆಗೂ ರಿಲೇಶನ್​ಶಿಪ್ ಸ್ಟೇಟಸ್​ ಬಿಟ್ಟುಕೊಟ್ಟ​ ದೇವದತ್​ ಪಡಿಕಲ್​ !

  ಕಳೆದ ಪಂದ್ಯದಲ್ಲಿ ಬೆಂಗಳೂರು ಫ್ರಾಂಚೈಸಿ, ರಾಜಸ್ಥಾನ್‌ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಕೇವಲ 22 ಎಸೆತಗಳಲ್ಲಿ 55 ರನ್‌ಗಳನ್ನು ಸಿಡಿಸಿದ್ದ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ನೈಟ್‌ ರೈಡರ್ಸ್ ತಂಡ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತ್ತು. ಲಾಕಿ ಫರ್ಗೂಸನ್‌ ಕೋಲ್ಕತಾ ಪರ ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ್ದರು.

  ಆರ್​ಸಿಬಿ ಈ ಬಾರಿಯ ಟೂರ್ನಿಯಲ್ಲಿ ಭರ್ಜರಿ ಫಾರ್ಮ್​ನಲ್ಲಿದೆಯಾದರೂ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಪದೇಪದೆ ಎಡವುತ್ತಿದೆ. ದೇವದತ್ ಪಡಿಕ್ಕಲ್ ಬ್ಯಾಟ್ ಸದ್ದು ಮಾಡುತ್ತಿದೆ. ಆದರೆ, ಆ್ಯರೋನ್ ಫಿಂಚ್ ತಮ್ಮ ನೈಜ್ಯ ಪ್ರದರ್ಶನ ನೀಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಡಿವಿಲಿಯರ್ಸ್​, ಗುರುಕೀರತ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕ್ರಿಸ್ ಮೊರೀಸ್ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ.

  IPL 2020: ಕನ್ನಡಿಗನ ಕೈಯಲ್ಲಿದೆ ಆರೆಂಜ್​ ಕ್ಯಾಪ್​; ರಾಹುಲ್​ ಈ ಬಾರಿ ಹೊಡೆದ ರನ್​ಗಳೆಷ್ಟು ಗೊತ್ತಾ?

  ಬೌಲಿಂಗ್​ನಲ್ಲಿ ಆರ್​ಸಿಬಿ ಒಂದಿಷ್ಟು ಸುಧಾರಿಸಿಕೊಂಡರೆ ಉತ್ತಮ. ಉಸುರು ಉದಾನ ಸಾಕಷ್ಟು ದುಬಾರಿ ಆಗುತ್ತಿದ್ದಾರೆ. ಹೀಗಾಗಿ ಡೇಲ್ ಸ್ಟೇನ್​ಗೆ ಅವಕಾಶ ನೀಡುವ ಅಂದಾಜಿದೆ. ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್ ಸ್ಪಿನ್ ಮೋಡಿ ನಡೆಯುತ್ತಿದ್ದು, ನವ್​ದೀಪ್ ಸೈನಿ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.

  ಇತ್ತ ನಾಯಕನ ಬದಲಾವಣೆಯಿಂದ ಗೆಲುವಿನ ಲಯಕ್ಕೆ ಮರಳಿರುವ ಕೆಕೆಆರ್​ಗೆ ಈ ಪಂದ್ಯ ಮಹತ್ವದ್ದಾಗಿದೆ. ಜೊತೆಗೆ ಸೇಡಿನ ಪಂದ್ಯಕೂಡ ಆಗಿದೆ. ಲಾಕಿ ಫರ್ಗೂಸನ್‌ ಕಳೆದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ್ದರು. ಹೀಗಾಗಿ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಜೊತೆಗೆ ಸುನೀಲ್ ನರೈನ್ ಇಂದು ಕಣಕ್ಕಿಳಿಯುವ ಅಂದಾಜಿದೆ.

  ಕಳೆದ ಪಂದ್ಯದಲ್ಲಿ ಶುಭ್ಮನ್ ಗಿಲ್, ನಿತೀಶ್ ರಾಣ, ತ್ರಿಪಾಠಿ, ಮಾರ್ಗನ್, ದಿನೇಶ್ ಕಾರ್ತಿಕ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಆದರೆ ಕೆರಿಬಿಯನ್ ಆಲ್​ರೌಂಡರ್ ರಸೆಲ್ ಮಾತ್ರ ಬ್ಯಾಟಿಂಗ್​ನಲ್ಲಿ ಮಿಂಚುತ್ತಿಲ್ಲ. ಆದರೆ, ಇವರನ್ನು ಕಡೆಗಣಿಸುವಂತಿಲ್ಲ. ಎಂತಹದೆ ಸಂದರ್ಭದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಇವರಿಗಿದೆ.

  ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಉಭಯ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕೋಲ್ಕತ್ತಾ ನೈಟ್ ರೈಡರ್ಸ್​​ ತಂಡ 15ರಲ್ಲಿ ಗೆಲುವು ದಾಖಲಿಸಿದ್ದರೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು‌ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ.
  Published by:Vinay Bhat
  First published: