CSK vs KKR: ಕಿಂಗ್ಸ್ vs ನೈಟ್​ ರೈಡರ್ಸ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ

KKR vs CSK Head to head record:2014 ರ ಐಪಿಎಲ್​ನಲ್ಲಿ ಕೆಕೆಆರ್-ಸಿಎಸ್​ಕೆ ಮುಖಾಮುಖಿ ಆಗಿರಲಿಲ್ಲ. ಹೀಗಾಗಿ ಯುಎಇ ಪಿಚ್​ನಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

CSK vs KKR

CSK vs KKR

 • Share this:
  ಐಪಿಎಲ್​ನಲ್ಲಿ ಇಂದು ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ 4 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ರೆ, ಧೋನಿ ಸಾರಥ್ಯದ ಸೂಪರ್ ಕಿಂಗ್ಸ್ 5 ರಲ್ಲಿ ಮೂರರಲ್ಲಿ ಸೋಲು ಕಂಡಿದೆ. ಹಾಗೆಯೇ ಅಂಕಪಟ್ಟಿಯಲ್ಲಿ ಕೊಲ್ಕತ್ತಾ 4ನೇ ಸ್ಥಾನವನ್ನು ಅಲಂಕರಿಸಿದರೆ, ಚೆನ್ನೈ 5ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದರೆ ಧೋನಿ ಪಡೆಯು ಮತ್ತೊಂದು ಅಂಕ ಮೇಲೇರಲಿದೆ. ಹಾಗೆಯೇ ಡೆಲ್ಲಿ ವಿರುದ್ದ ಕಳೆದ ಪಂದ್ಯದಲ್ಲಿ ಸೋತಿರುವ ಕೆಕೆಆರ್ ಈ ಪಂದ್ಯವನ್ನು ಗೆಲ್ಲುವ ಮೂಲಕ ಟಾಪ್ 4 ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿದೆ.

  ಉಭಯ ತಂಡಗಳು ಐಪಿಎಲ್​ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 13 ಬಾರಿ ವಿಜಯ ಸಾಧಿಸಿದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ 7 ಬಾರಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಸೀಸನ್​ನ 2 ಪಂದ್ಯದಲ್ಲೂ ಸಿಎಸ್​ಕೆ ವಿರುದ್ಧ ಕೆಕೆಆರ್ ಮುಗ್ಗರಿಸಿತ್ತು. ಈ ಎರಡೂ ಪಂದ್ಯಗಳಲ್ಲೂ ಚೆನ್ನೈ ಸ್ಪಿನ್ ಮಾಂತ್ರಿಕ ಇಮ್ರಾನ್ ತಾಹಿರ್ 2 ಮತ್ತು 4 ವಿಕೆಟ್ ಉರುಳಿಸಿ ಮಿಂಚಿದ್ದರು.

  ಒಟ್ಟಾರೆಯಾಗಿ, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದರೆ, ಕೋಲ್ಕತಾ ಎರಡು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಅದರಲ್ಲೂ 2012 ರ ಫೈನಲ್‌ನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಕೆಕೆಆರ್ ಚೆನ್ನೈ ನೀಡಿದ 191 ರನ್​ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿತು.

  ಇನ್ನು ಆಟಗಾರರ ಪ್ರದರ್ಶನವನ್ನು ಗಮನಿಸುವುದಾದ್ರೆ, ಸಿಎಸ್​ಕೆ ನಾಯಕ ಎಂಎಸ್ ಧೋನಿ ಕೆಕೆಆರ್ ಬೌಲರ್‌ಗಳ ವಿರುದ್ಧ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೊಲ್ಕತ್ತಾ ವಿರುದ್ಧ ಧೋನಿ ಇದುವರೆಗೆ 52.33 ಸರಾಸರಿಯಲ್ಲಿ 474 ರನ್ ಕಲೆಹಾಕಿದ್ದಾರೆ. ಹಾಗೆಯೇ ಕೆಕೆಆರ್ ಸ್ಪಿನ್ನರ್ ಸುನೀಲ್ ನರೈನ್ ಸಿಎಸ್​ಕೆ ವಿರುದ್ಧ 11 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದಾರೆ.

  ಇನ್ನು ಅಬುಧಾಬಿಯಲ್ಲಿ ಇದೇ ಮೊದಲ ಬಾರಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. 2014 ರ ಐಪಿಎಲ್​ನಲ್ಲಿ ಕೆಕೆಆರ್-ಸಿಎಸ್​ಕೆ ಮುಖಾಮುಖಿ ಆಗಿರಲಿಲ್ಲ. ಹೀಗಾಗಿ ಯುಎಇ ಪಿಚ್​ನಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಇನ್ನು ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ ಸಾಧಿಸಿದ್ರೂ, ಯುಎಇ ಪಿಚ್​ನಲ್ಲಿ ಸಿಎಸ್​ಕೆ ಪ್ರದರ್ಶನ ಹೇಳಿಕೊಳ್ಳುವಂತಹ ಮಟ್ಟದಲ್ಲಿಲ್ಲ ಎಂಬುದಕ್ಕೆ ಪ್ರಸ್ತುತ ಅಂಕ ಪಟ್ಟಿಯೇ ಸಾಕ್ಷಿ. ಹೀಗಾಗಿ ಎರಡು ತಂಡಗಳನ್ನು ಸಮಬಲ ಹೊಂದಿದೆ ಎಂದೇ ಹೇಳಬಹುದು.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್
  Published by:zahir
  First published: