MS Dhoni: ಗೆಲ್ಲ ಬಹುದಾಗಿದ್ದ ಪಂದ್ಯವನ್ನು ಚೆನ್ನೈ ಸೋತಿದ್ದು ಯಾಕೆ?: ಧೋನಿ ಏನಂದ್ರು ಗೊತ್ತೇ?

ಮಧ್ಯಮ ಓವರ್‌ಗಳಲ್ಲಿ ಕೆಕೆಆರ್ ಮಾಡಿದ 2-3 ಓವರ್‌ಗಳು ಒಳ್ಳೆಯ ಓವರ್‌ಗಳಾಗಿದ್ದವು. ಅಲ್ಲಿ ನಾವು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಜೊತೆಗೆ 2-3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು - ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

 • Share this:
  ನಿನ್ನೆ ಬುಧವಾರ ಐಪಿಎಲ್​ನಲ್ಲಿ ನಡೆದ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಗೆಲ್ಲ ಬಹುದಾಗಿದ್ದ ಸುಲಭ ಮ್ಯಾಚ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡ ಸೋತಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೆಕೆಆರ್, ರಾಹುಲ್ ತ್ರಿಪಾಠಿ ಅವರ 81 (51 ಎಸೆತ) ರನ್ ಕೊಡುಗೆಯೊಂದಿಗೆ 20 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 167 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆ, ಶೇನ್ ವಾಟ್ಸನ್ 50, ಅಂಬಾಟಿ ರಾಯುಡು 30 ಗಮನಾರ್ಹ ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಬಾರಿಸಿ ಕೇವಲ 10 ರನ್‌ನಿಂದ ಸೋತಿತು.

  ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಬ್ಯಾಟ್ಸ್​ಮನ್​ಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಂದ್ಯದಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ನಿರಾಸೆಗೊಳಿಸಿದರು ಎಂದು ಹೇಳಿದ್ದಾರೆ.

  SRH vs KXIP: ಗೆಲುವಿಗಾಗಿ ಹಾತೊರೆಯುತ್ತಿರುವ ಪಂಜಾಬ್-ಹೈದರಾಬಾದ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ!

  "ನಮ್ಮ ತಂಡದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು. ಆದರೆ, ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳಿಗೆ ನಿರಾಸೆ ಉಂಟುಮಾಡಿದರು. ಇಂತಹ ಪಂದ್ಯಗಳಲ್ಲಿ ಪ್ರಮುಖವಾಗಿ ಸ್ಟ್ರೈಕ್‌ ರೊಟೇಷನ್ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೊನೆಯ ಕೆಲ ಓವರ್‌ಗಳಲ್ಲಿ ನಮಗೆ ಬೌಂಡರಿಗಳು ಕಡಿಮೆ ಬಂದವು. ಅಂತಿಮ ಹಂತದಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್‌ ಮಾಡಬೇಕಿತ್ತು" ಎಂದು ಎಂಎಸ್ ಧೋನಿ ಹೇಳಿದ್ದಾರೆ.

  "ಮಧ್ಯಮ ಓವರ್‌ಗಳಲ್ಲಿ ಕೆಕೆಆರ್ ಮಾಡಿದ 2-3 ಓವರ್‌ಗಳು ಒಳ್ಳೆಯ ಓವರ್‌ಗಳಾಗಿದ್ದವು. ಅಲ್ಲಿ ನಾವು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಜೊತೆಗೆ 2-3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು. ವಿಕೆಟ್ ಕಳೆದುಕೊಳ್ಳದೆ ಒಳ್ಳೆಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೆ ಪಂದ್ಯ ಗೆಲ್ಲುತ್ತಿದ್ದೆವು. ಮೊದಲ 5-6 ಓವರ್‌ಗಳಲ್ಲಿ ನಾವು ತುಂಬಾ ಎಚ್ಚರಿಕೆಯಿಂದಿರಬೇಕು" ಎಂಬುದು ಧೋನಿ ಮಾತು.

  ಚಯ್ಯಾ ಚಯ್ಯಾ ಹಾಡಿಗೆ ಸಖತ್​ ಹಾಟ್​ ಆಗಿ ಸ್ಟೆಪ್​ ಹಾಕಿದ ಚಹಾಲ್​ ಭಾವಿ ಪತ್ನಿ ಧನಶ್ರೀ

  ಇನ್ನೂ "ಸ್ಯಾಮ್​ ಕುರ್ರನ್ ನಿಜವಾಗಿಯೂ ಉತ್ತಮ ಪ್ರದರ್ಶನ ತೋರಿದರು. ಕೆಕೆಆರ್​ ತಂಡವನ್ನು 160 ರನ್​ಗೆ ಕಟ್ಟಿಹಾಕಲು ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ, ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಯಾರಾದರೂ ಬ್ಯಾಕ್​ ಆಫ್​ ಲೆಂತ್ ಬೌಲಿಂಗ್ ಮಾಡಿದರೆ, ಬೌಂಡರಿ ಬಾರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು" ಎಂದು ಹೇಳಿದರು.

  ಕೆಕೆಆರ್ ವಿರುದ್ಧದ ಸೋಲಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಧೋನಿ ಪಡೆ ತನ್ನ ಮುಂದಿನ ಪಂದ್ಯವನ್ನು ಅ. 10 ರಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.
  Published by:Vinay Bhat
  First published: