• Home
 • »
 • News
 • »
 • ipl
 • »
 • KKR vs KXIP, IPL 2020: ಗಿಲ್ ಅರ್ಧಶಕದ ನೆರವು: ಪಂಜಾಬ್​ಗೆ 150 ರನ್ಸ್ ಟಾರ್ಗೆಟ್ ನೀಡಿದ ಕೆಕೆಆರ್

KKR vs KXIP, IPL 2020: ಗಿಲ್ ಅರ್ಧಶಕದ ನೆರವು: ಪಂಜಾಬ್​ಗೆ 150 ರನ್ಸ್ ಟಾರ್ಗೆಟ್ ನೀಡಿದ ಕೆಕೆಆರ್

ಶುಭ್ಮನ್ ಗಿಲ್.

ಶುಭ್ಮನ್ ಗಿಲ್.

IPL 2020, Kolkata Knight Riders vs Kings XI Punjab: ಈ ಸಂದರ್ಭ ಒಂದಾದ ನಾಯಕ ಇಯಾನ್ ಮಾರ್ಗನ್ ಹಾಗೂ ಶುಭ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸಿದರು. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡರೂ ಮೈ ಚಳಿ ಬಿಟ್ಟು ಆಡಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.

 • Share this:

  ಶಾರ್ಜಾ (ಅ. 26): ಐಪಿಎಲ್​ನಲ್ಲಿಂದು ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಉತ್ತಮ ಮೊತ್ತ ಕಲೆಹಾಕಿದೆ. ಶುಭ್ಮನ್ ಗಿಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕೆಕೆಆರ್ 20 ಓವರ್​ಗಳಲ್ಲಿ 149 ರನ್ ಬಾರಿಸಿದೆ.


  ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮ್ಯಾಕ್ಸ್​ವೆಲ್​ನ ಮೊದಲ ಓವರ್​ನಲ್ಲಿ ನಿತೀಶ್ ರಾಣ ಸೊನ್ನೆ ಸುತ್ತಿದರೆ, 2ನೇ ಓವರ್​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ರಾಹುಲ್ ತ್ರಿಪಾಠಿ(7) ಕೀಪರ್​​ಗೆ ಕ್ಯಾಚಿತ್ತು ನಿರ್ಗಮಿಸಿದರು. ದಿನೇಶ್ ಕಾರ್ತಿಕ್ ಬಂದ ಬೆನ್ನಲ್ಲೆ ಪೆವಿಲಿಯನ್ ಹಾದಿ ಹಿಡಿದರು.


  ಈ ಸಂದರ್ಭ ಒಂದಾದ ನಾಯಕ ಇಯಾನ್ ಮಾರ್ಗನ್ ಹಾಗೂ ಶುಭ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸಿದರು. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡರೂ ಮೈ ಚಳಿ ಬಿಟ್ಟು ಆಡಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.  10 ಓವರ್ ಆಗುವ ಹೊತ್ತಿಗೆ ಇವರಿಬ್ಬರು ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು. ಜೊತೆಗೆ 80 ರನ್​ಗಳ ಅಮೋಘ ಜೊತೆಯಾಟ ಆಡಿದರು. ಆದರೆ, ಸಿಕ್ಸ್​ ಸಿಡಿಸುವಲ್ಲಿ ಎಡವಿದ ಮಾರ್ಗನ್ 25 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ 40 ರನ್​ಗೆ ಔಟ್ ಆದರು. ಸುನೀಲ್ ನರೈನ್(6) ಇಂದಿನ ಪಂದ್ಯದಲ್ಲಿ ನಡೆಯಲಿಲ್ಲ.


  ಬಳಿಕ ಬಂದ ಕಮಲೇಶ್ ನಾಗರಕೋಟಿ(6) ಹಾಗೂ ಪ್ಯಾಟ್ ಕಮಿನ್ಸ್​(1) ಬೇಗನೆ ನಿರ್ಗಮಿಸಿದರು. ಆದರೆ ಗಿಲ್ ತಮ್ಮ ಆರ್ಭಟ ಮುಂದುವರೆಸಿ ತಂಡದ ರನ್ ಗತಿಯನ್ನು ಏರಿಸಿದರು. 45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ 57 ರನ್ ಸಿಡಿಸಿದರು. ಲಾಕಿ ಫರ್ಗೂಸನ್ 13 ಎಸೆತಗಳಲ್ಲಿ ಅಜೇಯ 24 ರನ್ ಚಚ್ಚಿದರು.


  ಅಂತಿಮವಾಗಿ ಕೆಕೆಆರ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಪಂಜಾಬ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ರವಿ ಬಿಷ್ಣೋಯಿ ಹಾಗೂ ಕ್ರಿಸ್ ಜೋರ್ಡನ್ 2, ಎಂ. ಅಶ್ವಿನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಕ್ ತಲಾ 1 ವಿಕೆಟ್ ಪಡೆದರು.


  ಇಂದಿನ ಪಂದ್ಯಕ್ಕೆ ಪಂಜಾಬ್ ಹಾಗೂ ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇಂದುಕೂಡ ಕಣಕ್ಕಿಳಿಯುತ್ತಿದ್ದಾರೆ.


  ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಕ್ರಿಸ್ ಗೇಲ್, ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಅರ್ಶ್​ದೀಪ್ ನಾಥ್, ಮೊಹಮ್ಮದ್ ಶಮಿ.


  ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಸುನೀಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ.

  Published by:Vinay Bhat
  First published: