IPL

  • associate partner

KKR vs KXIP, IPL 2020: ಮಂದೀಪ್-ಗೇಲ್ ಜೊತೆಯಾಟಕ್ಕೆ ಕೆಕೆಆರ್ ಕಂಗಾಲು: ಪಂಜಾಬ್​ಗೆ ಸತತ 5ನೇ ಜಯ

IPL 2020, Kolkata Knight Riders vs Kings XI Punjab: 2ನೇ ವಿಕೆಟ್​ಗೆ ಮಂದೀಪ್ ಜೊತೆಯಾದ ಕ್ರಿಸ್ ಗೇಲ್ ಅತ್ಯುತ್ತಮ ಬ್ಯಾಟ್ ಬೀಸಿದರು. ಎಲ್ಲೂ ವಿಕೆಟ್​ ಕಳೆದುಕೊಳ್ಳಲು ಅವಕಾಶ ಕೊಡದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು.

news18-kannada
Updated:October 26, 2020, 10:55 PM IST
KKR vs KXIP, IPL 2020: ಮಂದೀಪ್-ಗೇಲ್ ಜೊತೆಯಾಟಕ್ಕೆ ಕೆಕೆಆರ್ ಕಂಗಾಲು: ಪಂಜಾಬ್​ಗೆ ಸತತ 5ನೇ ಜಯ
ಮಂದೀಪ್ - ಕ್ರಿಸ್ ಗೇಲ್
  • Share this:
ಶಾರ್ಜಾ (ಅ. 26): ಐಪಿಎಲ್​ನಲ್ಲಿಂದು ನಡೆದ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಬೌಲರ್​ಗಳ ಸಂಘಟಿತ ಹೋರಾಟ ಮತ್ತು ಮಂದೀಪ್ ಸಿಂಗ್ ಹಾಗೂ ಕ್ರಿಸ್ ಗೇಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ರಾಹುಲ್ ಪಡೆ ಸತತ 5ನೇ ಜಯ ಸಾಧಿಸಿ ಪ್ಲೇ ಆಫ್ ಹಂತಕ್ಕೇರುವ ಸೂಚನೆ ನೀಡಿದೆ. ಇತ್ತ ಕೆಕೆಆರ್ ಸೋಲು-ಗೆಲುವಿಗಳ ಮೆಟ್ಟಿಲಲ್ಲೇ ಸಾಗುತ್ತಿದೆ.

ಕೋಲ್ಕತ್ತಾ ನೀಡಿದ್ದ 150 ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದಿರುವ ನಾಯಕ ಕೆ. ಎಲ್ ರಾಹುಲ್ ಹಾಗೂ ಮಂದೀಪ್ ಸಿಂಗ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಆದರೆ, ಈ ಬಾರಿ ರಾಹುಲ್ 25 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆದರು. ಈ ಜೋಡಿ 47 ರನ್​ಗಳ ಕಾಣಿಕೆ ನೀಡಿತು.

2ನೇ ವಿಕೆಟ್​ಗೆ ಮಂದೀಪ್ ಜೊತೆಯಾದ ಕ್ರಿಸ್ ಗೇಲ್ ಅತ್ಯುತ್ತಮ ಬ್ಯಾಟ್ ಬೀಸಿದರು. ಎಲ್ಲೂ ವಿಕೆಟ್​ ಕಳೆದುಕೊಳ್ಳಲು ಅವಕಾಶ ಕೊಡದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಬರೋಬ್ಬರಿ 100 ರನ್​ಗಳ ಜೊತೆಯಾಟ ಆಡಿತು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು.



ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದ ಕೆಕೆಆರ್ ಸೋಲುಂಡರೆ, ಪಂಜಾಬ್ 18.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ 8 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಮಂದೀಪ್ 54 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 59 ರನ್ ಬಾರಿಸಿದರೆ, ಗೇಲ್ ಕೇವಲ 29 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಿಡಿಸಿ 51 ರನ್ ಚಚ್ಚಿದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮ್ಯಾಕ್ಸ್​ವೆಲ್​ನ ಮೊದಲ ಓವರ್​ನಲ್ಲಿ ನಿತೀಶ್ ರಾಣ ಸೊನ್ನೆ ಸುತ್ತಿದರೆ, 2ನೇ ಓವರ್​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ರಾಹುಲ್ ತ್ರಿಪಾಠಿ(7) ಕೀಪರ್​​ಗೆ ಕ್ಯಾಚಿತ್ತು ನಿರ್ಗಮಿಸಿದರು. ದಿನೇಶ್ ಕಾರ್ತಿಕ್ ಬಂದ ಬೆನ್ನಲ್ಲೆ ಪೆವಿಲಿಯನ್ ಹಾದಿ ಹಿಡಿದರು.

ಈ ಸಂದರ್ಭ ಒಂದಾದ ನಾಯಕ ಇಯಾನ್ ಮಾರ್ಗನ್ ಹಾಗೂ ಶುಭ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸಿದರು. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡರೂ ಮೈ ಚಳಿ ಬಿಟ್ಟು ಆಡಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.





10 ಓವರ್ ಆಗುವ ಹೊತ್ತಿಗೆ ಇವರಿಬ್ಬರು ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು. ಜೊತೆಗೆ 80 ರನ್​ಗಳ ಅಮೋಘ ಜೊತೆಯಾಟ ಆಡಿದರು. ಆದರೆ, ಸಿಕ್ಸ್​ ಸಿಡಿಸುವಲ್ಲಿ ಎಡವಿದ ಮಾರ್ಗನ್ 25 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ 40 ರನ್​ಗೆ ಔಟ್ ಆದರು. ಸುನೀಲ್ ನರೈನ್(6) ಇಂದಿನ ಪಂದ್ಯದಲ್ಲಿ ನಡೆಯಲಿಲ್ಲ.

ಬಳಿಕ ಬಂದ ಕಮಲೇಶ್ ನಾಗರಕೋಟಿ(6) ಹಾಗೂ ಪ್ಯಾಟ್ ಕಮಿನ್ಸ್​(1) ಬೇಗನೆ ನಿರ್ಗಮಿಸಿದರು. ಆದರೆ ಗಿಲ್ ತಮ್ಮ ಆರ್ಭಟ ಮುಂದುವರೆಸಿ ತಂಡದ ರನ್ ಗತಿಯನ್ನು ಏರಿಸಿದರು. 45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ 57 ರನ್ ಸಿಡಿಸಿದರು. ಲಾಕಿ ಫರ್ಗೂಸನ್ 13 ಎಸೆತಗಳಲ್ಲಿ ಅಜೇಯ 24 ರನ್ ಚಚ್ಚಿದರು.

ಅಂತಿಮವಾಗಿ ಕೆಕೆಆರ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಪಂಜಾಬ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ರವಿ ಬಿಷ್ಣೋಯಿ ಹಾಗೂ ಕ್ರಿಸ್ ಜೋರ್ಡನ್ 2, ಎಂ. ಅಶ್ವಿನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಕ್ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 26, 2020, 10:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading