• ಹೋಂ
 • »
 • ನ್ಯೂಸ್
 • »
 • IPL
 • »
 • KKR vs DC, IPL 2020 Live Score: ಡೆಲ್ಲಿ ದಿಢೀರ್ ಕುಸಿತ: ಗೆಲುವಿನತ್ತ ಕೆಕೆಆರ್

KKR vs DC, IPL 2020 Live Score: ಡೆಲ್ಲಿ ದಿಢೀರ್ ಕುಸಿತ: ಗೆಲುವಿನತ್ತ ಕೆಕೆಆರ್

KKR vs DC, IPL 2020 Live Score

KKR vs DC, IPL 2020 Live Score

IPL 2020, Kolkata Knight Riders vs Delhi Capitals Live Score: ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 25 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​​ ಗೆಲುವು ಸಾಧಿಸಿದ್ರೆ, 12 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜಯದ ನಗೆ ಬೀರಿದೆ.

ಮುಂದೆ ಓದಿ ...
 • Share this:

  ಅಬುಧಾಬಿ (ಅ. 24): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಐಪಿಎಲ್​ನ 42ನೇ ಪಂದ್ಯದಲ್ಲಿಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿದೆ. ನಿತೀಶ್ ರಾಣ ಹಾಗೂ ಸುಲೀನ್ ನರೈನ್ ಅವರ ಆಕರ್ಷಕದ ಅರ್ಧಶತಕದ ಮತ್ತು ಶತಕದ ಜೊತೆಯಾಟದ ನೆರವಿನಿಂದ ಕೆಕೆಆರ್ 20 ಓವರ್​ಗಳಲ್ಲಿ 194 ರನ್ ಬಾರಿಸಿದೆ.


  ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಡೆಲ್ಲಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಅಜಿಂಕ್ಯಾ ರಹಾನೆ ಅವರು ಪ್ಯಾಟ್ ಕಮಿನ್ಸ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರೆ, ಹಿಂದಿನ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಶಿಖರ್ ಧವನ್ ಈ ಬಾರಿ ಕೇವಲ 6 ರನ್​ಗೆ ಬ್ಯಾಟ್ ಕೆಳಗಿಟ್ಟರು.


  ಈ ಸಂದರ್ಭ ಒಂದಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 63 ರನ್​ಗಳ ಕಾಣಿಕೆ ನೀಡಿತು. ಆದರೆ, ಈ 12ನೇ ಓವರ್ ಬೌಲಿಂಗ್​ ಮಾಡಲು ಬಂದ ವರುಣ್ ಚಕ್ರವರ್ತಿ 33 ಎಸೆತಗಳಲ್ಲಿ 27 ರನ್ ಗಳಿಸಿದ್ದ ಪಂತ್ ಅವರನ್ನು ಪೆವಿಲಿಯನ್​ಗೆ ಅಟ್ಟಿದರು.


  ತನ್ನ ಮುಂದಿನ ಓವರ್​ನಲ್ಲೂ ವರುಣ್ ಮ್ಯಾಜಿಕ್ ಮಾಡಿದರು. 5 ಎಸೆತಗಳಲ್ಲಿ 10 ರನ್ ಗಳಿಸಿದ್ದ ಶಿಮ್ರೋನ್ ಹೆಟ್ಮೇರ್ ಅವರನ್ನು ಔಟ್ ಮಾಡಿದರೆ, ಮುಂದಿನ ಎಸೆತದಲ್ಲೇ 38 47 ರನ್ ಬಾರಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ನಿರ್ಗಮಿಸಿದರು. ಮಾರ್ಕಸ್ ಸ್ಟಾಯಿನಿಸ್ ಆಟ 6 ರನ್​ಗೆ ಅಂತ್ಯವಾಯಿತು.


  ಸದ್ಯ ಕ್ರೀಸ್​ನಲ್ಲಿ ಆರ್. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಇದ್ದಾರೆ.


  ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಶುಭ್ಮನ್ ಗಿಲ್ 9 ರನ್​ಗೆ ಔಟ್ ಆದರೆ, ರಾಹುಲ್ ತ್ರಿಪಾಠಿ 13 ರನ್ ಗಳಿಸಿ ಅನ್ರಿಚ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ದಿನೇಶ್ ಕಾರ್ತಿಕ್ ಆಟ 3 ರನ್​ಗೆ ಅಂತ್ಯವಾಯಿತು.


  ಈ ಸಂದರ್ಭ ಒಂದಾದ ನಿತೀಶ್ ರಾಣ ಹಾಗೂ ಸುನೀಲ್ ನರೈನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಸ್ಫೋಟಕ ಆಟವಾಡಿದ ನರೈನ್ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಈ ಜೋಡಿ ಶತಕದ ಜೊತೆಯಾಟ ಆಡಿ ಡೆಲ್ಲಿ ಬೌಲರ್​ಗಳ ಬೆವರಿಳಿಸಿತು.


  ರಾಣ 53 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್ ಬಾರಿಸಿ 81 ರನ್ ಚಚ್ಚಿದರೆ, ನರೈನ್ ಕೇವಲ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಸಿ 64 ರನ್ ಕಲೆಹಾಕಿದರು. ಇಯಾನ್ ಮಾರ್ಗನ್ 17 ರನ್ ಗಳಿಸಿದರು.


  ಅಂತಿಮವಾಗಿ ಕೆಕೆಆರ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಡೆಲ್ಲಿ ಪರ ಆನ್ರಿಚ್, ರಬಾಡ ಹಾಗೂ ಮಾರ್ಕಸ್ ಸ್ಟಾಯಿನಿಸ್ ತಲಾ 2 ವಿಕೆಟ್ ಪಡೆದರು.


  ಇಂದಿನ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಎರಡು ದೊಡ್ಡ ಬದಲಾವಣೆ ಮಾಡಲಾಗಿದೆ. ಕಳಪೆ ಫಾರ್ಮ್​ನಲ್ಲಿರುವ ಪೃಥ್ವಿ ಶಾ ಬದಲು ಅಜಿಂಕ್ಯ ರಹಾನೆ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಡೆನಿಯನ್ ಸಾಮ್ಸ್ ಬದಲು ಆನ್ರಿಚ್ ನಾರ್ಟ್ಜೆ ಆಡುತ್ತಿದ್ದಾರೆ.


  ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.


  ಇತ್ತ ಕೆಕೆಆರ್ ತಂಡದಲ್ಲೂ 2 ಬದಲಾವಣೆ ಮಾಡಲಾಗಿದೆ. ಕುಲ್ದೀಪ್ ಬದಲು ನಾಗರಕೋಟಿ ಮತ್ತು ಬಾಂಟನ್ ಬದಲು ಸುನೀಲ್ ಸುರೈನ್ ಸ್ಥಾನ ಪಡೆದುಕೊಂಡಿದ್ದಾರೆ.


  ಕೆಕೆಆರ್: ಶುಭ್ಮನ್ ಗಿಲ್, ಸುನೀಲ್ ನರೈನ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ .  ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಡೆಲ್ಲಿ ತಂಡ ಗೆದ್ದರೆ ಪ್ಲೇ ಆಫ್ ಹಾದಿ ಖಚಿತವಾಗಲಿದೆ. ಇತ್ತ ಪ್ಲೇ ಆಫ್ ಕನಸಿನಲ್ಲಿರುವ ಕೆಕೆಆರ್​ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಅಯ್ಯರ್ ಪಡೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಮಾರ್ಗನ್​ ತಂಡ 10ರಲ್ಲಿ 5 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಂಡಿದೆ.


  ಡೆಲ್ಲಿ ತಂಡದ ಬಹುತೇಕ ಎಲ್ಲ ಆಟಗಾರರು ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಸಂಘಟಿತ ಹೋರಾಟದ ಮೂಲಕ ಪ್ರಸಕ್ತ ವರ್ಷ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಅನುಭವಿ ಬ್ಯಾಟ್ಸ್​ಮನ್ ಶಿಖರ್ ಧವನ್​ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಕಳೆದ ಸಿಎಸ್​ಕೆ ಹಾಗೂ ಪಂಜಾಬ್ ವಿರುದ್ಧ ಶತಕ ಸಿಡಿಸಿ ಆರ್ಭಟಿಸಿದ್ದರು.


  ವೇಗಿ ಲೂಕಿ ಫರ್ಗ್ಯುಸನ್​ ಕೆಕೆಆರ್​ಗೆ ಹೊಸ ಭರವಸೆ ಮೂಡಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಕಮಲೇಶ್‌ ನಾಗರಕೋಟಿ, ವರುಣ್‌ ಚಕ್ರವರ್ತಿ, ಪ್ರಸೀದ್ ಕೃಷ್ಣ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.


  ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 25 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​​ ಗೆಲುವು ಸಾಧಿಸಿದ್ರೆ, 12 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜಯದ ನಗೆ ಬೀರಿದೆ.

  Published by:Vinay Bhat
  First published: