• Home
 • »
 • News
 • »
 • ipl
 • »
 • IPL 2020, KKR vs KXIP: ಐಪಿಎಲ್​ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೆಕೆಆರ್-ಪಂಜಾಬ್

IPL 2020, KKR vs KXIP: ಐಪಿಎಲ್​ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೆಕೆಆರ್-ಪಂಜಾಬ್

KKR vs KXIP

KKR vs KXIP

ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲಿನ ರುಚಿ ತೋರಿಸಿತ್ತು. ನಿತೀಶ್ ರಾಣ ಹಾಗೂ ಸುನೀಲ್ ನರೈನ್ ಫಾರ್ಮ್​ ಕಂಡುಕೊಂಡು ಅಬ್ಬರಿಸಿದ್ದರು. ಇದು ಕೆಕೆಆರ್ ತಂಡದಲ್ಲಿ ಮಂದಹಾಸ ಮೂಡಿಸಿದೆ.

 • Share this:

  ಶಾರ್ಜಾ (ಅ. 26): ಐಪಿಎಲ್​ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಪ್ಲೇ ಆಫ್ ಕನಸು ಕಾಣುತ್ತಿರುವ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಕೆ. ಎಲ್ ರಾಹುಲ್ ನೇತೃತ್ವದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಗಳು ಮುಂದಿನ ಹಂತಕ್ಕೇರಲು ಸೆಣೆಸಾಟ ನಡೆಸಲಿವೆ. ಉಭಯ ತಂಡಗಳು ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದು, ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.


  ಪಂಜಾಬ್-ಕೋಲ್ಕತ್ತಾ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದ್ದು, ರಾಹುಲ್ ಪಡೆ 5 ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಕೆಕೆಆರ್​ 6 ಪಂದ್ಯಗಳನ್ನು ಗೆದ್ದು, 4ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ನಾಕ್​ಔಟ್​ ಹಂತಕ್ಕೆ ಅರ್ಹತೆ ಪಡೆಯುವ ತವಕದಲ್ಲಿವೆ.  KL Rahul: ಕೆಎಲ್​​ ರಾಹುಲ್​ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?; ಇಲ್ಲಿದೆ ವಿವರ


  ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲಿನ ರುಚಿ ತೋರಿಸಿತ್ತು. ನಿತೀಶ್ ರಾಣ ಹಾಗೂ ಸುನೀಲ್ ನರೈನ್ ಫಾರ್ಮ್​ ಕಂಡುಕೊಂಡು ಅಬ್ಬರಿಸಿದ್ದರು. ಇದು ಕೆಕೆಆರ್ ತಂಡದಲ್ಲಿ ಮಂದಹಾಸ ಮೂಡಿಸಿದೆ. ಜೊತೆಗೆ ಬ್ಯಾಟಿಂಗ್ ಬಲವನ್ನೂ ಹೆಚ್ಚಿಸಿದೆ.


  ಬೌಲಿಂಗ್​ನಲ್ಲೂ ಕೆಕೆಆರ್ ಎದುರಾಳಿಗೆ ಮಾರಕವಾಗಿ ಪರಿಣಮಿಸಿದೆ. ವರುಣ್ ಚಕ್ರವರ್ತಿ ಸ್ಪಿನ್ ಮೋಡಿ  ಚೆನ್ನಾಗಿ ಕೆಲಸಮಾಡುತ್ತಿದೆ. ನರೈನ್, ಪ್ರಸಿದ್ಧ್ ಕೃಷ್ಣ, ಲೂಕಿ ಫರ್ಗ್ಯುಸನ್, ಕಮಲೇಶ್ ಕೂಡ ಉತ್ತಮ ಸ್ಪೆಲ್ ಮಾಡುತ್ತಿದ್ದಾರೆ.


  ಇತ್ತ ಪಂಜಾಬ್ ತಂಡ ಭರ್ಜರಿ ಕಮ್​ಬ್ಯಾಕ್ ಮಾಡಿದ್ದು ಕಳೆದ ನಾಲ್ಕು ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಬ್ಯಾಟ್ಸ್​ಮನ್​ಗಳು ಕೈಕೊಟ್ಟರೆ ಬೌಲರ್​ಗಳು, ಬೌಲರ್​ಗಳು ಕಳಪೆ ಪ್ರದರ್ಶನ ನೀಡಿದರೆ ಬ್ಯಾಟ್ಸ್​​ಮನ್​ಗಳು ಉತ್ತಮ ಪ್ರದರ್ಶನ ನೀಡುತ್ತಿರುವುದು ಪಂಜಾಬ್ ತಂಡಕ್ಕೆ ಪ್ಲಸ್ ಪಾಯಿಂಟ್. ಕ್ರಿಸ್ ಗೇಲ್ ಅವರ ಬ್ಯಾಟ್​ನಿಂದ ಇನ್ನಷ್ಟು ಸ್ಫೋಟಕ ಇನ್ನಿಂಗ್ಸ್​ ನಿರೀಕ್ಷಿಸಲಾಗಿದೆ. ಮಯಾಂಕ್ ಅಗರ್ವಾಲ್ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇಂದು ಆಡುವ ಅಂದಾಜಿದೆ.


  ಐಪಿಎಲ್​ ಫೈನಲ್​ ನಡೆಯೋದು ಯಾವ ಸ್ಟೇಡಿಯಂನಲ್ಲಿ ಗೊತ್ತಾ?; ಇಲ್ಲಿದೆ ವಿವರ


  ಬೌಲಿಂಗ್​ನಲ್ಲಿ ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಮುರುಗನ್ ಅಶ್ವಿನ್, ಕ್ರಿಸ್ ಜೋರ್ಡನ್, ಅರ್ಶ್​​ದೀಪಪ್ ನಾಥ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಉಭಯ ತಂಡಗಳು ಎರಡೂ ವಿಭಾಗಗಳಲ್ಲಿ ಲಯಕಂಡುಕೊಂಡಿದ್ದು ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.


  ಉಭಯ ತಂಡಗಳು ಇಲ್ಲಿಯವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ 18 ಪಂದ್ಯಗಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ​ ಗೆಲುವಿನ ನಗೆ ಬೀರಿದೆ.

  Published by:Vinay Bhat
  First published: