IPL

  • associate partner

KKR vs KXIP, IPL 2020 Live Score: ಮಂದೀಪ್ ಸಿಂಗ್ ಭರ್ಜರಿ ಅರ್ಧಶತಕ: ಗೆಲುವಿನತ್ತ ಪಂಜಾಬ್

IPL 2020, Kolkata Knight Riders vs Kings XI Punjab Live Score: ಉಭಯ ತಂಡಗಳು ಇಲ್ಲಿಯವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ 18 ಪಂದ್ಯಗಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ​ ಗೆಲುವಿನ ನಗೆ ಬೀರಿದೆ.

news18-kannada
Updated:October 26, 2020, 10:39 PM IST
KKR vs KXIP, IPL 2020 Live Score: ಮಂದೀಪ್ ಸಿಂಗ್ ಭರ್ಜರಿ ಅರ್ಧಶತಕ: ಗೆಲುವಿನತ್ತ ಪಂಜಾಬ್
KKR vs KXIP Live Score Updates
  • Share this:
ಶಾರ್ಜಾ (ಅ. 26): ಐಪಿಎಲ್​ನಲ್ಲಿಂದು ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಉತ್ತಮ ಮೊತ್ತ ಕಲೆಹಾಕಿದೆ. ಶುಭ್ಮನ್ ಗಿಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕೆಕೆಆರ್ 20 ಓವರ್​ಗಳಲ್ಲಿ 149 ರನ್ ಬಾರಿಸಿದೆ.

ಟಾರ್ಗೆಟ್ ಬೆನ್ನಟ್ಟಿರುವ ಪಂಜಾಬ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದಿರುವ ನಾಯಕ ಕೆ. ಎಲ್ ರಾಹುಲ್ ಹಾಗೂ ಮಂದೀಪ್ ಸಿಂಗ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಆದರೆ, ಈ ಬಾರಿ ರಾಹುಲ್ 25 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆದರು. ಈ ಜೋಡಿ 47 ರನ್​ಗಳ ಕಾಣಿಕೆ ನೀಡಿತು.

ಸದ್ಯ ಕ್ರೀಸ್​ನಲ್ಲಿ ಕ್ರಿಸ್ ಗೇಲ್ ಹಾಗೂ ಮಂದೀಪ್ ಇದ್ದಾರೆ. ಮಂದೀಪ್ ಸಿಂಗ್ ಆಕರ್ಷಕ ಅರ್ಧಶತಕ ಸಿಡಿಸಿ ಬ್ಯಾಟ್ ಬೀಸುತ್ತಿದ್ದು, ತಂಡ ಗೆಲುವಿನತ್ತ ದಾಪುಗಾಲಿಡುತ್ತಿದೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮ್ಯಾಕ್ಸ್​ವೆಲ್​ನ ಮೊದಲ ಓವರ್​ನಲ್ಲಿ ನಿತೀಶ್ ರಾಣ ಸೊನ್ನೆ ಸುತ್ತಿದರೆ, 2ನೇ ಓವರ್​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ರಾಹುಲ್ ತ್ರಿಪಾಠಿ(7) ಕೀಪರ್​​ಗೆ ಕ್ಯಾಚಿತ್ತು ನಿರ್ಗಮಿಸಿದರು. ದಿನೇಶ್ ಕಾರ್ತಿಕ್ ಬಂದ ಬೆನ್ನಲ್ಲೆ ಪೆವಿಲಿಯನ್ ಹಾದಿ ಹಿಡಿದರು.

ಈ ಸಂದರ್ಭ ಒಂದಾದ ನಾಯಕ ಇಯಾನ್ ಮಾರ್ಗನ್ ಹಾಗೂ ಶುಭ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸಿದರು. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡರೂ ಮೈ ಚಳಿ ಬಿಟ್ಟು ಆಡಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.





10 ಓವರ್ ಆಗುವ ಹೊತ್ತಿಗೆ ಇವರಿಬ್ಬರು ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು. ಜೊತೆಗೆ 80 ರನ್​ಗಳ ಅಮೋಘ ಜೊತೆಯಾಟ ಆಡಿದರು. ಆದರೆ, ಸಿಕ್ಸ್​ ಸಿಡಿಸುವಲ್ಲಿ ಎಡವಿದ ಮಾರ್ಗನ್ 25 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ 40 ರನ್​ಗೆ ಔಟ್ ಆದರು. ಸುನೀಲ್ ನರೈನ್(6) ಇಂದಿನ ಪಂದ್ಯದಲ್ಲಿ ನಡೆಯಲಿಲ್ಲ.

ಬಳಿಕ ಬಂದ ಕಮಲೇಶ್ ನಾಗರಕೋಟಿ(6) ಹಾಗೂ ಪ್ಯಾಟ್ ಕಮಿನ್ಸ್​(1) ಬೇಗನೆ ನಿರ್ಗಮಿಸಿದರು. ಆದರೆ ಗಿಲ್ ತಮ್ಮ ಆರ್ಭಟ ಮುಂದುವರೆಸಿ ತಂಡದ ರನ್ ಗತಿಯನ್ನು ಏರಿಸಿದರು. 45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ 57 ರನ್ ಸಿಡಿಸಿದರು. ಲಾಕಿ ಫರ್ಗೂಸನ್ 13 ಎಸೆತಗಳಲ್ಲಿ ಅಜೇಯ 24 ರನ್ ಚಚ್ಚಿದರು.

ಅಂತಿಮವಾಗಿ ಕೆಕೆಆರ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಪಂಜಾಬ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ರವಿ ಬಿಷ್ಣೋಯಿ ಹಾಗೂ ಕ್ರಿಸ್ ಜೋರ್ಡನ್ 2, ಎಂ. ಅಶ್ವಿನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಕ್ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಪಂಜಾಬ್ ಹಾಗೂ ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇಂದುಕೂಡ ಕಣಕ್ಕಿಳಿಯುತ್ತಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಕ್ರಿಸ್ ಗೇಲ್, ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಅರ್ಶ್​ದೀಪ್ ನಾಥ್, ಮೊಹಮ್ಮದ್ ಶಮಿ.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಸುನೀಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ.
Published by: Vinay Bhat
First published: October 26, 2020, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading