news18-kannada Updated:September 23, 2020, 9:38 PM IST
ರೋಹಿತ್ ಶರ್ಮಾ
ಅಬುಧಾಬಿಯ ಶೇಖ್ ಝಯಾದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಸನ್ರೈಸರ್ ಹೈದರಾಬಾದ್ಗೆ 196 ರನ್ಗಳ ಟಾರ್ಗೆಟ್ ನೀಡಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ (1) ಶಿವಂ ಮಾವಿ ಅವರ 2ನೇ ಓವರ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು.
ಇದರ ಬೆನ್ನಲ್ಲೇ ಕ್ರೀಸ್ಗಿಳಿದ ಸೂರ್ಯಕುಮಾರ್ ಯಾದವ್ ಮೂರನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸುವ ಮೂಲಕ 16 ರನ್ ಕಲೆಹಾಕಿದರು. ಅಲ್ಲದೆ ನಾಯಕನ ಜೊತೆಗೂಡಿ 27 ಎಸೆತಗಳಲ್ಲಿ 50 ರನ್ಗಳ ಸ್ಪೋಟಕ ಜೊತೆಯಾಟವಾಡಿದರು. ಪರಿಣಾಮ ಪವರ್ಪ್ಲೇ ನಲ್ಲಿ ಮುಂಬೈ ಇಂಡಿಯನ್ಸ್ 59 ರನ್ ಗಳಿಸುವಂತಾಯಿತು.ಒಂದೆಡೆ ಸೂರ್ಯಕುಮಾರ್ ಅಬ್ಬರಿಸುತ್ತಿದ್ರೆ ಮತ್ತೊಂದೆಡೆ ರೋಹಿತ್ ಶರ್ಮಾ ಕೂಡ ಉತ್ತಮ ಸಾಥ್ ನೀಡಿದರು. 4 ಭರ್ಜರಿ ಸಿಕ್ಸರ್ ಸಿಡಿಸಿ ಕೆಕೆಆರ್ ಬೌಲರುಗಳ ಬೆಂಡೆತ್ತಿದರು. ಆದರೆ 28 ಎಸೆತಗಳಲ್ಲಿ 48 ರನ್ಗಳಿಸಿದ ಸೂರ್ಯಕುಮಾರ್ ಯಾದವ್ ರನೌಟ್ ಆಗುವ ಮೂಲಕ ಅರ್ಧಶತಕ ತಪ್ಪಿಸಿಕೊಂಡರು. ಇನ್ನೊಂದೆಡೆ 39 ಎಸೆತಗಳಲ್ಲಿ ಎದುರಿಸಿ ಹಿಟ್ಮ್ಯಾನ್ ತಮ್ಮ ಅರ್ಧಶತಕ ಪೂರೈಸಿದರು.
ಹಾಫ್ ಸೆಂಚುರಿ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಎಸೆದ 14ನೇ ಓವರ್ನಲ್ಲಿ 2 ಭರ್ಜರಿ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ಮತ್ತೊಂದು ತುದಿಯಲ್ಲಿದ್ದ ಸೌರವ್ ತಿವಾರಿ 13 ಎಸೆತಗಳಲ್ಲಿ ಒಂದು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 21 ರನ್ಗಳಿಸಿ ಸುನೀಲ್ ನರೈನ್ಗೆ ವಿಕೆಟ್ ಒಪ್ಪಿಸಿದರು. ಇದೇ ವೇಳೆ ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 16 ಓವರ್ಗಳಲ್ಲಿ 148 ರನ್ ತಲುಪಿತ್ತು.
ಪ್ಯಾಟ್ ಕಮಿನ್ಸ್ ಅವರ 17ನೇ ಓವರ್ನಲ್ಲಿ ಸಿಡಿದ ಹಾರ್ದಿಕ್ ಪಾಂಡ್ಯ ಒಂದು ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ 19 ರನ್ ಕಲೆಹಾಕಿದರು. ಆದರೆ 18ನೇ ಓವರ್ನಲ್ಲಿ ಬಿಗ್ ಹಿಟ್ಗೆ ಕೈ ಹಾಕಿದ ಹಿಟ್ಮ್ಯಾನ್ ಕ್ಯಾಚ್ ನೀಡಿ ಹೊರ ನಡೆದರು. ಈ ವೇಳೆಗೆ ರೋಹಿತ್ ಶರ್ಮಾ 54 ಎಸೆತಗಳಲ್ಲಿ 80 ರನ್ ಪೇರಿಸಿದ್ದರು. ಆದರೆ ನಾಯಕನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (18) ಹಿಟ್ ವಿಕೆಟ್ ಆಗುವ ಮೂಲಕ ಹೊರ ನಡೆದರು.
ಕೊನೆಯ ಮೂರು ಓವರ್ಗಳಲ್ಲಿ ಮೇಲುಗೈ ಸಾಧಿಸಿದ ಕೆಕೆಆರ್ ಬೌಲರುಗಳು ರನ್ಗತಿಯನ್ನು ನಿಯಂತ್ರಿಸಲು ಯಶಸ್ವಿಯಾದರು. ಪರಿಣಾಮ 200 ರನ್ ದಾಟಬೇಕಿದ್ದ ಮುಂಬೈ ಇಂಡಿಯನ್ಸ್ ಸ್ಕೋರ್ 195 ಬಂದು ನಿಂತಿತು. ಕೆಕೆಆರ್ ಪರ ಶಿವಂ ಮಾವಿ 2 ವಿಕೆಟ್ ಪಡೆದರೆ, ನರೈನ್ ಹಾಗೂ ರಸೆಲ್ ತಲಾ ಒಂದು ವಿಕೆಟ್ ಉರುಳಿಸಿದರು.
Published by:
zahir
First published:
September 23, 2020, 9:37 PM IST